ನವದೆಹಲಿ: ದೇಶದಲ್ಲಿ ಕರೋನವೈರಸ್ (Coronavirus)  ಸೋಂಕು ಹೆಚ್ಚುತ್ತಿದೆ. ಪ್ರಸ್ತುತ ಪ್ರತಿದಿನ ಸುಮಾರು ಆರು ಸಾವಿರ ಹೊಸ ಪ್ರಕರಣಗಳು ಹೊರಬರುತ್ತಿವೆ.  ಈ ಸಮಯದಲ್ಲಿ ಸಾಮಾನ್ಯ ಶೀತ, ಜ್ವರ ಬಂದರೂ ಜನರು ಗಾಬರಿಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕರೋನಾ ಭೀತಿ ಹೆಚ್ಚಾಗಿದೆ. ಅದಾಗ್ಯೂ ಜ್ವರ ಬಂದರೂ ಕೆಲವರು ಇದನ್ನು ಸಾಮಾನ್ಯ ಸೋಂಕು ಎಂದು ಆಸ್ಪತ್ರೆಗೆ ಹೋಗುವುದಿಲ್ಲ. ಇನ್ನೂ ಕೆಲವರು ಆಸ್ಪತ್ರೆಗೆ ಹೋದರೆ ಎಲ್ಲಿ ಕರೋನಾವೈರಸ್ ಕೋವಿಡ್ -19 (Covid-19) ಸೋಂಕು ತಾಗುವುದೋ ಎಂಬ ಭಯಕ್ಕೆ ವೈದ್ಯರನ್ನು ಸಂಪರ್ಕಿಸಲು ಹೋಗುವುದಿಲ್ಲ. ಜನರ ಈ ಸಮಸ್ಯೆಯನ್ನು ಹೋಗಲಾಡಿಸಲು, ನೋಯ್ಡಾ ಪ್ರಾಧಿಕಾರವು ಒಂದೇ ಒಂದು ಕರೆಯಲ್ಲಿ ವೈದ್ಯರು ಲಭ್ಯವಾಗುವಂತೆ ಕ್ರಮ ಕೈಗೊಂಡಿದೆ.


COMMERCIAL BREAK
SCROLL TO CONTINUE READING

ನೋಯ್ಡಾ ಪ್ರಾಧಿಕಾರವು ಟ್ವೀಟ್ ಮಾಡುವ ಮೂಲಕ ಇದರ ಬಗ್ಗೆ ಮಾಹಿತಿ ನೀಡಿದೆ. ನೋಯ್ಡಾ ಪ್ರಾಧಿಕಾರವು ಲಾಕ್‌ಡೌನ್ (Lockdown)‌ ಸಮಯದಲ್ಲಿ ಪ್ರಾಧಿಕಾರವು ನೋಯ್ಡಾ ನಿವಾಸಿಗಳಿಗೆ   ಡಾಕ್ಟರ್-ಆನ್-ಕಾಲ್ ಸೇವೆಯನ್ನು ಪ್ರಾರಂಭಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 0120-2422317 ಗೆ ಕರೆ ಮಾಡಿ ನಿಮ್ಮ ರೋಗದ ಪ್ರಕಾರ ಕೌನ್ಸೆಲಿಂಗ್ ಪಡೆಯಬಹುದು. ಭಾರತೀಯ ವೈದ್ಯ ಸಂಘದ ಸಹಯೋಗದೊಂದಿಗೆ ಈ ವೈದ್ಯರ ಸಮಾಲೋಚನೆ ಸೇವೆಯನ್ನು ಪ್ರಾರಂಭಿಸಲಾಗಿದೆ.



ಲಾಕ್ ಡೌನ್ ಸಮಯದಲ್ಲಿ ನೋಯ್ಡಾ ಜನರಿಗೆ ಅನುಕೂಲಕ್ಕಾಗಿ ಪ್ರಾಧಿಕಾರವು ಈ ಸೇವೆಯನ್ನು ಪ್ರಾರಂಭಿಸಿದೆ. ನೋಯ್ಡಾ ಜನರು ನೋಯ್ಡಾ ಪ್ರಾಧಿಕಾರವು ಒದಗಿಸಿದ ಸಂಖ್ಯೆ 0120-2422317 ಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸಂಪರ್ಕಿಸಬಹುದು.