ಕಡೆಗೂ ಸಿದ್ದವಾಯ್ತು ಕರೋನಾವೈರಸ್ ಗುಣಪಡಿಸುವ ಔಷಧ, ಕ್ಲಿನಿಕಲ್ ಪ್ರಯೋಗ 94% ಯಶಸ್ವಿ

ಈ ಲಸಿಕೆಯನ್ನು ಇಂಜೆಕ್ಷನ್ ಸಹಾಯದಿಂದ ದೇಹದೊಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಔಷಧವು ಒಟ್ಟಾರೆ ಒಂದು ರೀತಿಯ ಡಿಎನ್‌ಎ ಆಗಿದ್ದು ಅದು ದೇಹದೊಳಗಿನ ಕರೋನಾವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ.

Last Updated : Jul 2, 2020, 08:45 AM IST
ಕಡೆಗೂ ಸಿದ್ದವಾಯ್ತು ಕರೋನಾವೈರಸ್ ಗುಣಪಡಿಸುವ ಔಷಧ, ಕ್ಲಿನಿಕಲ್ ಪ್ರಯೋಗ 94% ಯಶಸ್ವಿ  title=

ನವದೆಹಲಿ: ಪ್ರಪಂಚದಾದ್ಯಂತದ ವಿಜ್ಞಾನಿಗಳು ಕರೋನಾವೈರಸ್ (Coronavirus)  ವಿರುದ್ಧ ಹೋರಾಡಲು ಲಸಿಕೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಎಲ್ಲಾ ಕಂಪನಿಗಳು ಲಸಿಕೆಗಳನ್ನು ಮಾತ್ರ ತಯಾರಿಸಿವೆ ಎಂದು ಹೇಳಿಕೊಂಡಿವೆ. ಆದರೆ ಲಸಿಕೆ ಮಾನವರ ಮೇಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದಾಗ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಈಗ ಏತನ್ಮಧ್ಯೆ ಅಮೆರಿಕದ (America) ಲಸಿಕೆ ಕಂಪೆನಿಯು ಲಸಿಕೆಯನ್ನು ಸಿದ್ಧಪಡಿಸಿರುವುದು ಮಾತ್ರವಲ್ಲದೆ ಯಶಸ್ವಿ ಕ್ಲಿನಿಕಲ್ ಪ್ರಯೋಗವನ್ನೂ ಮಾಡಿದೆ ಎಂದು ಹೇಳಿದೆ.

ಲಭ್ಯವಾದ ಮಾಹಿತಿಯ ಪ್ರಕಾರ ಅಮೆರಿಕದ ಔಷಧೀಯ ಕಂಪನಿ ಇನೋವಿಯೊ ತನ್ನ ಹೊಸ ಲಸಿಕೆ ಐಎನ್‌ಒ -4800 ಅನ್ನು ಮಾನವರ ಮೇಲೆ ಯಶಸ್ವಿ ಕ್ಲಿನಿಕಲ್ ಪ್ರಯೋಗ ಮಾಡಿದೆ. ಈ ಲಸಿಕೆಯನ್ನು ಸುಮಾರು 40 ಜನರಿಗೆ ಪರೀಕ್ಷಿಸಲಾಗಿದ್ದು ಈ ಔಷಧಿಯ ಪರಿಣಾಮವು ಶೇಕಡಾ 94 ರಷ್ಟು ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಈಗಿನದು ಏನೇನೂ ಅಲ್ಲ, ಅಮೆರಿಕಕ್ಕೆ ಅಪ್ಪಳಿಸಲಿದೆ ಕರೋನಾ ಸುನಾಮಿ

ಈ ಲಸಿಕೆಯಲ್ಲಿನ ವಿಶೇಷತೆ ಏನು ?
ಹೊಸ ಲಸಿಕೆ ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಲಸಿಕೆಯನ್ನು ಇಂಜೆಕ್ಷನ್ ಸಹಾಯದಿಂದ ದೇಹದೊಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಔಷಧವು ಒಟ್ಟಾರೆ ಒಂದು ರೀತಿಯ ಡಿಎನ್‌ಎ ಆಗಿದ್ದು ಅದು ದೇಹದೊಳಗಿನ ಕರೋನಾವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕರೋನಾವೈರಸ್  ಕೋವಿಡ್-19 (COVID-19)  ಲಸಿಕೆಯನ್ನು ಆದಷ್ಟು ಬೇಗ ತಯಾರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೋವಿಯಾ ಕಂಪನಿಯನ್ನು ತೊಡಗಿಸಿಕೊಂಡಿದ್ದಾರೆ. ಹೊಸ ಲಸಿಕೆ ಪ್ರಯೋಗಗಳನ್ನು ಈಗಾಗಲೇ ಎಫ್ಡಿಎ ಅನುಮೋದಿಸಿದೆ. ಯೋಜನೆಯಡಿಯಲ್ಲಿ ಈ ಲಸಿಕೆ ಕಂಪನಿಯು ಮುಂದಿನ ಜನವರಿಯೊಳಗೆ 300 ಮಿಲಿಯನ್ ಲಸಿಕೆಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.

Trending News