Indian Railways:ರೈಲು ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ರೈಲ್ವೆ ಪ್ರಯಾಣಿಕರು ಇನ್ಮುಂದೆ ಟಿಕೆಟ್ ಕಾಯ್ದಿರಿಸುವಾಗ ತಮ್ಮ ಮೊಬೈಲ್ ಸಂಖ್ಯೆಯನ್ನು ರಿಜಿಸ್ಟರ್ ಸಂಪರ್ಕ ಸಂಖ್ಯೆಯಲ್ಲಿ ನಮೂದಿಸಬೇಕಾಗಲಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರೈಲು ಇಲಾಖೆ (Indian Railways) ಈ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಇದ್ನನ್ನು ಓದಿ- ಈಗ ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ರೈಲಿನ PNR ಸ್ಥಿತಿ, ಟ್ರೈನ್ ಲೈವ್ ಲೋಕೇಶನ್


ಕೆಲವು ರೈಲು ಪ್ರಯಾಣಿಕರು ಏಜೆಂಟರು ಅಥವಾ ಇತರ ಜನರ ಖಾತೆಯಿಂದ ಟಿಕೆಟ್ ಬುಕ್ ಮಾಡುತ್ತಾರೆ ಮತ್ತು ಇದರಿಂದಾಗಿ ಅವರ ಸಂಪರ್ಕ ಸಂಖ್ಯೆ ಪಿಆರ್ಎಸ್ ವ್ಯವಸ್ಥೆಯಲ್ಲಿ ದಾಖಲಾಗುವುದಿಲ್ಲ ಎಂದು ರೈಲ್ವೇಸ್ ಹೇಳಿದೆ. ಇದಕ್ಕಾಗಿ, ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಇದ್ದರೆ ಅಥವಾ ರೈಲು ರದ್ದಾಗಿದ್ದರೆ, ಅದರ ಮಾಹಿತಿಯ ಎಸ್‌ಎಂಎಸ್ ಪ್ರಯಾಣಿಕರಿಗೆ ತನ್ನ ಮೊಬೈಲ್ ಫೋನ್‌ನಲ್ಲಿ ಲಭ್ಯವಾಗುವುದಿಲ್ಲ ಎಂದು ಇಲಾಖೆ ಹೇಳಿದೆ.


ಇದನ್ನು ಓದಿ-Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು


"ಎಲ್ಲಾ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಮಯದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಸಂಖ್ಯೆ ರಿಜಿಸ್ಟರ್ ನಲ್ಲಿ ನೋಂದಾಯಿಸುವಂತೆ  ಕೋರಲಾಗಿದೆ. ಇದರಿಂದಾಗಿ ಅವರು ರೈಲ್ವೆ ಕಡೆಯಿಂದ ರೈಲು ವೇಳಾಪಟ್ಟಿಯಲ್ಲಿನ ಯಾವುದೇ ಬದಲಾವಣೆ ಆದ ಸಂದರ್ಭದಲ್ಲಿ ಮಾಹಿತಿ ಪಡೆಯಬಹುದು. ಇದರಿಂದ ರೈಲು ಪ್ರಯಾಣಿಕರು ಪ್ರಯೋಜನ ಪಡೆಯಲಿದ್ದಾರೆ" ಎಂದು ಇಲಾಖೆ ತನ್ನ ಹೇಳಿಕೆಯಲ್ಲಿ ಹೇಳಿದೆ.


ಇದನ್ನು ಓದಿ- ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಪ್ರಮುಖ ಬದಲಾವಣೆ


ಆನ್ಲೈನ್ ಟಿಕೆಟ್ ಬುಕಿಂಗ್ ಹೇಗೆ ಮಾಡಬೇಕು?
ನೀವು IRCTC ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು IRCTCಯಲ್ಲಿ ಖಾತೆ ಹೊಂದಿರಬೇಕು. ನಿಮ್ಮ ಅಧಿಕೃತ ಖಾತೆಯ ಮೂಲಕ ಲಾಗಿನ್ ಮಾಡಿ ನೀವು ರೇಲ್ವೆ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಖಾತೆ ತೆರೆಯಲು ನೀವು IRCTC ಅಧಿಕೃತ ವೆಬ್ ಸೈಟ್ ಆಗಿರುವ www.irctc.co.in ಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.