ಪಶ್ಚಿಮ ಬಂಗಾಳದಂತೆ ಬೇರೆ ಕಡೆಯೂ ಮದ್ಯ ಸರಬರಾಜಿಗೆ ಅವಕಾಶ ಕೊಡಿ
ಕೇಂದ್ರ ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಗೆ ಪತ್ರ ಬರೆದಿರುವ ದಿ ಇಂಡಿಯನ್ ಸ್ಪಿರಿಟ್ಸ್ & ವೈನ್ ಅಸೋಸಿಯೇಷನ್ ಆಫ್ ಇಂಡಿಯಾ, ಪಶ್ಚಿಮ ಬಂಗಾಳದಲ್ಲಿ ಮನೆಮನೆಗೆ ಮದ್ಯ ಸರಬರಾಜು ಮಾಡಲು ಅವಕಾಶ ಕೊಟ್ಟಿರುವಂತೆ ದೇಶದ ಬೇರೆ ಕಡೆ ಮದ್ಯ ಸರಬರಾಜು ಮಾಡುವುದಕ್ಕೆ ಅನುಮತಿ ಕೊಡಿ ಎಂದು ಕೇಳಿಕೊಂಡಿದೆ.
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮನೆಮನೆಗೆ ಮದ್ಯ ಸರಬರಾಜು ಮಾಡಲು ಶುರುಮಾಡಿರುವ ರೀತಿಯಲ್ಲೇ ದೇಶದೆಲ್ಲೆಡೆ ಮದ್ಯ ಸರಬರಾಜಿಗೆ ಅವಕಾಶ ನೀಡಬೇಕೆಂದು ದಿ ಇಂಡಿಯನ್ ಸ್ಪಿರಿಟ್ಸ್ & ವೈನ್ ಅಸೋಸಿಯೇಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಕೇಂದ್ರ ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಗೆ ಪತ್ರ ಬರೆದಿರುವ ದಿ ಇಂಡಿಯನ್ ಸ್ಪಿರಿಟ್ಸ್ & ವೈನ್ ಅಸೋಸಿಯೇಷನ್ ಆಫ್ ಇಂಡಿಯಾ, ಪಶ್ಚಿಮ ಬಂಗಾಳದಲ್ಲಿ ಮನೆಮನೆಗೆ ಮದ್ಯ ಸರಬರಾಜು ಮಾಡಲು ಅವಕಾಶ ಕೊಟ್ಟಿರುವಂತೆ ದೇಶದ ಬೇರೆ ಕಡೆ ಮದ್ಯ ಸರಬರಾಜು ಮಾಡುವುದಕ್ಕೆ ಅನುಮತಿ ಕೊಡಿ ಎಂದು ಕೇಳಿಕೊಂಡಿದೆ.
ಕರೋನು ಸೋಂಕು ಹರಡದಂತೆ ಎಚ್ಚರ ವಹಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾರಾಟ ಮಾಡಲಾಗುವುದು. ಪಶ್ಚಿಮ ಬಂಗಾಳದ ರೀತಿಯಲ್ಲಿ ದಿನದ ಕೆಲವು ಗಂಟೆ ಮಾತ್ರ ಮಾರಾಟ ಮಾಡಲಾಗುವುದು. ಮನನೆಗೆ ಮದ್ಯ ಸರಬರಾಜು ಮಾಡುವ ಮುಖಾಂತರವೇ ವಹಿವಾಟು ನಡೆಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಗೆ ಬರೆದಿರುವ ಪತ್ರದಲ್ಲಿ ಐಎಸ್ ಡಬ್ಲ್ಯೂ ಎಐ- ದಿ ಇಂಡಿಯನ್ ಸ್ಪಿರಿಟ್ಸ್ & ವೈನ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.
2006ರ ಫುಡ್ ಸೇಫ್ಟಿ & ಸ್ಟಾಂಡರ್ಡ್ಸ್ ಕಾಯಿದೆಯಡಿ ಮದ್ಯ ಅಗತ್ಯ ವಸ್ತುಗಳಲ್ಲಿ ಒಂದು. ಅಲ್ಲದೆ ಮದ್ಯದ ಅಧಿಕೃತ ಮಾರಾಟಕ್ಕೆ ಅವಕಾಶ ನೀಡದಿದ್ದರೆ ಕಾಳಸಂತೆಯ ಧಂಧೆ ನಡೆಯುತ್ತದೆ. ಕಳ್ಳಬಟ್ಟಿ ಮತ್ತು ಕಳಪೆ ಗುಣಮಟ್ಟದ ಸಾರಾಯಿ ಸರಬರಾಜಾಗುತ್ತದೆ. ಇದರಿಂದ ಲಾಕ್ ಡೌನ್ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರಿಗೆ ಹೆಚ್ಚುವರಿ ಕೆಲಸ ಆಗುತ್ತದೆ ಎಂದು ಹೇಳಿದೆ.
ಕೊರೋನಾ (Coronavirus) ಸೋಂಕು ಹರಡುವಿಕೆ ತೀವ್ರಗೊಳ್ಳಬಹುದೆಂದು ಲಾಕ್ಡೌನ್ (Lockdown) ಘೋಷಿಸಲಾಗಿದ್ದು, ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮದ್ಯ ಮಾರಾಟ ಆರಂಭಿಸುವಂತೆ ಒತ್ತಾಯಗಳು ಕೇಳಿಬಂದಿದ್ದವು. ಮದ್ಯ ಸಿಗದೆ ಜನ ಆತ್ಮಹತ್ಯೆಗೀಡಾಗಿದ್ದರು. ಇದೆಲ್ಲದರಪ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಮದ್ಯ ಮಾರಾಟಕ್ಕೆ ವಿನಾಯಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ(West Bengal)ದಲ್ಲಿ ಬುಧವಾರದಿಂದಲೇ ಮದ್ಯ ಮಾರಾಟ ಮಾಡಲು ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಅಂಗಡಿ, ಬಾರುಗಳಲ್ಲಿ ಮದ್ಯ ಬುಕ್ ಮಾಡಲು ಮಧ್ಯಾಹ್ನ 2ರಿಂದ 5ರವರೆಗೆ ಮನೆಮನೆಗೆ ಮದ್ಯ ಪೂರೈಸಲು ಅವಕಾಶ ನೀಡಲಾಗಿದೆ. ಅಂಗಡಿ ಅಥವಾ ಬಾರ್ ಮೂರಕ್ಕಿಂತ ಹೆಚ್ಚು ಜನ ಇರುವಂತಿಲ್ಲ. ಪೊಲೀಸರಿಂದ ಅನುಮತಿ ಪಡೆದು ಮದ್ಯ ವಿತರಣೆ ಮಾಡುವಂತೆ ಸೂಚನೆ ನೀಡಲಾಗಿದೆ.