ಇಂಡೋ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಚೀನಾ ತನ್ನ ನಾಗರಿಕರನ್ನು ಭಾರತದಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ನವದೆಹಲಿಯ ಚೀನೀ ರಾಯಭಾರ ಕಚೇರಿ ಸೋಮವಾರ ನೀಡಿರುವ ನೋಟಿಸ್‌ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಸಿರುವ ಕರೋನಾವೈರಸ್ ಹಾವಳಿಯಿಂದಾಗಿ ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವು ರಾಷ್ಟ್ರಗಳು ತಮ್ಮ ಅನೇಕ ಕಂಪನಿಗಳನ್ನು ಚೀನಾದಲ್ಲಿ ಮುಚ್ಚುತ್ತಿವೆ.