ಇನ್ಮುಂದೆ ಇವರಿಗೂ ಸಿಗಲಿದೆ PF ಲಾಭ, ಈ ಯೋಜನೆಯಡಿ 40 ಕೋಟಿ ಜನರು ಶಾಮೀಲು

EPFO-ಕೇಂದ್ರ ಸರ್ಕಾರವು ಶೀಘ್ರದಲ್ಲೇ ಒಂದು ಯೋಜನೆಯನ್ನು ಜಾರಿಗೊಳಿಸಲಿದ್ದು, ಅಂಗಡಿಗಳು, ಸಣ್ಣ ಕಚೇರಿಗಳು ಮತ್ತು ದೈನಂದಿನ ವೇತನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ.

Written by - Nitin Tabib | Last Updated : Dec 30, 2020, 02:49 PM IST
  • 40 ಕೋಟಿ ಜನರಿಗೆ ಈ ಯೋಜನೆಯಿಂದ ನೇರ ಲಾಭ.
  • ಆರಂಭದಲ್ಲಿ ಸರ್ಕಾರ ಇದಕ್ಕಾಗಿ 1584 ಕೋಟಿ ರೂ. ವ್ಯಯಿಸಲಿದೆ.
  • ಕಾರ್ಮಿಕರು ಹಾಗೂ ಅಂಗಡಿಗಳಲ್ಲಿ ಕೆಲಸ ಮಾದುವವರಿಗೆ ಇದರ ಲಾಭ ಸಿಗಲಿದೆ.
ಇನ್ಮುಂದೆ ಇವರಿಗೂ ಸಿಗಲಿದೆ PF ಲಾಭ, ಈ ಯೋಜನೆಯಡಿ  40 ಕೋಟಿ ಜನರು ಶಾಮೀಲು title=
EPFO

ನವದೆಹಲಿ: EPFO- ಕೇಂದ್ರ ಸರ್ಕಾರ ಪ್ರಸ್ತುತ ಸ್ವಾವಲಂಭಿ ಭಾರತ ಅಭಿಯಾನವನ್ನು (ಆತ್ಮನಿರ್ಭಾರ ಭಾರತ್ ಅಭಿಯಾನ್) ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ, ಈ ಯೋಜನೆ ಮುಂದಿನ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ಯೋಜನೆಯ ಮೂಲಕ 40 ಕೋಟಿ ಜನರಿಗೆ ನೇರವಾಗಿ ಲಾಭವಾಗಲಿದೆ. ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಪಿಎಫ್ ಲಾಭವನ್ನು ನೀಡಲು ಕೇಂದ್ರ ಸರ್ಕಾರ ಬಯಸಿದೆ. ಈ ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ನೀಡಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸರ್ಕಾರಕ್ಕೆ ಆರಂಭದಲ್ಲಿ 1584 ಕೋಟಿ ರೂ. ಮೀಸಲಿರಿಸಿದೆ.

ಇದನ್ನು ಓದಿ- EPFO Interest Rate: ಆರು ಕೋಟಿ ಖಾತೆದಾರರಿಗೆ ಸಂತಸದ ಸುದ್ದಿ

ಇವರಿಗೆ ಸಿಗಲಿದೆ ನೇರ ಲಾಭ
2020 ರ ಅಕ್ಟೋಬರ್ 1 ರಿಂದ 2021 ರ ಜೂನ್ 30 ರವರೆಗೆ ಕೆಲಸಕ್ಕೆ ಸೇರ್ಪಡೆಯಾದ ಜನರಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲಾಗುವುದು. 2020 ರಿಂದ 2023 ರವರೆಗಿನ ಸಂಪೂರ್ಣ ಯೋಜನೆ ಅವಧಿಯಲ್ಲಿ ಒಟ್ಟು 22810 ಕೋಟಿ ರೂ. ವೆಚ್ಚ ಬರಲಿದೆ. ಅಂಗಡಿಗಳಲ್ಲಿ ಅಥವಾ ಪಿಎಫ್ ವ್ಯಾಪ್ತಿಗೆ ಬರದ ಯಾವುದೇ ಪ್ರತಿಷ್ಠಾನಗಳಲ್ಲಿ ಕೆಲಸ ಮಾಡುವ , ಭವಿಷ್ಯ ನಿಧಿ (PROVIDENT FUND) ಮತ್ತು ಗ್ರ್ಯಾಚುಟಿ ಮುಂತಾದ ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಸರ್ಕಾರದ ಈ ಯೋಜನೆಯಿಂದ ಲಾಭ ಸಿಗಲಿದೆ.

