ನವದೆಹಲಿ: ಈ ದಿನಗಳಲ್ಲಿ ಎಲ್ಲರ ಮನಸ್ಸಿನಲ್ಲಿಯೂ ಕರೋನಾವೈರಸ್ (Coronavirus) ಭಯವಿದೆ. ದೇಶದಲ್ಲಿ ಅನ್ಲಾಕ್ ಅನ್ನು ಪರಿಚಯಿಸಿದ ನಂತರ ಪ್ರತಿಯೊಬ್ಬರೂ ಒಂದು ದಿನ ಕರೋನಾವೈರಸ್ ಸೋಂಕು ಹೆಚ್ಚಾಗಬಹುದು ಎಂದು ಜನ ಯೋಚಿಸಲು ಪ್ರಾರಂಭಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕರೋನಾ ಟೆಸ್ಟ್ ಮಾಡಿಸಿ ಅದು ನೆಗೆಟಿವ್ ಎಂದು ಬಂದಾಗಲಷ್ಟೇ ಹಲವರ ಮನಸ್ಸಿಗೆ ಶಾಂತಿ ಸಿಗುತ್ತದೆ. ಆದರೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕರೋನಾ ಟೆಸ್ಟ್ ಮಾಡಿಸಲು ಸಾಧ್ಯವಿಲ್ಲ ಎಂಬುದರಿಂದಾಗಿ ಹಲವು ಜನರು ಕರೋನಾ ಪರೀಕ್ಷೆಯನ್ನು ಮಾಡಲು ಹಿಂಜರಿಯುತ್ತಾರೆ. ಆದರೆ ಈಗ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಈಗ ನೀವು ಯಾವುದೇ ವೈದ್ಯಕೀಯ ಸ್ಲಿಪ್ ಇಲ್ಲದೆ ಕರೋನಾ ಟೆಸ್ಟ್ ಮಾಡಬಹುದು.


ಕರೋನಾ: ಜೂನ್ ಅತ್ಯಂತ ಭಯಾನಕ ತಿಂಗಳು, ಒಟ್ಟು ಮೃತಪಟ್ಟವರಲ್ಲಿ 70% ಈ 3 ರಾಜ್ಯದವರು


COMMERCIAL BREAK
SCROLL TO CONTINUE READING

ಹೊಸ ಮಾರ್ಗಸೂಚಿ ಬಿಡುಗಡೆ :
ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಎಲ್ಲಾ ರಾಜ್ಯಗಳಿಗೆ ಪತ್ರವೊಂದನ್ನು ಬರೆದಿದ್ದು, ಕರೋನಾ ಪರೀಕ್ಷೆಗೆ ವೈದ್ಯಕೀಯ ಸ್ಲಿಪ್ ಕಡ್ಡಾಯ ಎಂಬ ನಿಯಮವನ್ನು ತಕ್ಷಣ ರದ್ದುಪಡಿಸಬೇಕು ಎಂದು ನಿರ್ದೇಶಿಸಿದೆ. ಕರೋನಾವೈರಸ್ ಟೆಸ್ಟ್ ಮಾಡಿಸಲು ವೈದ್ಯರ ಅನುಮತಿ ಕಡ್ಡಾಯ ಎಂದು ಹೇಳಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಒತ್ತಡವಿದೆ ಎಂದು ರಾಜ್ಯಗಳಿಗೆ ತಿಳಿಸಲಾಗಿದೆ. ಈ ನಿಯಮದಿಂದಾಗಿ ಸಾಮಾನ್ಯ ಜನರಿಗೆ ಕರೋನಾ ಪರೀಕ್ಷೆಯನ್ನು ಪಡೆಯಲು ಬಹಳ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ.


ಕಡೆಗೂ ಸಿದ್ದವಾಯ್ತು ಕರೋನಾವೈರಸ್ ಗುಣಪಡಿಸುವ ಔಷಧ, ಕ್ಲಿನಿಕಲ್ ಪ್ರಯೋಗ 94% ಯಶಸ್ವಿ


ಯಾವುದೇ ವೈದ್ಯಕೀಯ ಸ್ಲಿಪ್ ಇಲ್ಲದೆ ರಾಜ್ಯಗಳ ಎಲ್ಲಾ ಪರೀಕ್ಷಾ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಐಸಿಎಂಆರ್ ತಿಳಿಸಿದೆ. ಅದೇ ಸಮಯದಲ್ಲಿ ಪರೀಕ್ಷಾ ಸ್ಲಿಪ್ ಅನ್ನು ಸರ್ಕಾರಿ ವೈದ್ಯರಿಂದ ಮಾತ್ರ ತೆಗೆದುಕೊಳ್ಳುವ ಅಗತ್ಯವನ್ನು ತೆಗೆದುಹಾಕುವ ಮೂಲಕ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹ ತನಿಖೆಗೆ ಅವಕಾಶ ನೀಡುವ ಹಕ್ಕನ್ನು ಪಡೆಯಬಹುದಾಗಿದೆ.


ಭಾರತದಲ್ಲಿ ಬುಧವಾರ  ಕೋವಿಡ್-19 (COVID-19)  ಕರೋನವೈರಸ್‌ನಿಂದಾಗಿ 507 ಜನರು ಸಾವನ್ನಪ್ಪಿದ್ದಾರೆ, ಇದು ದೇಶದಲ್ಲಿ ಒಂದು ದಿನದಲ್ಲಿ ಕರೋನಾದಿಂದಾಗಿ ಮೃತಪಟ್ಟವರ ಅತ್ಯಧಿಕ ಸಂಖ್ಯೆ.  ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 18,653 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿ ಒಟ್ಟು ಸೋಂಕಿತರ ಸಂಖ್ಯೆ 5,85,493ಕ್ಕೆ ಏರಿದೆ ಎಂದು ಈವರೆಗಿನ ದತ್ತಾಂಶಗಳಿಂದ ತಿಳಿದುಬಂದಿದೆ. ಅದೇ ಸಮಯದಲ್ಲಿ ಈ ಕಾಯಿಲೆಯಿಂದ ಚೇತರಿಸಿಕೊಳ್ಳುವ ಪ್ರಮಾಣವು ಹಂತಹಂತವಾಗಿ ಉತ್ತಮಗೊಳ್ಳುತ್ತಿದೆ ಮತ್ತು ಇದು 60 ಪ್ರತಿಶತದಷ್ಟು ತಲುಪಿದೆ.