ನವದೆಹಲಿ: Gold and Silver Rates: ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಎಂಸಿಎಕ್ಸ್‌ನಲ್ಲಿ ಸೋಮವಾರ ಚಿನ್ನವು ಅಲ್ಪ ಲಾಭ ಗಳಿಕೆ ಮಾಡಿದೆ. ಇದು ಹತ್ತು ಗ್ರಾಂಗೆ 0.11 ರಷ್ಟು ಏರಿಕೆ ಕಂಡು 50,067 ರೂ. ತಲುಪಿದೆ. ಇದೇ ವೇಳೆ ಕಳೆದ ಐದು ಸೆಷನ್‌ಗಳಲ್ಲಿ ಚಿನ್ನವು 50 ಸಾವಿರ ರೂ.ಗಳಿಂದ 50,500 ರೂ.ಗೆ ಏರಿದೆ. ಬೆಳ್ಳಿ ಶೇಕಡಾ 0.24 ರಷ್ಟು ಇಳಿಕೆ ಕಂಡು ಕೆ.ಜಿ.ಗೆ 68,650 ರೂಪಾಯಿಗೆ ಮಾರಾಟವಾಗಿದೆ.ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಟಿಮ್ಯುಲಸ್ ಪ್ಯಾಕೇಜ್ ಅನುಮೋದನೆ, ಜಾಗತಿಕವಾಗಿ ಚಿನ್ನದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತ್ತು ಚಿನ್ನದ ಬೆಲೆಯೂ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇದನ್ನು ಓದಿ- CBI Missing Gold: CBI ವಶದಲ್ಲಿದ್ದ 45 ಕೋಟಿ ರೂ.ಮೌಲ್ಯದ Gold ಮಾಯ, 103 ಕೆ.ಜಿ ಚಿನ್ನ ಸಿಗುತ್ತಿಲ್ಲವಂತೆ
ಅಮೇರಿಕಾದಲ್ಲಿ ಸ್ಟಿಮ್ಯುಲಸ್ ಪ್ಯಾಕೇಜ್ ಘೋಷಣೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರು ಮೆರಗು ಪಡೆದ ಚಿನ್ನ
ಇದಕ್ಕೂ ಮೊದಲು ಯುಎಸ್ ಸಂಸತ್ತು ಸ್ಟಿಮ್ಯುಲಸ್ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಇದರಿಂದ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ಶೇ.0.1 ರಷ್ಟು ಏರಿಕೆಯಾಗಿ 75 1875.61 ಕ್ಕೆ ತಲುಪಿದೆ. ಈ ಬಗ್ಗೆ ಹೂಡಿಕೆದಾರರಲ್ಲಿ ಉತ್ಸಾನ ಮರುಕಳಿಸಿದೆ. ಈ ಕಾರಣದಿಂದಾಗಿ, ವಾಲ್ ಸ್ಟ್ರೀಟ್ ಮತ್ತು ಏಷ್ಯಾದ ಅನೇಕ ಸ್ಟಾಕ್ ಮಾರುಕಟ್ಟೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಏತನ್ಮಧ್ಯೆ, ದೆಹಲಿ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಹತ್ತು ಗ್ರಾಂಗೆ 49,740 ರೂ. ರಷ್ಟಿತ್ತು. ಆದರೆ, ಇದು ಹಿಂದಿನ ವಾರದ ಸರಾಸರಿಗೆ ಹೋಲಿಸಿದರೆ ಹತ್ತು ಗ್ರಾಂಗೆ 49,804 ರೂ.ಗಿಂತ ಕಡಿಮೆಯೇ ಆಗಿದೆ. ಡಿಸೆಂಬರ್ 28 ರಂದು ಗೋಲ್ಡ್ (Gold) ಫ್ಯೂಚರ್ ಹತ್ತು ಗ್ರಾಂಗೆ 0.19 ರಷ್ಟು ಏರಿಕೆ ಕಂಡು 50,858 ರೂ.ಗಳಿಗೆ ತಲುಪಿತ್ತು. ತನ್ನ ಕೊನೆಯ ಸೆಷನ್ಸ್ ನಲ್ಲಿ ಚಿನ್ನವು ಶೇಕಡಾ 1.29 ರಷ್ಟು ಏರಿಕೆ ಕಂಡು ಹತ್ತು ಗ್ರಾಂಗೆ 96.63 ರೂ. ಏರಿಕೆಯಾಗಿತ್ತು.
ಇದನ್ನು ಓದಿ-ವಾಟ್ಸಾಪ್ ಮೂಲಕ ಚಿನ್ನವನ್ನು ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೇಗೆಂದು ತಿಳಿಯಿರಿ
Gold ETF, SPDR Gold Trust ಹೋಲ್ಡಿಂಗ್ ನಲ್ಲಿ ಏರಿಕೆ
ಇನ್ನೊಂದೆಡೆ ವಿಶ್ವದ ಅತಿದೊಡ್ಡ ಚಿನ್ನ ಆಧಾರಿತ ಇಟಿಎಫ್ ಹಿಡುವಳಿ ಶೇಕಡಾ 0.2 ರಷ್ಟು ಏರಿಕೆ ಕಂಡು 1169.86 ಟನ್‌ಗಳಿಗೆ ತಲುಪಿದೆ. ದೇಶೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ಕಡಿಮೆಯಾಗಿದೆ ಆದರೆ ಈ ವರ್ಷದಲ್ಲಿ ಇನ್ನೂ ಶೇ.25 ರಷ್ಟು ಏರಿಕೆ ಕಾಯ್ದುಕೊಂಡಿದೆ. ಈ ವರ್ಷದ ಆಗಸ್ಟ್‌ನಲ್ಲಿ ಹತ್ತು ಗ್ರಾಂ. ಚಿನ್ನದ ಬೆಲೆ 56,200 ರೂ.ಗೆ ತಲುಪಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.