ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತದೆಯೇ? ಡಿಸಿಎಂ ಅಜಿತ್ ಪವಾರ್ ಹೇಳಿದ್ದೇನು?

ಮಹಾರಾಷ್ಟ್ರದಲ್ಲಿ ಕರೋನಾದ ಹೆಚ್ಚುತ್ತಿರುವ ವೇಗ ಎಲ್ಲರನ್ನೂ ಚಿಂತೆಗೀಡು ಮಾಡಿದ್ದು ರಾಜ್ಯದಲ್ಲಿ ಲಾಕ್‌ಡೌನ್ 2.0 ಅನ್ನು ವಿಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಜನರ ನಿರ್ಲಕ್ಷ್ಯದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Last Updated : Nov 23, 2020, 03:12 PM IST
  • ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಲಾಕ್‌ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ- ಅಜಿತ್ ಪವಾರ್
  • ಕರೋನಾದ ಎರಡನೇ ತರಂಗದ ಅಪಾಯದ ಬಗ್ಗೆ ಎಚ್ಚರಿಕೆ
  • ಹಬ್ಬಗಳಲ್ಲಿ ಜನಸಂದಣಿಯಿಂದಾಗಿ ಅಸಮಾಧಾನ
ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಆಗುತ್ತದೆಯೇ? ಡಿಸಿಎಂ ಅಜಿತ್ ಪವಾರ್ ಹೇಳಿದ್ದೇನು? title=
File Image

ಮುಂಬೈ: ಕರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಕರೋನಾವೈರಸ್ ಅಟ್ಟಹಾಸವನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ವಿಧಿಸಬಹುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಸೂಚಿಸಿದ್ದಾರೆ.

ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ:
ಎಲ್ಲೆಡೆ ಕೋವಿಡ್ -19 (Covid 19) ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರು ನಿರ್ಲಕ್ಷ್ಯದಿಂದ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಅಜಿತ್ ಪವಾರ್, ನಾವು ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡುತ್ತಿದ್ದೇವೆ. ಮುಂದಿನ 8-10 ದಿನಗಳವರೆಗೆ ನಾವು ಪರಿಸ್ಥಿತಿಯನ್ನು ಪರಿಶೀಲಿಸಿ ನಂತರ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್  (Lockdown) ವಿಧಿಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಕರೋನಾವೈರಸ್ ಸೋಂಕಿನ ಪ್ರಕರಣ ಕಡಿಮೆಯಾಗದಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ನೀವು ಧರಿಸುತ್ತಿರುವ Mask ಅಸಲಿಯೇ/ನಕಲಿಯೇ ಎಂದು ಹೀಗೆ ತಿಳಿಯಿರಿ

ಇದೇ ಸಂದರ್ಭದಲ್ಲಿ ಕರೋನಾ ವೇಗವಾಗಿ ಹೆಚ್ಚಾಗಲು ಹಬ್ಬಗಳು ಒಂದು ರೀತಿಯಲ್ಲಿ ಕಾರಣವಾಗಿವೆ ಉಪಮುಖ್ಯಮಂತ್ರಿ ದೂಷಿಸಿದರು. ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಭಾರಿ ಜನಸಂದಣಿ ಇತ್ತು. ಗಣೇಶ ಚತುರ್ಥಿ ಸಮಯದಲ್ಲಿ ನಾವು ಜನಸಂದಣಿಯನ್ನು ನೋಡಿದ್ದೇವೆ. ಆದರೆ ಆ ಸಂದರ್ಭದಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿದ್ದರು. ಆದರೆ ದೀಪಾವಳಿ ಸಂದರ್ಭದಲ್ಲಿ ಎಲ್ಲೆಡೆ ಅಪಾರ ಜನಸಂದಣಿಯಿಂದಾಗಿ ಕರೋನಾ ಮತ್ತೆ ತಾರಕಕ್ಕೇರಿದೆ. ಈಗ ಶೀಘ್ರದಲ್ಲೇ ಕರೋನದ ಮತ್ತೊಂದು ತರಂಗ ಬರಬಹುದೆಂಬ ಭಯ ಕೂಡ ಹೆಚ್ಚಾಗಿದ್ದು ಎಲ್ಲರೂ ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಕರೆ ನೀಡಿದರು.

ಭಾರತದ ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಗೂ ಕರೋನಾ ಸೋಂಕು!

ಜನತೆಯ ಸಂಯಮವನ್ನು ಕೊಂಡಾಡಿದ ಮುಖ್ಯಮಂತ್ರಿ:
ಅದೇ ಸಮಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav thackeray) ಅವರು ಭಾನುವಾರ ಜನರನ್ನುದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಸಂಯಮ ಮತ್ತು ಶಿಸ್ತನ್ನು ಶ್ಲಾಘಿಸಿದರು. ಈ ಹಿಂದೆ ಜನರು ಸಂಯಮದಿಂದ ವರ್ತಿಸಿದ ರೀತಿಯಿಂದಾಗಿ ರಾಜ್ಯದಲ್ಲಿ ಕರೋನವನ್ನು ನಿಯಂತ್ರಿಸಬಹುದು ಎಂದು ತೋರಿಸಿದ್ದಾರೆ ಎಂದವರು ಹೇಳಿದರು. ಅಲ್ಲದೆ ಕರೋನಾದ ಎರಡನೇ ತರಂಗವನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆ ವಹಿಸಬೇಕು ಎಂದು ಹೇಳಿದರು.
 

Trending News