Omicron Update: ಟೆನ್ಶನ್ ಬಿಟ್ಹಾಕಿ, Omicron ಮೇಲೆ ಪರಿಣಾಮಕಾರಿಯಾಗಿದೆ ನಮ್ಮ ಔಷಧಿ ಎಂದ ಕಂಪನಿ!

Omicron Update - ಕೋವಿಡ್-19 ವಿರುದ್ಧದ ತನ್ನ ಆಂಟಿ ಕೊವಿಡ್ ಔಷಧಿ, ಹೊಸ ಸೂಪರ್ ಮ್ಯುಟೆಂಟ್ ಓಮಿಕ್ರಾನ್ ರೂಪಾಂತರಿಯ ವಿರುದ್ಧವೂ ಪರಿಣಾಮಕಾರಿಯಾಗಿರುವುದು ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಗಳು ತೋರಿಸಿವೆ ಎಂದು ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಹೇಳಿಕೊಂಡಿದೆ.

Written by - Nitin Tabib | Last Updated : Dec 3, 2021, 07:43 PM IST
  • ಕರೋನಾದ ಪ್ರತಿಯೊಂದು ರೂಪಾಂತರದ ವಿರುದ್ಧ ಹೋರಾಡುವಲ್ಲಿ 'ಸೊಟ್ರೋವಿಮಾಬ್' ಪರಿಣಾಮಕಾರಿಯಾಗಿದೆ ಎಂದ ಬ್ರಿಟೀಷ್ ಕಂಪನಿ.
  • ಈ ಔಷಧಿ ಸಾವಿನ ಅಪಾಯವನ್ನು 79% ರಷ್ಟು ಕಡಿಮೆ ಮಾಡುತ್ತದೆ
  • ಒಮಿಕ್ರಾನ್ ರೂಪಾಂತರಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಸಹ ಇದು ಹೊಂದಿದೆ
Omicron Update: ಟೆನ್ಶನ್ ಬಿಟ್ಹಾಕಿ, Omicron ಮೇಲೆ ಪರಿಣಾಮಕಾರಿಯಾಗಿದೆ ನಮ್ಮ ಔಷಧಿ ಎಂದ ಕಂಪನಿ! title=
Omicron Update (File Photo)

ಲಂಡನ್: Omicron Update - ಕರೋನಾ ವೈರಸ್‌ನ (Coronavirus) ಓಮಿಕ್ರಾನ್ (Omicron) ರೂಪಾಂತರವು ದಿನನಿತ್ಯ ಹೊಸ ಹೊಸ ದೇಶಗಳಿಗೆ ಕಾಲಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಇದರಿಂದ ಆತಂಕಕ್ಕೆ  ಒಳಗಾಗುತ್ತಿದ್ದಾರೆ. ಹೀಗಿರುವಾಗ ಅನೇಕ ದೇಶಗಳ ಕರೋನಾ ಲಸಿಕೆಯು (Covid-19 Vaccine) ಸಹ ಇದರ ವಿರುದ್ಧ ವಿಫಲವಾಗಿದೆ ಎಂಬಂತೆ ತೋರುತ್ತಿದೆ.  ಆದರೆ ಇತ್ತೀಚೆಗೆ ಬ್ರಿಟಿಷ್ ಔಷಧ ತಯಾರಕ ಗ್ಲಾಕ್ಸೊ ಸ್ಮಿತ್‌ಕ್ಲೈನ್ (GlaxoSmithKline) ​​ಆರಂಭಿಕ ಪ್ರಯೋಗಾಲಯ ಪರೀಕ್ಷೆಗಳು ಕೋವಿಡ್ -19 ವಿರುದ್ಧ ಅದರ ಆಂಟಿ ಬಾಡಿ ಔಷಧಿ (Antibody Medicine) ಹೊಸ ಸೂಪರ್ ಮ್ಯುಟೆಂಟ್ ಓಮಿಕ್ರಾನ್ ವಿರುದ್ಧ ಪರಿಣಾಮಕಾರಿ ಸಾಬೀತಾಗಿದೆ ಎಂದು ಹೇಳಿಕೊಂಡಿದೆ. 

