EPFO 6 ಕೋಟಿ ಚಂದಾದಾರರಿಗೆ ಮೋದಿ ಸರ್ಕಾರದ ಹೊಸ ವರ್ಷದ ಉಡುಗೊರೆ
EPFO: ದೇಶದ 6 ಕೋಟಿ EPFO ಚಂದಾದಾರರಿಗೆ ವರ್ಷ 2019-20ರ ಸಾಲಿನ ಶೇ.8.5 ರಷ್ಟು ಬಡ್ಡಿದರವನ್ನು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಜನರು ತಮ್ಮ ಖಾತೆಯಿಂದ ಈ ರಾಶಿಯನ್ನು ಹಿಂಪಡೆಯಬಹುದು.
ನವದೆಹಲಿ: EPFO - ದೇಶದ ಸುಮಾರು 6 ಕೋಟಿ EPFO ಚಂದಾದಾರರಿಗೆ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಹೌದು, ಚಂದಾದಾರರ ಪ್ರಾವಿಡೆಂಟ್ ಫಂಡ್ ಖಾತೆಗೆ ಬಡ್ಡಿಯನ್ನು ವರ್ಗಾಯಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಕಲ್ಯಾಣ ಸಚಿವ ಸಂತೋಷ ಗಂಗವಾರ್ ಈ ಕುರಿತು ಡಿಸೆಂಬರ್ 31 ರಷ್ಟು ಘೋಷಿಸಿದ್ದರು.
6 ಕೋಟಿ ಚಂದಾದಾರರಿಗೆ ನೇರ ಲಾಭ
ಈ ಕುರಿತು ಮಾಹಿತಿ ನೀಡಿರುವ ಗಂಗ್ವಾರ್, "6 ಕೋಟಿ EPF ಚಂದಾದಾರರ ಖಾತೆಯೇ ಶೇ.8.5 ರಷ್ಟು ಬಡ್ಡಿದರ ಜಾರಿಗೊಳಿಸಲಾಗಿದೆ ಎಂಬ ಮಾಹಿತಿ ನೀಡಲು ನನಗೆ ಅತೀವ ಹರ್ಷ ಉಂಟಾಗುತ್ತಿದೆ. ಜನರು ತಮ್ಮ ಖಾತೆಯಿಂದ ಈ ಹಣವನ್ನು ಹಿಂಪಡೆಯಬಹುದು.
ಇದನ್ನು ಓದಿ- Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA
'ನಾವು ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ'
2020 ರ ವರ್ಷ ನಮ್ಮ ಪರವಾಗಿರಲಿಲ್ಲ ಎಂದು ಹೇಳಿರುವ ಅವರು, ಕರೋನಾ ವೈರಸ್‌ನಿಂದ ದೇಶದ ಆರ್ಥಿಕತೆಯು ಸಾಕಷ್ಟು ನಷ್ಟ ಅನುಭವಿಸಿದೆ. ಅದೇನೇ ಇದ್ದರೂ, ನಾವು ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಮತ್ತು ಬಡ್ಡಿ ಮೊತ್ತವನ್ನು ಶೇಕಡಾ 8.5 ದರದಲ್ಲಿ ಜನರ ಖಾತೆಗೆ ವರ್ಗಾಯಿಸಿದ್ದೇವೆ. ಇಪಿಎಫ್‌ಒ ಖಾತೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಮನೆಯಲ್ಲಿಯೂ ಕುಳಿತುಕೊಂಡು ಪರಿಶೀಲಿಸಬಹುದು.ಪರಿಶೀಲಿಸಬಹುದು. ಇದಕ್ಕಾಗಿ, ಅವರು SMS, ಆನ್‌ಲೈನ್, ಮಿಸ್ಡ್ ಕಾಲ್ ಅಥವಾ UMANG ಅಪ್ಲಿಕೇಶನ್ ಅನ್ನು ಬಳಸಬಹುದು.
