ಇಂಡೋ-ಚೀನಾ ಗಡಿ ವಿವಾದದ ಮಧ್ಯೆ ಕೇಂದ್ರದಿಂದ ಮಹತ್ವದ ಆದೇಶ
ಲಡಾಖ್ ಗಡಿಯಲ್ಲಿರುವ ಭಾರತೀಯ ಸೈನ್ಯದ ಬಗ್ಗೆ ಚೀನಾ ವರ್ತನೆ ಗಮನದಲ್ಲಿಟ್ಟುಕೊಂಡು ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ನವದೆಹಲಿ: ಲಡಾಖ್ ಗಡಿಯಲ್ಲಿರುವ ಭಾರತೀಯ ಸೈನಿಕರ ಬಗ್ಗೆ ಭಾರತ-ಚೀನಾ ಗಡಿ (India-China border) ವಿವಾದದ ಮನೋಭಾವವನ್ನು ಗಮನಿಸಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ಮೂಲಗಳ ಪ್ರಕಾರ ಬಿಎಸ್ಎನ್ಎಲ್ (BSNL)ನ ನಾಲ್ಕು ಜಿ (4 G) ಸೇವೆಗಳಲ್ಲಿ ಚೀನೀ ಉಪಕರಣಗಳ ಬಳಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ. ಭದ್ರತಾ ಕಾರಣಗಳಿಗಾಗಿ ಚೀನಾದ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಲು ಸಚಿವಾಲಯವು ಬಿಎಸ್‌ಎನ್‌ಎಲ್‌ಗೆ ಸೂಚನೆ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ತೀವ್ರಗೊಂಡ Boycott Chinese products ಕೂಗು, ದೇಶವ್ಯಾಪಿ CAIT ಅಭಿಯಾನ
ಮೂಲಗಳ ಪ್ರಕಾರ, ಮತ್ತೆ ಟೆಂಡರ್ ಕೆಲಸ ಮಾಡಲು ಇಲಾಖೆ ನಿರ್ಧರಿಸಿದೆ. ಇದಲ್ಲದೆ, ದೂರಸಂಪರ್ಕ ಇಲಾಖೆಯು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಚೀನಾದ (China) ಕಂಪನಿಗಳು ತಯಾರಿಸಿದ ಸಲಕರಣೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಕೇಳಿದೆ. ಚೀನಾದ ಕಂಪನಿಗಳು ತಯಾರಿಸಿದ ಸಾಧನಗಳ ನೆಟ್‌ವರ್ಕ್ ಸುರಕ್ಷತೆ ಯಾವಾಗಲೂ ಪ್ರಶ್ನಾರ್ಹವಾಗಿದೆ ಎಂದು ಹೇಳಲಾಗಿದೆ.
ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದು ಕಠಿಣವೇ?
ಲಡಾಖ್ (Ladakh) ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ ಚೀನಾ ಕೂಡ ಭಾರಿ ನಷ್ಟವನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದೆ. ಇಂಡೋ-ಚೀನಾ ಗಡಿ ವಿವಾದದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19 ರಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ನಡೆಸಿ ಲಡಾಖ್‌ನಲ್ಲಿನ ಇಂಡೋ-ಚೀನಾ ಗಡಿ ಪ್ರದೇಶಗಳ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ.