Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು

ಕರೋನಾವೈರಸ್‌ನಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತು. ಆದರೆ ಈಗ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ.  

Last Updated : Nov 2, 2020, 10:02 AM IST
  • ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದ ಪ್ರಯಾಣಿಕರಿಗೆ ದಂಡ ಮತ್ತು ಜೈಲು ಶಿಕ್ಷೆ
  • ರೈಲ್ವೆ ಕಾಯ್ದೆ -1989ರ ಅಡಿಯಲ್ಲಿ ಸೆಕ್ಷನ್ 153ರಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಬಹುದು.
Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು title=

ಭೋಪಾಲ್:  ಕರೋನಾವೈರಸ್‌ನಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆ (Indian Railways) ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತು. ಆದರೆ ಈಗ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಮಧ್ಯೆ ಪ್ರಯಾಣಿಕರ ಹಿತದೃಷ್ಟಿಯಿಂದ ರೈಲ್ವೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಕೋವಿಡ್ -19 (Covid 19) ಸಂಬಂಧಿತ ನಿಯಮಗಳನ್ನು ಪಾಲಿಸದೇ ಇರುವವರಿಗೆ ಭಾರೀ ತೊಂದರೆ ಎದುರಾಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ. 

ಹೌದು ರೈಲ್ವೆ ಹೊರಡಿಸಿರುವ ಹೊಸ ಮಾರ್ಗಸೂಚಿ ಅನ್ವಯ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲಿನಲ್ಲಿ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಇಲ್ಲದಿದ್ದರೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.  ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್‌ನಲ್ಲಿ ಸಾರ್ವಜನಿಕರಿಗೆ ಕರೋನಾ ಸೋಂಕು ಹರಡದೇ ಇರುವಂತೆ ನಿಗಾ ವಹಿಸಲು ರೈಲ್ವೆ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.

RRB Level-1 Recruitment 2020: ಅಪ್ರೆಂಟಿಸ್‌ಗಳಿಗೆ 20% ಹುದ್ದೆಗಳನ್ನು ಕಾಯ್ದಿರಿಸಿದ ರೈಲ್ವೆ

ಈ ನಿಯಮಗಳನ್ನು ಪಾಲಿಸದಿದ್ದರೆ ಜೈಲು:-
- ರೈಲು ಅಥವಾ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ (Mask) ಧರಿಸದಿದ್ದರೆ
- ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ
- ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಅಥವಾ ಮಾದರಿಯನ್ನು ನೀಡಿದ ನಂತರ ವರದಿ ಬರುವ ಮೊದಲು ರೈಲಿನಲ್ಲಿ ಪ್ರಯಾಣಿಸಿದರೆ
- ಸ್ಟೇಷನ್, ರೈಲಿನೊಳಗೆ ಉಗುಳುವುದು ಕಂಡುಬಂದರೆ
- ಕೋವಿಡ್ -19 ಹರಡುವುದನ್ನು ತಡೆಯಲು ನೀಡಲಾದ ಸೂಚನೆಗಳನ್ನು ಅನುಸರಿಸಲು ವಿಫಲವಾದರೆ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ.

ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಪ್ರಮುಖ ಬದಲಾವಣೆ

ರೈಲ್ವೆ ಕಾಯ್ದೆ -1989ರ ಅಡಿಯಲ್ಲಿ ಸೆಕ್ಷನ್ 153ರಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಬಹುದು. ಪ್ರಾಣಹಾನಿ ಮತ್ತು ರೈಲ್ವೆ ಆಸ್ತಿಪಾಸ್ತಿಗೆ ಹಾನಿಯಾದ ಪ್ರಕರಣಗಳನ್ನು ಈ ವಿಭಾಗದಲ್ಲಿ ದಾಖಲಿಸಲಾಗುತ್ತದೆ. ಈಗ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದ ಪ್ರಯಾಣಿಕರಿಗೆ ಈ ವಿಭಾಗದ ಅಡಿಯಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

Trending News