ಮುಂಬೈ: ಕರೋನವೈರಸ್ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಭೀತಿ ಸೃಷ್ಟಿಸಿದೆ.  ರಾಜ್ಯದಲ್ಲಿ ಕರೋನಾ ಪಾಸಿಟಿವ್ ರೋಗಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರವು ಲಾಕ್‌ಡೌನ್ (Lockdown) ಅವಧಿಯನ್ನು ಡಿಸೆಂಬರ್ 31ರ ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ. ಆದಾಗ್ಯೂ ಹೊಸ ವರ್ಷದ 2021ರ ಆಚರಣೆಗೆ ವಿನಾಯಿತಿ ನೀಡುವ ನಿರೀಕ್ಷೆಯಿದೆ.


COMMERCIAL BREAK
SCROLL TO CONTINUE READING

ಮುಂದಿನ ಕೊರೊನಾ ಅಲೆ ಸುನಾಮಿಯಂತೆ ಇರಲಿದೆ ಎಂದ ಸಿಎಂ ಉದ್ಧವ್ ಠಾಕ್ರೆ


ನಿರ್ಬಂಧ ಸಡಿಲಿಕೆಯ ಬಳಿಕ ಕರೋನಾ ಉಲ್ಬಣ:
ವಾಸ್ತವವಾಗಿ ಮಹಾರಾಷ್ಟ್ರದಲ್ಲಿ (Maharashtra) ನವೆಂಬರ್ 5 ರಿಂದ ಲಾಕ್‌ಡೌನ್ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಯಿತು. ಮಿಷನ್ ಬಿಗಿನ್ ಎಗೇನ್ (Mission Begin Again) ಅಡಿಯಲ್ಲಿ ಚಿತ್ರಮಂದಿರಗಳು, ಯೋಗ ಸಂಸ್ಥೆಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿತ್ತು. ಆದಾಗ್ಯೂ ಸೋಂಕಿನ ಅಪಾಯದ ದೃಷ್ಟಿಯಿಂದ ಈ ವಿನಾಯಿತಿಗಳನ್ನು ಗ್ರೀನ್ ಜೋನ್ಸ್ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲು ಆದೇಶಿಸಲಾಗಿದೆ. ಕಂಟೈನ್‌ಮೆಂಟ್ ಜೋನ್ಸ್‌ನಲ್ಲಿ ಯಾವುದೇ ರೀತಿಯ ವಿಶ್ರಾಂತಿ ಇರಲಿಲ್ಲ.


ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತದೆಯೇ? ಡಿಸಿಎಂ ಅಜಿತ್ ಪವಾರ್ ಹೇಳಿದ್ದೇನು?


ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಸಾಧ್ಯತೆಗಳು
ವಿಶೇಷವೆಂದರೆ ಮಾರ್ಚ್ 22 ರ ನಂತರವೇ ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಯಿತು. ಆದರೆ ದೇಶದ ಇತರ ಭಾಗಗಳಿಗಿಂತ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಕರೋನವೈರಸ್ (Coronavirus) ಪ್ರಕರಣಗಳು ಹೆಚ್ಚುತ್ತಿತ್ತು. ಏತನ್ಮಧ್ಯೆ ರಾಜ್ಯದಲ್ಲಿ ಸತತ 7 ತಿಂಗಳು ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಆದರೆ ಇತ್ತೀಚೆಗಷ್ಟೇ ಕೆಲವು ನಿಯಮಗಳನ್ನು ಸಡಿಲಿಸುವುದರೊಂದಿಗೆ ಮಹಾರಾಷ್ಟ್ರ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿತ್ತು. ಪ್ರತಿಯೊಬ್ಬರೂ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಆದಾಗ್ಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನ ಪ್ರಕರಣಗಳು ಮತ್ತೆ ಮಹಾರಾಷ್ಟ್ರವನ್ನು ಲಾಕ್‌ಡೌನ್ ಕಡೆಗೆ ಕರೆದೊಯ್ಯುತ್ತಿವೆ.