Farmers ಆದಾಯ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ
Cabinet Decision for farmers: ಈಗ ಕಬ್ಬಿನ ಜೊತೆಗೆ ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳದಂತಹ ಇತರ ಧಾನ್ಯಗಳಿಂದ ಎಥೆನಾಲ್ ತಯಾರಿಸಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ಕ್ಯಾಬಿನೆಟ್ನ ಈ ಮಹತ್ವದ ನಿರ್ಧಾರದಿಂದಾಗಿ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ಈ ಹಂತವು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳಲಾಗಿದೆ.
ನವದೆಹಲಿ: ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆ ಎಥೆನಾಲ್ ಉತ್ಪಾದನೆಗೆ ಬಡ್ಡಿ ಸಬ್‌ವೆನ್ಷನ್ ಹೆಚ್ಚಿಸಲು ಅನುಮೋದನೆ ನೀಡಿತು. ಎಥೆನಾಲ್ ಉತ್ಪಾದಿಸುವ ಹೊಸ ಕಂಪನಿಗಳಿಗೆ ಸರ್ಕಾರ 4,573 ಕೋಟಿ ರೂ. ಬಡ್ಡಿಯ ಮೇಲೆ ಸಬ್ಸಿಡಿ ನೀಡಲಿದೆ.
ಧಾನ್ಯಗಳಿಂದ ಎಥೆನಾಲ್ ತಯಾರಿಸಲಾಗುತ್ತದೆ:
ಎಥೆನಾಲ್ ಒಂದು ರೀತಿಯ ಆಲ್ಕೋಹಾಲ್ (Alcohol) ಆಗಿದೆ. ಇದನ್ನು ಪೆಟ್ರೋಲ್ನಲ್ಲಿ ಬೆರೆಸಿದ ನಂತರ ವಾಹನಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಎಥೆನಾಲ್ ಅನ್ನು ಇನ್ನೂ ಕಬ್ಬಿನಿಂದ ಉತ್ಪಾದಿಸಲಾಗುತ್ತದೆ. ಆದರೆ ಈಗ ಧಾನ್ಯಗಳಿಂದ ಸಹ ಎಥೆನಾಲ್ ತಯಾರಿಸಲಾಗುವುದು. ಧಾನ್ಯಗಳಿಂದ ಎಥೆನಾಲ್ ತಯಾರಿಸುವ ಪ್ರಸ್ತಾಪಕ್ಕೂ ಸಂಪುಟ ಅನುಮೋದನೆ ನೀಡಿತು. ಅಂದರೆ ಕಬ್ಬಿನ ಜೊತೆಗೆ ಅಕ್ಕಿ, ಜೋಳ, ಗೋಧಿಯಿಂದಲೂ ಎಥೆನಾಲ್ ತಯಾರಿಸಬಹುದು. ಆದ್ದರಿಂದ ಭವಿಷ್ಯದ ಅಗತ್ಯಗಳನ್ನು ಪೂರೈಸಬಹುದು ಎಂದು ಹೇಳಲಾಗಿದೆ.
ಎಥೆನಾಲ್ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ :
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan), 2030 ರ ವೇಳೆಗೆ ದೇಶಕ್ಕೆ ಪೆಟ್ರೋಲ್‌ಗೆ 1000 ಕೋಟಿ ಲೀಟರ್ ಎಥೆನಾಲ್ ಸೇರಿಸುವ ಅಗತ್ಯವಿರುತ್ತದೆ. ಇದರೊಂದಿಗೆ ಇತರ ದೇಶಗಳಿಂದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಭಾರತದ ಪ್ರಸ್ತುತ ಸಾಮರ್ಥ್ಯ ಕೇವಲ 684 ಕೋಟಿ ಲೀಟರ್ ಆಗಿದೆ. 2013-14ನೇ ಸಾಲಿನಲ್ಲಿ ಭಾರತ 1500 ಕೋಟಿ ಮೌಲ್ಯದ ಎಥೆನಾಲ್ ಖರೀದಿಸಿತು. ಪ್ರಸ್ತುತ 9,169 ಕೋಟಿ ಖರೀದಿಸುತ್ತಿದೆ. ನಂತರ ನಾವು 19 ಸಾವಿರ ಕೋಟಿ ರೂಪಾಯಿಗಳನ್ನು ಖರೀದಿಸುತ್ತೇವೆ. ಇದರಿಂದ ರೈತರಿಗೆ ಲಾಭವಾಗಲಿದೆ ಎಂದರು.
