Dance Viral: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ, ಲೈಕ್ಸ್, ವೀಕ್ಷಕರು ಮತ್ತು ಅನುಯಾಯಿಗಳನ್ನು ಹೆಚ್ಚಿಸಲು ಹಲವರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಕೆಲವರು ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. ದೆಹಲಿಯ ಮಹಿಳೆಯೊಬ್ಬರು ಇಂತಹದ್ದೇ ಕೆಲಸವನ್ನು ಮಾಡಿದ್ದಾರೆ. ಆಕೆ ತನ್ನ 12 ವರ್ಷದ ಮಗನೊಂದಿಗೆ ಮಾಡಿರುವ ನೃತ್ಯವನ್ನು ಕಂಡು ದೆಹಲಿ ಮಹಿಳಾ ಆಯೋಗ  (Delhi Mahila Ayog) ಮತ್ತು ಪೊಲೀಸರು ಸಹ ಬೆರಗಾಗಿದ್ದಾರೆ. ಈ ತಾಯಿ ತನ್ನ 10-12 ವರ್ಷದ ಮಗನೊಂದಿಗೆ ಮಾಡಿರುವ  ಅಂತಹ ನೃತ್ಯಗಳ ವೀಡಿಯೊಗಳನ್ನು ಅಶ್ಲೀಲವೆಂದು ಪರಿಗಣಿಸಿದ್ದಾರೆ. ದೆಹಲಿ ಮಹಿಳಾ ಆಯೋಗವು ಈಗ ಈ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದು ಕ್ರಮಕ್ಕೆ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಮೂಲತಃ ದೆಹಲಿಯವರು ಎಂದು ಹೇಳಲಾಗುತ್ತಿರುವ ಈ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪ್ರಸಿದ್ಧರಾಗಿದ್ದಾರೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಕೆಲವು ಸಮಯದ ಹಿಂದೆ ಮಹಿಳೆ  ಡ್ಯಾನ್ಸ್ ವಿಥ್ ಸನ್ (Dance with Son) ಹೆಸರಿನಲ್ಲಿ ತನ್ನ ನೃತ್ಯದ ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಳು. ಇದರಲ್ಲಿ ಮಹಿಳೆ ತನ್ನ ಸ್ವಂತ ಮಗನೊಂದಿಗೆ ಕಾಣಿಸಿಕೊಂಡಿದ್ದಾಳೆ. ಮಗನ ವಯಸ್ಸು ಕೇವಲ 10 ರಿಂದ 12 ವರ್ಷಗಳು ಎಂದು ಊಹಿಸಲಾಗಿದೆ. ಈ ವೀಡಿಯೊಗಳು ತುಂಬಾ ಬೋಲ್ಡ್ ಆಗಿವೆ ಎನ್ನಲಾಗಿದೆ.


ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಇಂತಹ ಕೆಲವು ವಿಡಿಯೋಗಳಲ್ಲಿ, ಮಹಿಳೆ ತನ್ನ 10-12 ವರ್ಷದ ಮಗನೊಂದಿಗೆ ಅಶ್ಲೀಲ ನೃತ್ಯ ಮತ್ತು ನಟನೆಯನ್ನು ಕಾಣಬಹುದು. ಈ ರೀತಿಯ ಹಲವಾರು ಅಶ್ಲೀಲ ವೀಡಿಯೊಗಳ ಬಗ್ಗೆ ಅಸಮಾಧಾನ ಅವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗವು  (Delhi Mahila Ayog), ಈ ಚಿಕ್ಕ ವಯಸ್ಸಿನಲ್ಲಿ, ಮಗುವನ್ನು ಮಹಿಳೆಯರನ್ನು ವಸ್ತುವಾಗಿ ನೋಡಲು ಕಲಿಸಲಾಗುತ್ತಿದೆ, ಅದೂ ಕೂಡ ಅವನ ತಾಯಿಯಿಂದಲೇ ಎಂಬುದು ವಿಪರ್ಯಾಸ. ಅಂತಹ ವೀಡಿಯೊವನ್ನು ಮಾಡುವ ಮೂಲಕ, ಮಗುವಿಗೆ ತಪ್ಪು ಶಿಕ್ಷಣವನ್ನು ನೀಡಲಾಗುತ್ತಿದೆ ಮತ್ತು ತಾಯಿ ಮತ್ತು ಮಗನ ನಡುವಿನ ಪವಿತ್ರ ಸಂಬಂಧವನ್ನು ಸಹ ಕಳಂಕಿತಗೊಳಿಸಲಾಗುತ್ತಿದೆ ಎಂದು ಹೇಳಿದೆ.


