Viral Video: ಟ್ರೈನ್ ಕೆಳಗಡೆ ಬಂದ 70 ವರ್ಷದ ವೃದ್ಧ, ಮುಂದೇನಾಯ್ತು ನೀವೇ ನೋಡಿ

Maharashtra Video - ಟ್ರೈನ್ ಹಳಿಯ ಮೇಲೆ ಬಂದ ಯುವಕನನ್ನು ನೋಡಿದ ತಕ್ಷಣ ಡ್ರೈವರ್ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾರೆ. ಆದರೆ, ವೃದ್ಧ ವ್ಯಕ್ತಿ ಟ್ರೈನ್ ಕೆಳಗಡೆ ಸಿಲುಕಿ ಹಾಕಿಕೊಂಡಿದ್ದರು.

Written by - Nitin Tabib | Last Updated : Jul 19, 2021, 02:11 PM IST
  • ಮುಂಬೈನ ಕಲ್ಯಾಣ್ ರೈಲು ನಿಲ್ದಾಣದಿಂದ ವಿಡಿಯೋವೊಂದು ವೈರಲ್ ಆಗುತ್ತಿದೆ.
  • ANI ಸುದ್ದಿ ಸಂಸ್ಥೆ ಈ ವಿಡಿಯೋವನ್ನು ಹಂಚಿಕೊಂಡಿದೆ.
  • ಮೈನವಿರೇಳಿಸುವ ಈ ವಿಡಿಯೋವನ್ನು ನೋಡಲು ಮರೆಯಬೇಡಿ.
Viral Video: ಟ್ರೈನ್ ಕೆಳಗಡೆ ಬಂದ 70 ವರ್ಷದ ವೃದ್ಧ, ಮುಂದೇನಾಯ್ತು ನೀವೇ ನೋಡಿ title=
Viral Video (Video Grab)

Viral Video: ಹಿಂದಿ ಭಾಷೆಯಲ್ಲಿ ಹೇಳಲಾಗುವ ಪ್ರಸಿದ್ಧ ನಾಣ್ನುಡಿ 'ಜಾಕೋ ರಾಖೆ ಸಾಯಿಯಾ, ಮಾರ್ ಸಾಕೆ ನಾ ಕೊಯ್' ಯನ್ನು ನೀವು ಕೇಳಿರಬಹುದು. ಆದರೆ, ಈ ರೀತಿ ನಡೆಯುವುದನ್ನು ಎಂದಾದರು ನೋಡಿದ್ದೀರಾ? ಒಂದು ವೇಳೆ ಇಲ್ಲ ಎಂದಾದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು (Train Video) ಒಮ್ಮೆ ವಿಕ್ಷೀಸಿ. ಈ ವಿಡಿಯೋ ನೋಡಿದ ಮೇಲೆ ನಿಮ್ಮ ಮೈ ಕೂಡ ನವಿರೇಳಲಿದೆ. 

ಈ ವಿಡಿಯೋ ಮುಂಬೈಗೆ ಹೊಂದಿಕೊಂಡಂತೆ ಇರುವ ಕಲ್ಯಾಣನಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ಇಲ್ಲಿನ ರೈಲು ಹಳಿಯ ಮೇಲೆ ಆಕಸ್ಮಿಕವಾಗಿ ವೃದ್ಧರೊಬ್ಬರು ಬಿದ್ದಿದ್ದಾರೆ. ಈ ದೃಶ್ಯ ನೋಡಿದ ಜನರ ಉಸಿರಾಟವೇ ಕೆಲ ಕ್ಷಣ ನಿಂತುಹೋಗಿದೆ.

ಆದರೆ, ರೈಲು ಚಾಲಕನ ಚಾಕಚಕ್ಯತೆಯ ಹಾಗೂ ಬುದ್ಧಿವಂತಿಕೆಯ ಕಾರಣ ವೃದ್ಧ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಸ್ತವದಲ್ಲಿ ವೃದ್ಧ ವ್ಯಕ್ತಿ (Senior Citizen Video) ರೈಲು ಹಳಿಯ ಮೇಲೆ ಬಿದ್ದಿರುವುದನ್ನು ಗಮನಿಸಿದ ರೈಲು ಚಾಲಕ ತಕ್ಷಣಕ್ಕೆ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾರೆ. ರೈಲೇನು ನಿಂತುಹೋಗಿದೆ ಆದರೆ, ವೃದ್ಧ ವ್ಯಕ್ತಿ ಮಾತ್ರ ಇಂಜಿನ್ ಮುಂಭಾಗದಲ್ಲಿ  ಕೆಳಗೆ ಸಿಲುಕಿಕೊಂಡರು. ತಕ್ಷಣಕ್ಕೆ ಅಲ್ಲಿಗೆ ಧಾವಿಸಿದ ರೇಲ್ವೆ ಸಿಬ್ಬಂದಿಗಳು ವೃದ್ಧನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಸುದ್ದಿ ಸಂಸ್ಥೆ ANI ಈ ವಿಡಿಯೋವನ್ನು ಹಂಚಿಕೊಂಡು, 'A senior citizen narrowly escaped death after a locomotive train in Mumbai’s Kalyan area applied emergency brakes to save the man as he was crossing the tracks' ಶೀರ್ಷಿಕೆಯನ್ನು ಬರೆದಿದೆ.

ಇದ್ನೂ ಓದಿ-Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್

ವೀಡಿಯೊ ವಿಕ್ಷೀಸಿ...!

ಇದನ್ನೂ ಓದಿ-Viral video: ಮನೆಯೊಳಗೆ ಸರಸರಣೆ ಬಂದು ಮಗು ಹಿಂಬಾಲಿಸಿದ ಕಾಳಿಂಗ ಸರ್ಪ..!

ಈ ವಿಡಿಯೋ ವೈರಲ್ (Trending Video) ಆಗುತ್ತಿದ್ದಂತೆ ಸೆಂಟ್ರಲ್ ರೇಲ್ವೆ ವಿಭಾಗ ವೃದ್ಧನ ಪ್ರಾಣ ರಕ್ಷಿಸಿದ ಮೂವರು ಸಿಬ್ಬಂದಿಗಳಿಗೆ ಪ್ರತ್ಯೇಕ ಎರಡು ಸಾವಿರ ಬಹುಮಾನ ನೀಡಿದೆ.

ಇದನ್ನೂ ಓದಿ-Viral Video: 6 ಸಾವಿರ ಅಡಿ ಎತ್ತರದಲ್ಲಿ ಉಯ್ಯಾಲೆ ತೂಗುತ್ತಿದ್ದ ಮಹಿಳೆಯರು, ಮುಂದೇನಾಯ್ತು? ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News