ಈ ಔಷಧಿ ಸಾವಿನ ಅಪಾಯವನ್ನು ಶೇ.79 ರಷ್ಟು ಕಡಿಮೆ ಮಾಡುತ್ತದೆ
GlaxoSmithKline (GSK) ಯುಎಸ್ ಪಾಲುದಾರ ವಿಐಆರ್ ಬಯೋಟೆಕ್ನಾಲಜಿಯೊಂದಿಗೆ ಸೊಟ್ರೋವಿಮಾಬ್ (Sotrovimab) ಅನ್ನು ಅಭಿವೃದ್ಧಿಪಡಿಸಿದೆ. ಇದು ಈಗಾಗಲೇ ಮಾನವರು ತಯಾರಿಸಿದ ನೈಸರ್ಗಿಕ ಪ್ರತಿಕಾಯಗಳನ್ನು ಆಧರಿಸಿದ ಮೊನೊಕ್ಲೋನಲ್ ಆಂಟಿ ಬಾಡಿ ಔಷಧಿಯಾಗಿದೆ. ಕ್ಲಿನಿಕಲ್ ಪ್ರಯೋಗಗಳಲ್ಲಿ, ಸೊಟ್ರೋವಿಮಾಬ್ 24 ಗಂಟೆಗಳಲ್ಲಿ ಶೇ. 79 ರಷ್ಟು ಆಸ್ಪತ್ರೆಗೆ ದಾಖಲಾಗುವ ಅಥವಾ ಸಾವಿನ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವ ಔಷಧಿಯಾಗಿದೆ ಎಂಬ ಭರವಸೆ ವ್ಯಕ್ತಪಡಿಸಲಾಗಿದೆ. 

ಸಂಶೋಧನೆ ಹೇಳಿದ್ದೇನು?
"ಓಮಿಕ್ರಾನ್ ರೂಪಾಂತರದ ಅನುಕ್ರಮವನ್ನು ಆಧರಿಸಿ, ಈ ರೂಪಾಂತರದ ವಿರುದ್ಧ ಸೊಟ್ರೋವಿಮಾಬ್ ಸಕ್ರಿಯ ಮತ್ತು ಪರಿಣಾಮಕಾರಿ ಸಾಬೀತಾಗುವ ಸಾಧ್ಯತೆ ಇದೆ  ಎಂದು ನಾವು ಭರವಸೆ ವ್ಯಕ್ತಪಡಿಸುತ್ತೇವೆ" ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಸಂಶೋಧನೆಯನ್ನು ಪ್ರಿಪ್ರಿಂಟ್ ಸರ್ವರ್ biorxiv ನಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ, ಈ ಸಂಶೋಧನೆಯಲ್ಲಿ, ಆರಂಭಿಕ ಲ್ಯಾಬ್ ಪರೀಕ್ಷೆಗಳ ಆಧಾರದ ಮೇಲೆ ಡೇಟಾವನ್ನು ಹಂಚಿಕೊಳ್ಳಲಾಗಿದೆ ಮತ್ತು ಅದನ್ನು ಇನ್ನೂ ಸಂಪೂರ್ಣವಾಗಿ ಪರಿಶೀಲಿಸಲಾಗಿಲ್ಲ. ಕಂಪನಿಯ ಪ್ರಕಾರ, ಈ ಸಂಶೋಧನೆಯು ಸೊಟ್ರೋವಿಮಾಬ್ ಹೊಸ ಓಮಿಕ್ರಾನ್ SARS-CoV-2 (B.1.1.529)ರೂಪಾಂತರಿಗಳಂತಹ ಪ್ರಬಲ ರೂಪಾಂತರಿತ ರೂಪಗಳ ವಿರುದ್ಧ ಚಟುವಟಿಕೆಯನ್ನು ಉಳಿಸಿಕೊಂಡಿದೆ ಎಂದು ತೋರಿಸುತ್ತದೆ ಎನ್ನಲಾಗಿದೆ. 

2021 ರ ಅಂತ್ಯದ ವೇಳೆಗೆ ಅಪ್ಡೇಟ್ ಒದಗಿಸುವ ಉದ್ದೇಶದಿಂದ ಎಲ್ಲಾ ಓಮಿಕ್ರಾನ್ ರೂಪಾಂತರಗಳ ಸಂಯೋಜನೆಯ ವಿರುದ್ಧ ಸೊಟ್ರೋವಿಮಾಬ್‌ನ ನಿಷ್ಕ್ರಿಯ ಚಟುವಟಿಕೆಯನ್ನು ಖಚಿತಪಡಿಸಲು ಕಂಪನಿಗಳು ಈಗ ಇನ್ ವಿಟ್ರೊ ಸುಡೋ-ವೈರಸ್ ಪರೀಕ್ಷೆಯನ್ನು ಪೂರ್ಣಗೊಳಿಸಲು ಮುಂದಾಗಿದೆ

