The Code on Wages Bill: ಬರುವ ಏಪ್ರಿಲ್ 1, 2021ರಿಂದ ನಿಮ್ಮ ಗ್ರ್ಯಾಚುಟಿ, ಪಿಎಫ್ ಹಾಗೂ ಕೆಲಸದ ಗಂಟೆಗಳಲ್ಲಿ ಭಾರಿ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ನೌಕರರ ಗ್ರ್ಯಾಚ್ಯುಟಿ ಹಾಗೂ ಭವಿಷ್ಯ ನಿಧಿ ಕೊಡುಗೆ ಹೆಚ್ಚಾಗಲಿದೆ. ಇದರಿಂದ ಕೈ ಸೇರುವ ಒಟ್ಟು ವೇತನ (Take Home Salary) ಕಡಿಮೆಯಾಗಲಿದೆ. ಅಷ್ಟೇ ಯಾಕೆ ಕಂಪನಿಗಳ ಬ್ಯಾಲೆನ್ಸ್ ಶೀಟ್ ಕೂಡ ಇದರಿಂದ ಪ್ರಭಾವಿತಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಎಂದರೆ ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆಗೊಂಡ ಮೂರು The Code on Wages Bill (ವೇತನ ಮಸೂದೆ ಸಂಹಿತೆ). ಈ ವಿಧೇಯಕಗಳು ಈ ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ವೇತನದ  (wage) ನೂತನ ಪರಿಭಾಷೆಯ ಅಡಿ ಭತ್ಯೆ ಓಟ್ಟು ವೇತನದ ಗರಿಷ್ಠ 50 ರಷ್ಟು ಇರಲಿದೆ. ಇದರರ್ಥ ಮೂಲ ವೇತನ (ಸರ್ಕಾರಿ ನೌಕರಿಯಲ್ಲಿ ಮೂಲ ವೇತನ ಹಾಗೂ ತುಟ್ಟಿ ಭತ್ಯೆ) ಏಪ್ರಿಲ್ ನಿಂದ ಒಟ್ಟು ವೇತನದ ಶೇ.50 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ದೇಶದ 73 ವರ್ಷಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಈ ರೀತಿ ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ನೌಕರಿದಾತರು ಹಾಗೂ ನೌಕರ ಇಬ್ಬರಿಗೂ ಕೂಡ ಇದರಿಂದ ಲಾಭವಾಗಲಿದೆ ಎಂದು ಸರ್ಕಾರ ಭರವಸೆ ವ್ಯಕ್ತಪಡಿಸಿದೆ.


ಈ ಕಾರಣದಿಂದ ವೇತನ ಕಡಿಮೆಯಾಗಲಿದೆ ಹಾಗೂ PF ಕೊಡುಗೆ ಹೆಚ್ಚಾಗಲಿದೆ
ನೂತನ ಕರಡು ನಿಯಮಗಳ ಅನುಸಾರ ಮೂಲ ವೇತನ ಒಟ್ಟು ವೇತನದ ಶೇ.50 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಇದರಿಂದ ಬಹುತೇಕ ನೌಕರರ ವೇತನ ಶ್ರೇಣಿ ಬದಲಾಗಲಿದೆ. ಏಕೆಂದರೆ ವೇತನದ ಭತ್ಯೆ ಅಲ್ಲದ ಭಾಗ ಸಾಮಾನ್ಯವಾಗಿ ಒಟ್ಟು ವೇತನದ ಶೇ.50 ಕ್ಕಿಂತ ಕಡಿಮೆಯಾಗಿರುತ್ತದೆ. ಇನ್ನೊಂದೆಡೆ ಒಟ್ಟು ವೇತನದಲ್ಲಿ ಭತ್ಯೆಯ ಭಾಗ ಇನ್ನೂ ಅಧಿಕವಾಗಲಿದೆ. ಮೂಲ ವೇತನ ಹೆಚ್ಚಾಗುತ್ತಿದ್ದಂತೆ ನಿಮ್ಮ ಪಿಎಫ್ (PF) ಕೊಡುಗೆ ಕೂಡ ಹೆಚ್ಚಾಗಲಿದೆ. ಏಕೆಂದರೆ ಪಿಎಫ್ ಕೊಡುಗೆ ಮೂಲ ವೇತನವನ್ನು ಆಧರಿಸಿ ಕಡಿತಗೊಳಿಸಲಾಗುತ್ತದೆ. ಇದರರ್ಥ ನಿಮ್ಮ ಟೇಕ್ ಹೋಮ್ ಸ್ಯಾಲರಿಯಲ್ಲಿ ಹೆಚ್ಚು ಹಣ ಕಡಿತಗೊಳ್ಳಲಿದೆ.