ಇದನ್ನೂ ಓದಿ : Farmer Protest : ಕೇಂದ್ರ ಸರ್ಕಾರ -ರೈತ ಸಂಘಟನೆಗಳ ಮಾತುಕತೆ ; ನಾಲ್ಕು ಬೇಡಿಕೆಗಳ ಪೈಕಿ ಎರಡನ್ನು ಈಡೇರಿಸಲು ಒಪ್ಪಿದ ಸರ್ಕಾರ
ರೈತರಿಗೆ ಅನುಕೂಲ:
ಸರ್ಕಾರದ ಈ ನಿರ್ಧಾರವು ದೇಶದ ರೈತರಿಗೆ (Farmers) ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಅವರು ಭತ್ತವನ್ನು ಮಾರಾಟ ಮಾಡಲು ಹೊಸ ಆಯ್ಕೆಯನ್ನು ಪಡೆಯುತ್ತಾರೆ. ಭಾರತ ಅಕ್ಕಿ ರಫ್ತುದಾರ. ಅಂತಹ ಪರಿಸ್ಥಿತಿಯಲ್ಲಿ ಅಕ್ಕಿಯಿಂದ ಎಥೆನಾಲ್ ತಯಾರಿಸುವ ಮೂಲಕ ಪೆಟ್ರೋಲಿಯಂ ಆಮದು ಕಡಿಮೆಯಾಗುತ್ತದೆ.
ರೈತರಿಗೆ ಸಕಾಲದಲ್ಲಿ ಪಾವತಿ ಸಿಗುತ್ತದೆ :
ಕೃಷಿ (Agriculture) ಉತ್ಪನ್ನಗಳಿಂದ ಉತ್ಪತ್ತಿಯಾಗುವ ಎಥೆನಾಲ್ ಉತ್ಪಾದಿಸುವ ಬಟ್ಟಿ ಇಳಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಂಪುಟ ನಿರ್ಧಾರದ ಬಗ್ಗೆ ತಿಳಿಸಿದರು. ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ರೈತರಿಗೆ ಸಮಯಕ್ಕೆ ವೇತನವನ್ನು ನೀಡಲಿದೆ ಎಂದು ವಿವರಿಸಿದರು.
ಇದನ್ನೂ ಓದಿ : Farmers Protest: ರೈತರು ಮತ್ತು ಕೇಂದ್ರದ 6 ನೇ ಸಂಧಾನ ಸಭೆ ಮತ್ತೆ ವಿಫಲ..!
ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಅನುಕೂಲಗಳೇನು?
ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಅನುಕೂಲವೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಆಮದು ಹೊರೆ ಕಡಿಮೆಯಾಗುತ್ತದೆ. ದೇಶೀಯ ಅಗತ್ಯವನ್ನು ಪೂರೈಸಲು ಭಾರತವು ಪ್ರತಿವರ್ಷ ಸುಮಾರು 8 ಲಕ್ಷ ಕೋಟಿ ರೂಪಾಯಿ ಪೆಟ್ರೋಲ್ (Petrol) ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಎಥೆನಾಲ್ ಸೇರಿಸುವುದರಿಂದ ಕಚ್ಚಾ ತೈಲ ಆಮದು ಕಡಿಮೆಯಾಗುತ್ತದೆ.
ಪೆಟ್ರೋಲ್‌ಗೆ 2022 ರ ವೇಳೆಗೆ 10 ಪ್ರತಿಶತ ಎಥೆನಾಲ್ ಅನ್ನು ಮತ್ತು 2030 ರ ವೇಳೆಗೆ 20 ಪ್ರತಿಶತದಷ್ಟು ಎಥೆನಾಲ್ ಬೆರೆಸುವ ಗುರಿಯನ್ನು ಸರ್ಕಾರ ಹೊಂದಿದೆ. ಕಬ್ಬಿನ ಹೊರತಾಗಿ ಸರ್ಕಾರದ ನಿರ್ಧಾರದೊಂದಿಗೆ ಅಕ್ಕಿ, ಗೋಧಿ, ಮೆಕ್ಕೆಜೋಳದಂತಹ ಧಾನ್ಯಗಳಿಂದ ಎಥೆನಾಲ್ ಉತ್ಪಾದಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.