ಇದನ್ನು ಓದಿ- ಪಿಎಫ್‌ನ ಸಂಪೂರ್ಣ ಹಣವನ್ನು ಹಿಂಪಡೆಯುವ ಮೊದಲು EPFO ನಿಮಯ ತಿಳಿಯಿರಿ

ಸಬ್ಸಿಡಿ ಲಾಭ ಕೂಡ ಸಿಗಲಿದೆ
ಸ್ವಾವಲಂಭಿ ಭಾರತ ಯೋಜನೆಯ ಅಡಿ ಹೊಸ ನೇಮಕಾತಿಗಳನ್ನು ಮಾಡುವವರಿಗೆ ಸರ್ಕಾರ ಸಬ್ಸಿಡಿ ಕೂಡ ನೀಡಲಿದೆ. ಈ ಸಬ್ಸಿಡಿ ಕಂಪನಿಗಳು ಹಾಗೂ ನೌಕರರ ಮೂಲಕ ಎರಡು ವರ್ಷಗಳ ಕಾಲ ಮಾಡಲಾಗುವ ರಿಟೈರ್ಮೆಂಟ್ ಫಂಡ್ ಕೊಡುಗೆ ಅಂದರೆ PF ಕವರ್ ಮಾಡಲು ಇರಲಿದೆ. ಅಂದರೆ ನೌಕರರು ಹಾಗೂ ನೌಕರಿದಾತರ ವತಿಯಿಂದ ಮಾಡಲಾಗುವ ಶೇ.12-ಶೇ.12 (ಒಟ್ಟು ಶೇ.24 )ರಷ್ಟು ಕೊಡುಗೆಯ ಸಮಾನ ಹಣವನ್ನು ಸರ್ಕಾರ ಸಬ್ಸಿಡಿ ರೂಪದಲ್ಲಿ ಕಂಪನಿಗಳಿಗೆ ನೀಡಲಿದೆ.

ಇದನ್ನು ಓದಿ- EPFOಗೆ ಸಂಬಂಧಿಸಿರುವ ಈ ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ

ಈ ಯೋಜನೆಯಡಿ, 1,000 ಜನರಿಗೆ ಹೊಸ ಉದ್ಯೋಗಗಳನ್ನು ಒದಗಿಸುವ ಕಂಪನಿಗಳಿಗೆ ಸರ್ಕಾರ ಇಬ್ಬರ ಪರವಾಗಿ ಪಿಎಫ್ ಕೊಡುಗೆಯನ್ನು ಪಾವತಿಸಲಿದೆ. ಇನ್ನೊಂದೆಡೆ  1,000 ಕ್ಕೂ ಅಧಿಕ ಜನರಿಗೆ ಹೊಸ ಉದ್ಯೋಗಗಳನ್ನು ಒದಗಿಸುವ ಕಂಪನಿಗಳಿಗೆ ಪ್ರತಿ ಉದ್ಯೋಗಿಯ ಕೊಡುಗೆಯಲ್ಲಿ ಕೇವಲ ಶೇ.12 ರಷ್ಟು ಮಾತ್ರ ಎರಡು ವರ್ಷಗಳವರೆಗೆ ಮಾತ್ರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News