ಪ್ರತಿ ರೂಪಾಂತರವನ್ನು ನಿಭಾಯಿಸುವಲ್ಲಿ ಸಮರ್ಥ
ಈ ಕುರಿತು ಹೇಳಿಕೆ ನೀಡಿರುವ ವಿಐಆರ್ ಬಯೋಟೆಕ್ನಾಲಜಿಯ (VIR Biotechnology) ಪಿಎಚ್‌ಡಿ ಸಿಇಒ ಜಾರ್ಜ್ ಸ್ಕ್ಯಾಂಗೋಸ್, "ಸೋಟ್ರೋವಿಮಾಬ್ ಅನ್ನು ಉದ್ದೇಶಪೂರ್ವಕವಾಗಿ ರೂಪಾಂತರಗೊಳ್ಳುವ ವೈರಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸ್ಪೈಕ್ ಪ್ರೊಟೀನ್‌ನ ಬಹುಪಾಲು ಸಂರಕ್ಷಿತ ಪ್ರದೇಶವನ್ನು ಗುರಿಯಾಗಿಸುವ ಮೂಲಕ (ಇದು ರೂಪಾಂತರಗೊಳ್ಳುವ ಸಾಧ್ಯತೆ ಕಡಿಮೆ), ಪ್ರಸ್ತುತ SARS-CoV-2 ವೈರಸ್ ಮತ್ತು ಭವಿಷ್ಯದ ರೂಪಾಂತರಗಳನ್ನುಎದುರಿಸಲಿದೆ ಎಂಬುದನ್ನು ನಾವು ನಿರೇಕ್ಶಿಸಿದ್ದೆವೆಉ ಮತ್ತು ನಮ್ಮ ನಿರೀಕ್ಷೆ ಹುಸಿಯಾಗಿಲ್ಲ. ಔಷಧಿಯ ಈ ಸಕಾರಾತ್ಮಕತೆಯು ಮುಂದುವರಿಯುತ್ತದೆ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ ಮತ್ತು Omicron ನ ಸಂಪೂರ್ಣ ಸಂಯೋಜನೆಯ ಅನುಕ್ರಮದ ವಿರುದ್ಧ ನಮ್ಮ ಚಟುವಟಿಕೆಯನ್ನು ದೃಢೀಕರಿಸಲು ತೀವ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಶೀಘ್ರದಲ್ಲೇ 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿರುವ ಇಂಡೋ-ಚೀನಾ

ಸೊಟ್ರೊವಿಮಾಬ್ ಈ ರೀತಿ ಕಾರ್ಯನಿರ್ವಹಿಸುತ್ತದೆ
ಸೊಟ್ರೋವಿಮಾಬ್ ಜಿಎಸ್‌ಕೆ ಮತ್ತು ವಿಐಆರ್ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿದ ಸಿಂಗಲ್ ಡೋಸ್ ಆಂಟಿಬಾಡಿಯಾಗಿದ್ದು, ಈ ಔಷಧಿಯು ಕರೋನಾ ವೈರಸ್‌ನ ಹೊರಕವಚದಲ್ಲಿರುವ ಸ್ಪೈಕ್ ಪ್ರೋಟೀನ್‌ ಅನ್ನು  ಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ಇದು ವೈರಸ್ ಮಾನವ ಶೆಲ್ ಅನ್ನು ಪ್ರವೇಶಿಸದಂತೆ ತಡೆಯುತ್ತದೆ.

ಇದನ್ನೂ ಓದಿ-Omicron variant: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳಿಂದ ಹೊಸ ಎಚ್ಚರಿಕೆ

ಈ ಜನರ ಮೇಲೆ ಪರಿಣಾಮಕಾರಿ
ಜೆವುಡಿ ಎಂದು ಮಾರಾಟ ಮಾಡಲಾಗುತ್ತಿರುವ ಈ ಔಷಧಯನ್ನು ಕೋವಿಡ್-19 ರೋಗಲಕ್ಷಣಗಳು ಕಾಣಿಸಿಕೊಂಡ 5 ದಿನಗಳೊಳಗೆ ನೀಡುವಂತೆ ಶಿಫಾರಸು ಮಾಡಲಾಗಿದೆ. ಆಮ್ಲಜನಕದ ಪೂರೈಕೆಯ ಅಗತ್ಯವಿಲ್ಲದ ಮತ್ತು ತೀವ್ರವಾದ ಕೋವಿಡ್ ಸೋಂಕನ್ನು ಅಭಿವೃದ್ಧಿಪಡಿಸುವ ಅಪಾಯದಲ್ಲಿರುವ ಜನರಿಗೆ ಇದು ಪರಿಣಾಮಕಾರಿ ಎಂದು ಸಾಬೀತಾಗಿದೆ. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ಹದಿಹರೆಯದವರಲ್ಲಿ ತೀವ್ರವಾದ COVID-19 ಸೋಂಕಿನ ಚಿಕಿತ್ಸೆಗಾಗಿ UK ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (MHRA) ನಿಂದ ಸೊಟ್ರೋವಿಮಾಬ್‌ಗೆ ಷರತ್ತುಬದ್ಧ ಮಾರುಕಟ್ಟೆ ಅಧಿಕಾರವನ್ನು ಸಹ ನೀಡಲಾಗಿದೆ. ಷರತ್ತುಬದ್ಧ ಮಾರ್ಕೆಟಿಂಗ್ ಅಧಿಕಾರವು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ-ಕೊರೊನಾ ಭೀತಿ: ಕೆನಡಾ ವನ್ಯಜೀವಿಗಳಲ್ಲಿ ಮೊದಲ COVID-19 ಪ್ರಕರಣ ಪತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News