ಇದನ್ನೂ ಓದಿ- Viral Video:ವಧು ನೋಡಿದ ಕೂಡಲೇ ಮದುವೆ ಮನೆಯಿಂದಲೇ ಓಡಿಹೋದ ವರ..!


ದೆಹಲಿ ಮಹಿಳಾ ಆಯೋಗದ ಪ್ರಕಾರ, ಸಣ್ಣ ಮಗುವನ್ನು ಅಶ್ಲೀಲ ರೀತಿಯಲ್ಲಿ ನಟಿಸಲು ಮತ್ತು ನೃತ್ಯ ಮಾಡಲು ಹೇಗೆ ಪ್ರೇರೇಪಿಸಲಾಗುತ್ತಿದೆ ಎಂಬುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರೀ ವೈರಲ್ ಆದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ವಿಡಿಯೋ ಮಾಡಿದ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.


ದೆಹಲಿ ಮಹಿಳಾ ಆಯೋಗವು ತನ್ನ ನೋಟಿಸ್ ಮೂಲಕ ಮಹಿಳೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದೆ ಮತ್ತು ಮಗುವಿನ ಸಮಾಲೋಚನೆ ಮತ್ತು ಪುನರ್ವಸತಿ ಬಗ್ಗೆಯೂ ಮಾತನಾಡಿದೆ. ಮಗುವು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವನಿಗೆ ಸಲಹೆ ನೀಡಬೇಕು ಎಂದು ಆಯೋಗ ಹೇಳುತ್ತದೆ.


ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, "ಸಾಮಾಜಿಕ ಮಾಧ್ಯಮವು ಒಂದು ಕಡೆ ತಮ್ಮ ಕಲೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ನೀಡಿದರೆ, ಮತ್ತೊಂದೆಡೆ ಕೆಲವು ಜನರು ಜನಪ್ರಿಯತೆಯನ್ನು ಪಡೆಯಲು ತಮ್ಮ ಮಿತಿಗಳನ್ನು ಮೀರುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.


ಇದನ್ನೂ ಓದಿ- Supermodel: ಅದಿತಿ ಹುಂಡಿಯಾ ಜೊತೆ ಬರ್ತಡೇ ಬಾಯ್ ಇಶಾನ್ ಕಿಶನ್ ಡೇಟಿಂಗ್..?


ಆಕ್ಷೇಪಾರ್ಹ ವಿಡಿಯೋ ಕುರಿತು ಕಟ್ಟುನಿಟ್ಟಿನ ನಿಲುವನ್ನು ತೆಗೆದುಕೊಂಡಿರುವ ದೆಹಲಿ ಮಹಿಳಾ ಆಯೋಗವು ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಪೊಲೀಸರಿಗೆ ನೋಟಿಸ್ ಕಳುಹಿಸಿದೆ. ನಾವು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದೇವೆ, ಈ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಮಗುವಿನ ಉತ್ತಮ ಕೌನ್ಸಿಲಿಂಗ್ ಕೂಡ ನೀಡಬೇಕಾಗಿದೆ ಎಂದು ಆಯೋಗ ಹೇಳಿದೆ. "ಈ ಎಲ್ಲಾ ವೀಡಿಯೊಗಳನ್ನು ಸೋಷಿಯಲ್ ಮೀಡಿಯಾದಿಂದ ಸಾಧ್ಯವಾದಷ್ಟು ಬೇಗ ಅಳಿಸಲು ನಾವು ಪೊಲೀಸರನ್ನು ಕೇಳಿದ್ದೇವೆ" ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