ಇದನ್ನು ಓದಿ- ಇನ್ಮುಂದೆ ಇವರಿಗೂ ಸಿಗಲಿದೆ PF ಲಾಭ, ಈ ಯೋಜನೆಯಡಿ 40 ಕೋಟಿ ಜನರು ಶಾಮೀಲು


ರಿಟೈರ್ಮೆಂಟ್ ಬಳಿಕ ಸಿಗುವ ಮೊತ್ತದಲ್ಲಿ ವೃದ್ಧಿಯಾಗಲಿದೆ
ಗ್ರ್ಯಾಚ್ಯುಟಿ ಹಾಗೂ ಪಿಎಫ್ ನಲ್ಲಿ ಕೊಡುಗೆ ಹೆಚ್ಚಾಗುವುದರಿಂದ ನಿವೃತ್ತಿಯ ಬಳಿಕ ಸಿಗುವ ಮೊತ್ತದಲ್ಲಿಯೂ ಕೂಡ ಏರಿಕೆಯಾಗಲಿದೆ ಹಾಗೂ ನಿವೃತ್ತಿಯ ನಂತರದ ನಿಮ್ಮ ಜೀವನ ಸುಗಮವಾಗಲಿದೆ. ಉಚ್ಚ ವೇತನ ಶ್ರೇಣಿ ಹೊಂದಿರುವ ಅಧಿಕಾರಿಗಳ ವೇತನದ ಸ್ಟ್ರಕ್ಚರ್ ನಲ್ಲಿ ಅಧಿಕ ಬದಲಾವಣೆಗಳನ್ನು ಕಾಣಲಿದ್ದು, ಇದರಿಂದ ಅವರು ಹೆಚ್ಚು ಪ್ರಭಾವಕ್ಕೆ ಒಳಗಾಗಲಿದ್ದಾರೆ. ಪಿಎಫ್ ಹಾಗೂ ಗ್ರ್ಯಾಚ್ಯುಟಿ ಹೆಚ್ಚಾಗುವ ಕಾರಣ ಇವುಗಳಲ್ಲಿ ನೌಕರಿದಾತರ ಕೊಡುಗೆ ಕೂಡ ಹೆಚ್ಚಾಗಲಿದೆ. ಏಕೆಂದರೆ ನೌಕರರ ಭವಿಷ್ಯನಿಧಿಯಲ್ಲಿ ಅವರ ಕೊಡುಗೆಯಲ್ಲಿಯೂ ಕೂಡ ಏರಿಕೆಯಾಗಲಿದೆ. ಇದರರ್ಥ ಕಂಪನಿಗಳ ಬ್ಯಾಲೆನ್ಸ್ ಶೀಟ್ ಇದರಿಂದ ಭಾರಿ ಪ್ರಭಾವಕ್ಕೆ ಒಳಗಾಗಲಿದೆ.


ಇದನ್ನು ಓದಿ-EPFO Interest Rate: ಆರು ಕೋಟಿ ಖಾತೆದಾರರಿಗೆ ಸಂತಸದ ಸುದ್ದಿ


ಕೆಲಸದ ಅವಧಿ 12 ಗಂಟೆ ನಿಗದಿಪಸಿಸಲು ಪ್ರಸ್ತಾಪ
ನೂತನ ಕರಡು ಕಾನೂನುನಿನ ಪ್ರಕಾರ ಕೆಲಸದ ಗರಿಷ್ಠ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. OSH Codeನ ಕರನು ನಿಯಮಗಳಲ್ಲಿ 15 ರಿಂದ 30 ನಿಮಿಷಗಳ ನಡುವಿನ ಹೆಚ್ಚುವರಿ ಕೆಲಸವನ್ನು 30 ನಿಮಿಷಗಳಲ್ಲಿ ಲೆಕ್ಕಹಾಕಿ ಓವರ್ ಟೈಮ್ ನಲ್ಲಿ ಶಾಮೀಲುಗೊಳಿಸಲು ಪ್ರಸ್ತಾವವಿದೆ. ಪ್ರಸ್ತುತ 30 ನಿಮಿಷಗಲಿಗಿಂದ ಕಡಿಮೆ ಇರುವ ಅವಧಿಯನ್ನು ಓವರ್ ಟೈಮ್ ನಲ್ಲಿ ಪರಿಗಣಿಸಲಾಗುವುದಿಲ್ಲ. ಕರಡು ನಿಯಮಗಳಲ್ಲಿ ಯಾವುದೇ ಓರ್ವ ಕಾರ್ಮಿಕನಿಗೆ ಸತತ 5 ಗಂಟೆಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸುವುದರ ಮೇಲೆ ನಿರ್ಬಂಧವಿರಲಿದೆ. ಪ್ರತಿ ಐದು ಗಂಟೆಯ ಬಳಿಕ ಅರ್ಧಗಂಟೆ ವಿಶ್ರಾಂತಿ ನೀಡುವ ನಿರ್ದೇಶನಗಳನ್ನು ಕೂಡ ಡ್ರಾಫ್ಟ್ ನಿಯಮಗಳಲ್ಲಿ ಶಾಮೀಲಾಗಿವೆ.


ಇದನ್ನು ಓದಿ- ಪಿಎಫ್‌ನ ಸಂಪೂರ್ಣ ಹಣವನ್ನು ಹಿಂಪಡೆಯುವ ಮೊದಲು EPFO ನಿಮಯ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.