Corona Latest Update: 24 ಗಂಟೆಗಳಲ್ಲಿ 85 ಸಾವಿರಕ್ಕೂ ಹೆಚ್ಚು ಜನರಿಗೆ ಕರೋನಾ ದೃಢ
ಕರೋನವೈರಸ್ ಪ್ರತಿದಿನ ಹೊಸ ದಾಖಲೆಗಳನ್ನು ರಚಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ, 85 ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು (COVID-19) ದಾಖಲಾಗಿವೆ.
ನವದೆಹಲಿ: ಕರೋನವೈರಸ್ ಪ್ರತಿದಿನ ಹೊಸ ದಾಖಲೆಗಳನ್ನು ಮಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ 85 ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಕರೋನಾವೈರಸ್ (Coronavirus) ಸೋಂಕಿಗೆ ಒಳಗಾದವರ ಸಂಖ್ಯೆ 59 ಲಕ್ಷಕ್ಕಿಂತ ಹೆಚ್ಚಾಗಿದೆ. ಏತನ್ಮಧ್ಯೆ ಕಳೆದ 24 ಗಂಟೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳ ನವೀಕರಣ:
ಕಳೆದ 24 ಗಂಟೆಗಳಲ್ಲಿ ಕರೋನಾದ 85,362 ಹೊಸ ಸೋಂಕುಗಳು ವರದಿಯಾಗಿದ್ದು, 1089 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗಿನಂತೆ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 59,03,932 ಕ್ಕೆ ಏರಿದರೆ, ಸಾವಿನ ಸಂಖ್ಯೆ 93,379 ಕ್ಕೆ ತಲುಪಿದೆ.
ಸರ್ಕಾರಿ ಗೌರವಗಳೊಂದಿಗೆ ಸ್ವಕ್ಷೇತ್ರದಲ್ಲಿ ಶಾಸಕ ಬಿ.ನಾರಾಯಣರಾವ್ ಅಂತ್ಯಕ್ರಿಯೆ
ಚೇತರಿಕೆಯ ವೇಗ:
ಕರೋನಾದಿಂದ ಬಳಲುತ್ತಿದ್ದವರಲ್ಲಿ 93,420 ಜನರು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶಾದ್ಯಂತ ಕರೋನಾದಿಂದ ಚೇತರಿಕೆ ಹೊಂದುತ್ತಿರುವವರ ಪ್ರಮಾಣ 82.14% ಆಗಿದೆ. ಅದೇ ಸಮಯದಲ್ಲಿ ಕೋವಿಡ್ 19 (Covid-19) ಸಕಾರಾತ್ಮಕ ದರವು 6.36% ಆಗಿದೆ.
ಗಾನ ಗಂದರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು...
7 ಕೋಟಿ ಜನರಿಗೆ ಪರೀಕ್ಷೆ:
ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಕರೋನಾ ಪರೀಕ್ಷೆ (Corona Test) ನಡೆಸುವಲ್ಲಿ ಸರ್ಕಾರ ನಿರತವಾಗಿದೆ. ಈವರೆಗೆ 7 ಕೋಟಿಗೂ ಹೆಚ್ಚು ಜನರನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಪ್ಟೆಂಬರ್ 25ರ ಹೊತ್ತಿಗೆ 7,02,69,975 ಮಾದರಿಗಳನ್ನು ತನಿಖೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 13,41,535 ಜನರಿಗೆ ಕರೋನಾ ಪರೀಕ್ಷೆ ಮಾಡಲಾಗಿದೆ.