ಇದನ್ನು ಓದಿ-Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು
ಆನ್ಲೈನ್ ನಲ್ಲಿ ಈ ರೀತಿ ಬ್ಯಾಲೆನ್ಸ್ ಪರಿಶೀಲಿಸಬಹುದು
ಇದಕ್ಕಾಗಿ ಮೊದಲು epfindia.gov.in ಜಾಲತಾಣಕ್ಕೆ ಭೇಟಿ ನೀಡಿ. ಬಳಿಕ ನಿಮ್ಮ UAN ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ. ಬಳಿಕ ಇ-ಪಾಸ್ಬುಕ್ ಮೇಲೆ ಕ್ಲಿಕ್ಕಿಸಿ. ಅಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿದ ಬಳಿಕ ಹೊಸ ಪುಟವೊಂದು ತೆರೆದುಕೊಳ್ಳಲಿದೆ. ಆ ಪುಟದಲ್ಲಿ ನಿಮ್ಮ ಸದಸ್ಯ ಸಂಖ್ಯೆಯನ್ನು ನಮೂದಿಸಿ. ಈಗ ನೀವು ನಿಮ್ಮ ಪಿಎಫ್ ಖಾತೆ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಇದನ್ನು ಓದಿ- Gold and Silver Rates: ಮರು ಮೆರಗು ಪಡೆಯಿತೆ ಚಿನ್ನ? ಹೊಳಪು ಕಳೆದುಕೊಂಡಿತೆ ಬೆಳ್ಳಿ? ಇಲ್ಲಿದೆ ಉತ್ತರ
UMANG Appನಲ್ಲಿ ಈ ರೀತಿ ಬ್ಯಾಲೆನ್ಸ್ ಚೆಕ್ ಮಾಡಿ
ಇದಕ್ಕಾಗಿ UMANG App ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ. ನಂತರ EPFO ಮೇಲೆ ಕ್ಲಿಕ್ ಮಾಡಿ. ನಂತರ ನೀವು Employee Centric Servicesಗೆ ತಲುಪುವಿರಿ. ಅದನ್ನು ಕ್ಲಿಕ್ಕಿಸಿದ ಬಳಿಕ ನಿಮಗೆ View Passbook ಆಯ್ಕೆ ಕಾಣಿಸಿಕೊಳ್ಳಲಿದೆ. ಅಲ್ಲಿ ನೀವು ನಿಮ್ಮ UAN ಸಂಖ್ಯೆ ಹಾಗೂ ಪಾನ್ ಸಂಖ್ಯೆಯನ್ನು ನಮೂದಿಸಿ. ಈಗ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಈ OTPಯನ್ನು ಆಪ್ ನಲ್ಲಿ ನಮೂದಿಸಿ ನೀವು ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು.
ಇದನ್ನು ಓದಿ-ಇನ್ಮುಂದೆ ಇವರಿಗೂ ಸಿಗಲಿದೆ PF ಲಾಭ, ಈ ಯೋಜನೆಯಡಿ 40 ಕೋಟಿ ಜನರು ಶಾಮೀಲು
SMS ಮೂಲಕ ನಿಮ್ಮ EPF ಬ್ಯಾಲೆನ್ಸ್ ಈ ರೀತಿ ಪರಿಶೀಲಿಸಿ
ಕಿರು ಸಂದೇಶ ಸೇವೆಯನ್ನು ಬಳಸಿ EPF ಖಾತೆಯ ಬಾಕಿ ಪರಿಶೀಲಿಸಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು UAN ಪೋರ್ಟಲ್ ನಲ್ಲಿ ನೋದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು 'EPFOHO UAN ಬರೆದು 7738299899 ಸಂಖ್ಯೆಗೆ SMS ಕಳುಹಿಸಿ. ಇದಾದ ಬಳಿಕ ನೀವು ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಬಹುದು.
ಇದನ್ನು ಓದಿ- Indian Economy 2020: ವರ್ಷ 2030ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ... No.1 ಯಾರು?
ಮಿಸ್ಸಡ್ ಕಾಲ್ ಮೂಲಕ ಕೂಡ ಖಾತೆಯಲ್ಲಿನ ಬಾಕಿ ಹಣದ ಕುಳಿತು ಪರಿಶೀಲಿಸಬಹುದು
EPFO ಖಾತೆ ಧಾರಕರು ಮಿಸ್ಸಡ್ ಕಾಲ್ ನೀಡಿಯೂ ಕೂಡ ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಆದರೆ ಇದಕ್ಕಾಗಿ ಖಾತೆದಾರರ ಮೊಬೈಲ್ ಸಂಖ್ಯೆ UAN ಪೋರ್ಟಲ್ ನಲ್ಲಿ ನಮೂದಗಿರಬೇಕು. ಇದಾದ ಬಳಿಕ ಖಾತೆದಾರರು 011-22901406 ಗೆ ಮಿಸ್ಸಡ್ ಕಾಲ ನೀಡುವ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.