ನವದೆಹಲಿ: ಕೋವಿಡ್-19 ಹೊಸ ರೂಪಾಂತರ ‘ಓಮಿಕ್ರಾನ್’(Omicron) ಮುನ್ನೆಲೆಗೆ ಬಂದ ನಂತರ ದೇಶದ ಜನರಿಗೆ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ನೀಡಲು ತಯಾರಿ ನಡೆಯುತ್ತಿದೆಯೇ? ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಉತ್ತರಿಸಿದ್ದಾರೆ.


COMMERCIAL BREAK
SCROLL TO CONTINUE READING

ತಜ್ಞರ ಸಲಹೆ ನಂತರ ನಿರ್ಧಾರ  


ಶುಕ್ರವಾರ ಲೋಕಸಭೆಯಲ್ಲಿ ಕೊರೊನಾ(CoronaVirus) ಸಾಂಕ್ರಾಮಿಕ ರೋಗ ಕುರಿತ ಚರ್ಚೆಗೆ ಮಾಂಡವಿಯಾ ಉತ್ತರ ನೀಡುತ್ತಿದ್ದರು. ದೇಶವಾಸಿಗಳಿಗೆ ಬೂಸ್ಟರ್ ಅಥವಾ 3ನೇ ಡೋಸ್ ಕೊರೊನಾ ಲಸಿಕೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ತಜ್ಞರ ಸಲಹೆಯ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರೊಂದಿಗೆ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆಯೂ ವಿಜ್ಞಾನಿಗಳಿಂದ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Cyclone Jawad: ಆಂಧ್ರಪ್ರದೇಶದ ಮೂರು ಜಿಲ್ಲೆಗಳಿಂದ 54,008 ಜನರ ಸ್ಥಳಾಂತರ


ಕೊರೊನಾ ಲಸಿಕೆಯಲ್ಲಿ 2 ಆಯ್ಕೆಗಳು


ಕೊರೊನಾ ಲಸಿಕೆ ಬಗ್ಗೆ ನಮಗೆ 2 ಆಯ್ಕೆಗಳಿವೆ ಎಂದು ಕೇಂದ್ರ ಸಚಿವ(Ministry Of Health) ಮಾಂಡವಿಯಾ ಹೇಳಿದ್ದಾರೆ. ಇವುಗಳಲ್ಲಿ ಒಂದು ರಾಜಕೀಯ ಮತ್ತು ಇನ್ನೊಂದು ವೈಜ್ಞಾನಿಕ. ಕೊರೊನಾ ಹಾವಳಿಯಿಂದ ಜನರನ್ನು ರಕ್ಷಿಸಲು ಕೈಗೊಳ್ಳಬೇಕಾದ ಮುಂದಿನ ಕ್ರಮದ ಬಗ್ಗೆ ತಜ್ಞರ ಸಲಹೆಯ ನಂತರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ದೇಶದಲ್ಲಿ ಇದುವರೆಗೆ 125 ಕೋಟಿ ಕೊರೊನಾ ಡೋಸ್ ತೆಗೆದುಕೊಳ್ಳಲಾಗಿದೆ. ಇದೇ ವೇಳೆ 22 ಕೋಟಿ ಡೋಸ್ ಗಳು ರಾಜ್ಯಗಳಿಗೆ ಉಳಿದಿವೆ ಎಂದು ಹೇಳಿದ್ದಾರೆ.


ಪ್ರತಿಪಕ್ಷಗಳಿಂದ ಲಸಿಕೆಯ ಬಗ್ಗೆ ಲೇವಡಿ


ಕೊರೊನಾ ಮೊದಲ ಅಲೆಯ ಲಾಕ್‌ಡೌನ್(3rd Wave of Corona) ಸಮಯದಲ್ಲಿ ಕೆಲವು ವಿರೋಧ ಪಕ್ಷಗಳು ಬಡವರಿಗೆ ಒದಗಿಸುತ್ತಿದ್ದ ಅತಿದೊಡ್ಡ ಆಹಾರ ಕಾರ್ಯಕ್ರಮವನ್ನು ಗೇಲಿ ಮಾಡಿದರು. ಈ ಮೂಲಕ ಜನರನ್ನು ಪ್ರಚೋದಿಸಿದರು ಮತ್ತು ಬಡವರನ್ನು ಗೇಲಿ ಮಾಡಿದರು ಎಂದು ಸಚಿವರು ಆರೋಪಿಸಿದರು.ದೇಶದಲ್ಲಿ ತಯಾರಾದ ಕೋವಿಡ್ ಲಸಿಕೆಗಳ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತಿದವು ಮತ್ತು ಲಸಿಕೆ ಹಾಕುವ ಸಮಯದಲ್ಲಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸಿದವು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್!: ಈ ಪ್ರಿಪೇಯ್ಡ್ ಯೋಜನೆ ಮೇಲೆ 20% ಕ್ಯಾಶ್‌ಬ್ಯಾಕ್


ವಿಜ್ಞಾನಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ, ಪ್ರತಿಪಕ್ಷಗಳು ಜನರನ್ನು ಹೆದರಿಸುತ್ತವೆ. ಆಪತ್ಕಾಲದಲ್ಲಿ ಇಂತಹ ವರ್ತನೆ ಭಾರತದ ರಾಜಕೀಯದಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ‘ಓಮಿಕ್ರಾನ್’ ವೈರಸ್ ಭೀತಿಯಲ್ಲಿರುವುದರಿಂದ ಶೀಘ್ರವೇ ದೇಶದ ಜನರಿಗೆ ಮತ್ತು ಮಕ್ಕಳಿಗೆ 3ನೇ ಡೋಸ್ ಅಥವಾ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.    


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.