ನವದೆಹಲಿ: ಆಗಾಗ್ಗೆ ಪ್ರಯಾಣಿಕರು ರೈಲಿಗೆ ಸಂಬಂಧಿಸಿದ ವಿವಿಧ ಮಾಹಿತಿಗಾಗಿ ವಿಭಿನ್ನ ವೆಬ್ಸೈಟ್ಗಳನ್ನು ಬಳಸಬೇಕಾಗುತ್ತದೆ. ಆದರೆ ಮುಂಬೈನ ಸ್ಟಾರ್ಟ್ಅಪ್ ಆಗಿರುವ ರೈಲೋಫಿ ತನ್ನ ಅಪ್ಲಿಕೇಶನ್ನಲ್ಲಿ ಒಂದು ವೈಶಿಷ್ಟ್ಯವನ್ನು ಸೇರಿಸಿದ್ದು, ಇದರ ಸಹಾಯದಿಂದ ಜನರು ಪಿಎನ್ಆರ್ ಸ್ಥಿತಿ, ರೈಲು ಪ್ರಯಾಣದ ಮಾಹಿತಿ, ರೈಲಿನ ಲೈವ್ ಲೋಕೇಶನ್ ಸೇರಿದಂತೆ ಅನೇಕ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.
ರೈಲೋಫಿಯ (Railofy) ಹೊಸ ವೈಶಿಷ್ಟ್ಯವನ್ನು ಆನಂದಿಸಲು ಬಳಕೆದಾರರು ತಮ್ಮ 10 ಅಂಕಿಯ ಪಿಎನ್ಆರ್ ಸಂಖ್ಯೆಯನ್ನು ವಾಟ್ಸಾಪ್ ಸಂಖ್ಯೆಯಲ್ಲಿ ನಮೂದಿಸಬೇಕು. ಅದರ ನಂತರ ಲೈವ್ ಸ್ಟೇಷನ್ ಅಲರ್ಟ್ಗಳು ಸೇರಿದಂತೆ ಹಲವು ರೀತಿಯ ಮಾಹಿತಿಗಳು ಪ್ರಯಾಣಿಕರಿಗೆ ವಾಟ್ಸಾಪ್ನಲ್ಲಿ ಲಭ್ಯವಿರುತ್ತವೆ. ಆದ್ದರಿಂದ ಈ ಅಪ್ಲಿಕೇಶನ್ಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...
ಈ ವಾಟ್ಸಾಪ್ ಸಂಖ್ಯೆಯಲ್ಲಿ ಪಿಎನ್ಆರ್ ಹಂಚಿಕೊಳ್ಳಬೇಕಾಗಿದೆ :
ಈ ವೈಶಿಷ್ಟ್ಯದ ಲಾಭ ಪಡೆಯಲು, ಪ್ರಯಾಣಿಕರು ತಮ್ಮ ಪಿಎನ್ಆರ್ ಸಂಖ್ಯೆಯನ್ನು ವಾಟ್ಸಾಪ್ (Whatsapp) ಸಂಖ್ಯೆ +91 98811 93322 ಯಲ್ಲಿ ನಮೂದಿಸಬೇಕು. ಅದರ ನಂತರ ಅವರು ತಮ್ಮ ಟಿಕೆಟ್ ಇನ್ನೂ ವೈಟಿಂಗ್ ಲಿಸ್ಟ್ ನಲ್ಲಿ ಇದೆಯೇ ಅಥವಾ ದೃಢೀಕರಿಸಲ್ಪಟ್ಟಿದೆಯೆ ಎಂದು ಪಿಎನ್ಆರ್ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದರೊಂದಿಗೆ ಆರ್ಎಸಿ ಇದ್ದರೆ ಅದರ ಬಗ್ಗೆ ಕೂಡ ಇಲ್ಲಿ ಮಾಹಿತಿ ಕಂಡುಬರುತ್ತದೆ. ರೈಲಿನ ಲೈವ್ ಲೋಕೇಶನ್ ಒಳಗೊಂಡಂತೆ ಒಂದೊಮ್ಮೆ ರೈಲು ತಡವಾದರೆ ಅದರ ಮಾಹಿತಿ ಕೂಡ ವಾಟ್ಸಾಪ್ನಲ್ಲಿ ಲಭ್ಯವಿರುತ್ತದೆ.
IRCTCಯಿಂದ ತತ್ಕಾಲ್ ಕನ್ಫರ್ಮ್ ಟಿಕೆಟ್ ಬೇಕಿದ್ದರೆ ಈ 8 ಟಿಪ್ಸ್ ಟ್ರೈ ಮಾಡಿ
ಅಪ್ಲಿಕೇಶನ್ನೊಂದಿಗೆ ಸುಲಭವಾಗಲಿದೆ ಪ್ರಯಾಣ :
ರೈಲೋಫಿ ಪ್ರಕಾರ ಸುಮಾರು 60 ಲಕ್ಷ ಪ್ರಯಾಣಿಕರು ಪ್ರತಿ ತಿಂಗಳು ಗೂಗಲ್ನಲ್ಲಿ ಐಆರ್ಸಿಟಿಸಿ (IRCTC), ರೈಲು ನಿಲ್ದಾಣದ ಮಾಹಿತಿಯನ್ನು ಗೂಗಲ್ನಲ್ಲಿ ಹುಡುಕುತ್ತಾರೆ. ಆದರೆ ಹಲವು ಬಾರಿ ಅವರಿಗೆ ಅಗತ್ಯವಾದ ನಿರ್ದಿಷ್ಟ ಮಾಹಿತಿ ಲಭ್ಯವಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರೈಲೋಫಿಯ ಹೊಸ ವೈಶಿಷ್ಟ್ಯವು ತುಂಬಾ ಉಪಯುಕ್ತವೆಂದು ಸಾಬೀತುಪಡಿಸುತ್ತದೆ. ಇದನ್ನು ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭಿಸಲಾಯಿತು. ಇದು ಬಳಕೆದಾರರ ಸಮಯವನ್ನು ಉಳಿಸುವುದಲ್ಲದೆ ಪ್ರಯಾಣಕ್ಕೆ ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಯಲ್ಲಿ ಮಾತ್ರ ಸಿಗಲಿದೆ ಚಹಾ
ಆ್ಯಪ್ನ ಸಹಾಯದಿಂದ ಪ್ರಯಾಣಿಕರು ಟಿಕೆಟ್ಗಳನ್ನು ಕಡಿತಗೊಳಿಸುವಾಗ ಎಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ ಎಂಬುದರ ಜೊತೆಗೆ ಪ್ರಯಾಣದ ಇತರ ಆಯ್ಕೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು ಎಂದು ರೈಲೋಫಿ ಮಾಹಿತಿ ನೀಡಿದೆ. ಇದರೊಂದಿಗೆ ಪ್ರಯಾಣದಲ್ಲಿ ತೆಗೆದುಕೊಂಡ ಸಮಯದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.