ರೈಲ್ವೆ ನಿಲ್ದಾಣದಲ್ಲಿ ಕರೋನಾವೈರಸ್ ಹರಡುವುದಿಲ್ಲವೇ? ಇಲ್ಲಿದೆ ವಿಶೇಷ ಮಾಹಿತಿ
ಭಾರತೀಯ ರೈಲ್ವೆ ಪ್ರಯಾಗರಾಜ್ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣದಂತಹ ಸೌಲಭ್ಯವನ್ನು ಒದಗಿಸಲು ಪ್ರಾರಂಭಿಸಿದೆ. ಈಗ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸಿದ ನಂತರ ಮೊಬೈಲ್‌ಗೆ ಕ್ಯೂಆರ್ ಕೋಡ್ ಕಳುಹಿಸಲಾಗುತ್ತಿದೆ.
ನವದೆಹಲಿ: ಈಗ ನೀವು ರೈಲ್ವೆ ನಿಲ್ದಾಣಗಳಲ್ಲಿ ಕರೋನಾವೈರಸ್ (Coronavirus) ಗೆ ಹೆದರಬೇಕಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದಂತಹ ಭದ್ರತೆಯನ್ನು ಒದಗಿಸಲಾಗುತ್ತಿದೆ. ಯಾರೊಂದಿಗೂ (ಸಂಪರ್ಕವಿಲ್ಲದ) ಸಂಪರ್ಕಕ್ಕೆ ಬಾರದೆ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ. ಇಂತಹ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಪ್ರಯಾಣಿಕರಲ್ಲಿ ಕರೋನಾ ವೈರಸ್ ಹರಡುವ ಸಾಧ್ಯತೆ ಬಹಳ ಕಡಿಮೆಯಾಗಲಿದೆ.
ಪ್ರಯಾಗರಾಜ್‌ನಿಂದ ಹೊಸ ವ್ಯವಸ್ಥೆ ಪ್ರಾರಂಭ:
ಭಾರತೀಯ ರೈಲ್ವೆ (Indian Railways) ಪ್ರಯಾಗರಾಜ್ ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣದಂತಹ ಸೌಲಭ್ಯವನ್ನು ಒದಗಿಸಲು ಪ್ರಾರಂಭಿಸಿದೆ. ಈಗ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸಿದ ನಂತರ ಮೊಬೈಲ್‌ಗೆ ಕ್ಯೂಆರ್ ಕೋಡ್ ಕಳುಹಿಸಲಾಗುತ್ತಿದೆ. ಪ್ರಯಾಣಿಕರು ಟಿಕೆಟ್ ಕೌಂಟರ್‌ನಲ್ಲಿ ಈ ಕ್ಯೂಆರ್ ಕೋಡ್ ತೋರಿಸಬೇಕಾಗಿದೆ. ಮೀಸಲಾತಿ ಕೌಂಟರ್ ಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಬೋರ್ಡಿಂಗ್ ಟಿಕೆಟ್ ನೀಡುತ್ತಿವೆ. ಪ್ರಯಾಣಿಕರು ತಮ್ಮ ಮುಂದೆ ಇರಿಸಿದ ಯಂತ್ರದಿಂದ ಬೋರ್ಡಿಂಗ್ ಪಾಸ್ ಅನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಪ್ರಯಾಣಿಕರು ಮತ್ತು ರೈಲ್ವೆ ನೌಕರರ ನಡುವಿನ ಸಂಪರ್ಕ ಕಡಿಮೆಯಾಗಲಿದೆ. ಇಲ್ಲಿ ಟಿಕೆಟ್ ಕೌಂಟರ್ ಮತ್ತು ಪ್ರಯಾಣಿಕರು ಯಾವುದೇ ಟಿಕೆಟ್ ಅಥವಾ ಡಾಕ್ಯುಮೆಂಟ್ ಅನ್ನು ಸ್ಪರ್ಶಿಸಬೇಕಾಗಿಲ್ಲ.
ರೈಲ್ವೆ ಇಲಾಖೆಯಿಂದ ಹೊಸ ರೈಲ್ವೆ ಸೇವೆಗಳ ಪ್ರಾರಂಭಕ್ಕೆ ಸಿದ್ದತೆ
ವೆಬ್ ಕ್ಯಾಮೆರಾ ಸಹಾಯ:
ಪ್ರಯಾಣಿಕರನ್ನು ಸರಿಯಾಗಿ ಗುರುತಿಸಲು ಟಿಕೆಟ್ ಕೌಂಟರ್ ಬಳಿ ವೆಬ್ ಕ್ಯಾಮೆರಾವನ್ನು ಸಹ ಸ್ಥಾಪಿಸಲಾಗಿದೆ. ಟಿಕೆಟ್ ವೆಬ್ ಕ್ಯಾಮೆರಾದ ಸಹಾಯದಿಂದ ಪ್ರಯಾಣಿಕರ ಗುರುತು ಮತ್ತು ಮುಖವನ್ನು ಪರಿಶೀಲಿಸಬಹುದು. ಅಲ್ಲದೆ ಟಿಕೆಟ್ ಕೌಂಟರ್ ಬಳಿ ಪರದೆಯನ್ನು ಇರಿಸಲಾಗಿದೆ. ಪ್ರಯಾಣಿಕರು ಅದರ ಸಹಾಯದಿಂದ ತಮ್ಮ ಪ್ರಯಾಣದ ವಿವರಗಳನ್ನು ನೋಡಬಹುದು.
ವಿಮಾನದಂತಹ ಸೌಲಭ್ಯಗಳುಳ್ಳ ಖಾಸಗಿ ರೈಲು ಪ್ರಯಾಣಿಕರಿಗೆ ಯಾವಾಗ ಲಭ್ಯ? ಇಲ್ಲಿದೆ ಮಾಹಿತಿ
ದೇಶಾದ್ಯಂತ ಲಾಕ್‌ಡೌನ್ ಸಮಯದಲ್ಲಿ ರೈಲ್ವೆ ಇಲಾಖೆ ಕೂಡ ರೈಲುಗಳನ್ನು ಸ್ಥಗಿತಗೊಳಿಸಿತ್ತು. ಮೇ 12 ರಿಂದ ಭಾರತೀಯ ರೈಲ್ವೆ 30 ರೈಲುಗಳನ್ನು ನಿರ್ವಹಿಸುತ್ತಿದೆ. ಇದಲ್ಲದೆ 200 ವಿಶೇಷ ರೈಲುಗಳನ್ನು ಸಹ ನಡೆಸಲಾಗುತ್ತಿದೆ.