ಪಿಎನ್ ಬಿ ಹಗರಣದ ಆರೋಪಿ Mehul Choksi ಫೋಟೋ ಬಹಿರಂಗ, ಕೈಗಳಲ್ಲಿ ಗಾಯದ ಗುರುತು ಪತ್ತೆ
ಇದೀಗ ಹೊರಬಂದಿರುವ ಚಿತ್ರಗಳಲ್ಲಿ ಮೆಹುಲ್ ಚೋಕ್ಸಿ (Mehul Choksi) ಲಾಕಪ್ ನಂತೆ ಕಾಣುವ ಕಂಬಿಗಳ ಹಿಂದೆ ಇರುವುದು ಕಂಡುಬರುತ್ತದೆ. ಅವರ ಕೈಯಲ್ಲಿ ಗಾಯದ ಗುರುತುಗಳಿರುವುದು ಕೂಡಾ ಕಂಡುಬಂದಿದೆ. ಅಲ್ಲದೆ, ಎಡ ಕಣ್ಣು ಕೂಡ ಕೆಂಪಾಗಿರುವುದು ಕಾಣಿಸುತ್ತದೆ.
ನವದೆಹಲಿ : ಪಿಎನ್‌ಬಿ ಹಗರಣ (PNB Scam) ಆರೋಪಿ ಮತ್ತು ಮೆಹುಲ್ ಚೋಕ್ಸಿ (Mehul Choksi) ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಡೊಮಿನಿಕಾ ಜೈಲಿನಲ್ಲಿರುವ ಮೆಹುಲ್ ಚೋಕ್ಸಿ ಅವರ ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ. ಈ ಚಿತ್ರಗಳಲ್ಲಿ ಮೆಹುಲ್ ಚೋಕ್ಸಿ ಕೈಗಳಿಗೆ ಗಾಯಗಳಾಗಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆಹುಲ್ ಚೋಕ್ಸಿ ಅವರನ್ನು ಥಳಿಸಲಾಗಿದೆ ಎಂದು ಚೋಕ್ಸಿ ವಕೀಲರು ಹೇಳಿಕೊಂಡಿದ್ದಾರೆ.
ಇದೀಗ ಹೊರಬಂದಿರುವ ಚಿತ್ರಗಳಲ್ಲಿ ಮೆಹುಲ್ ಚೋಕ್ಸಿ (Mehul Choksi) ಲಾಕಪ್ ನಂತೆ ಕಾಣುವ ಕಂಬಿಗಳ ಹಿಂದೆ ಇರುವುದು ಕಂಡುಬರುತ್ತದೆ. ಅವರ ಕೈಯಲ್ಲಿ ಗಾಯದ ಗುರುತುಗಳಿರುವುದು ಕೂಡಾ ಕಂಡುಬಂದಿದೆ. ಅಲ್ಲದೆ, ಎಡ ಕಣ್ಣು ಕೂಡ ಕೆಂಪಾಗಿರುವುದು ಕಾಣಿಸುತ್ತದೆ.
ದೆಹಲಿಯಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಣೆ
ತನಿಖೆ ನಡೆಸುವಂತೆ ವಕೀಲರ ಒತ್ತಾಯ :
ಈ ಮಧ್ಯೆ, ಚೋಕ್ಸಿ ಅವರನ್ನು ಆಂಟಿಗುವಾದಿಂದ (Antigua) ಬಲವಂತವಾಗಿ ಅಪಹರಿಸಲಾಗಿದೆ ಎಂದು ಅವರ ವಕೀಲ ವಿಜಯ್ ಅಗರ್ವಾಲ್ ಆರೋಪಿಸಿದ್ದಾರೆ. ಅಲ್ಲದೆ ಚೋಕ್ಸಿ ಅವರನ್ನು ಥಳಿಸಿ ನಂತರ ಡೊಮಿನಿಕಾಗೆ (Dominica) ಕರೆದೊಯ್ಯಲಾಗಿದ್ದು, ಕಾನೂನು ಹಕ್ಕುಗಳನ್ನು ಸಹ ನಿರಾಕರಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಇನ್ನು ಮೆಹುಲ್ ಚೋಕ್ಸಿ, ಡೊಮಿನಿಕಾ ತಲುಪಿದ್ದು ಹೇಗೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ವಾರದ ಹಿಂದೆ ಆಂಟಿಗುವಾದಿಂದ ನಾಪತ್ತೆಯಾಗಿದ್ದ ಮೆಹುಲ್ ಚೋಕ್ಸಿ :
ಮೇ 23 ರ ಸಂಜೆ ಆಂಟಿಗುವಾ ಮನೆಯಿಂದ ಚೋಕ್ಸಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ನಂತರ ಮೇ 26 ರಂದು ಅವರನ್ನು ಡೊಮಿನಿಕಾದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಆ ಸಂದರ್ಭದಲ್ಲಿ ಚೋಕ್ಸಿ ಕ್ಯೂಬಾಕ್ಕೆ (Cuba) ಪಲಾಯನ ಮಾಡುವ ಇರಾದೆಯಲ್ಲಿದ್ದರು ಎನ್ನಲಾಗಿತ್ತು. ನಂತರ ಅವರನ್ನು ಭಾರತಕ್ಕೆ (India) ಹಸ್ತಾಂತರಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮೆಹುಲ್ ಚೋಕ್ಸಿ ಯನ್ನು ಆಂಟಿಗುವಾಕ್ಕೆ ಹಸ್ತಾಂತರಿಸುವುದಾಗಿ ಡೊಮಿನಿಕಾ ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ
ಮುಂದುವರಿದ ಭಾರತೀಯ ಏಜೆನ್ಸಿಗಳ ಪ್ರಯತ್ನ :
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (PNB) 13 ಸಾವಿರ ಕೋಟಿ ಹಗರಣ ನಡೆದಿರುವುದು 2018 ರ ಜನವರಿಯಲ್ಲಿ ಬಹಿರಂಗವಾಗಿತ್ತು. ಜನವರಿ 30, 2018 ರಲ್ಲಿ ಈ ಬಗ್ಗೆ ಸಿಬಿಐ (CBI) ಎಫ್ಐಆರ್ ದಾಖಲಿಸಿತ್ತು. ಆದರೆ ಅದಕ್ಕೂ ಮೊದಲೇ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ (Nirav Modi) ಮತ್ತು ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.