ನವದೆಹಲಿ: ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ (COVAXIN) ಲಸಿಕೆಯು ಕೊರೊನಾ ವೈರಸ್ನ ‘ಓಮಿಕ್ರಾನ್’ (Omicron Variant) ರೂಪಾಂತರದ ವಿರುದ್ಧವೂ ಕಾರ್ಯನಿರ್ವಹಿಸುತ್ತದೆಯೇ ಎಂದು ಅಧ್ಯಯನ ನಡೆಸಲಾಗುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಅಸ್ತಿತ್ವದಲ್ಲಿರುವ ಕೋವಿಡ್-19 ಲಸಿಕೆಗಳು ಡೆಲ್ಟಾ ವೇರಿಯಂಟ್ಗೆ ಹೋಲಿಸಿದರೆ ‘ಓಮಿಕ್ರಾನ್’ ರೂಪಾಂತರದ ವಿರುದ್ಧ ಕಡಿಮೆ ಪರಿಣಾಮಕಾರಿಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಕೋವಾಕ್ಸಿನ್ (COVAXIN)ಅನ್ನು ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾದ ಮೂಲ ವುಹಾನ್ ರೂಪಾಂತರದ ವಿರುದ್ಧ ಅಭಿವೃದ್ಧಿಪಡಿಸಲಾಗಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ: ಡಿಸೆಂಬರ್ ನಲ್ಲಿ 12 ದಿನ ಬ್ಯಾಂಕ್ ಬಂದ್
‘ಇದು ಡೆಲ್ಟಾ (Delta Variat) ರೂಪಾಂತರ ಸೇರಿದಂತೆ ಇತರ ವೈರಸ್ ರೂಪಾಂತರಗಳ ವಿರುದ್ಧ ಕೆಲಸ ಮಾಡಬಹುದು ಎಂದು ತೋರಿಸಿದೆ. ನಾವು ಹೊಸ ರೂಪಾಂತರಗಳ ಕುರಿತು ಸಂಶೋಧನೆ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ. Moderna ಮತ್ತು ಸಹ ಔಷಧ ತಯಾರಕ ಕಂಪನಿಗಳಾದ BioNTech ಹಾಗೂ Johnson & Johnson ಅಸ್ತಿತ್ವದಲ್ಲಿರುವ ಲಸಿಕೆಗಳು ಅದರ ವಿರುದ್ಧ ಪರಿಣಾಮಕಾರಿಯಾಗದಿದ್ದಲ್ಲಿ ನಿರ್ದಿಷ್ಟವಾಗಿ Omicron ಅನ್ನು ಗುರಿಯಾಗಿಸುವ ಲಸಿಕೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. Moderna ಲಸಿಕೆಯು ತನ್ನ ಅಸ್ತಿತ್ವದಲ್ಲಿರುವ ಬೂಸ್ಟರ್ನ ಹೆಚ್ಚಿನ ಪ್ರಮಾಣವನ್ನು ಪರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಲಭ್ಯವಿರುವ ಕೋವಿಡ್ ಲಸಿಕೆಗಳು (Corona Vaccine) ಈ ರೂಪಾಂತರಿ ವೈರಸ್ ವಿರುದ್ಧ ಅಷ್ಟು ಪರಿಣಾಮಕಾರಿ ಆಗದಿರಬಹುದು ಎಂದು ಔಷಧ ತಯಾರಿಕಾ ಕಂಪನಿಯ ಮೊಡೆರ್ನಾ ಸಿಇಒ ಎಚ್ಚರಿಕೆ ನೀಡಿದ ಬೆನ್ನಲ್ಲೇ ಭಾರತ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ‘ಓಮಿಕ್ರಾನ್’ಗೆ (Omicron Variant) ಪರಿಣಾಮಕಾರಿಯಾಗುತ್ತದೆಯೇ ಎಂಬುದರ ಬಗ್ಗೆ ಭಾರತ್ ಬಯೋಟೆಕ್ ಅಧ್ಯಯನ ನಡೆಸಿದೆ.
ಇದನ್ನೂ ಓದಿ: ಪಿಂಚಣಿದಾರರು ಈಗ ನೀಡಬೇಕಾಗಿಲ್ಲ 'Life Certificate', ಏನು ಹೇಳುತ್ತದೆ ಹೊಸ ನಿಯಮ ?
ಕೋವಿಡ್-19 ವಿರುದ್ಧ ಹೋರಾಡಲು ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ (Bharat Biotech)ಕೋವ್ಯಾಕ್ಸಿನ್ ಅನ್ನು ತಯಾರಿಸಿತ್ತು. ಈ ಲಸಿಕೆ ಡೆಲ್ಟಾ ಸೇರಿ ಕೋವಿಡ್ನ ಇತರೆ ರೂಪಾಂತರಿ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಅಧ್ಯಯನವು ಸ್ಪಷ್ಟಪಡಿಸಿದೆ.
ಕೊರೊನಾ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಶೇ.77.8ರಷ್ಟು ಪರಿಣಾಮ ಬೀರಿದೆ. ಡೆಲ್ಟಾ ರೂಪಾಂತರಿ ವಿರುದ್ಧ ಈ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇದೀಗ ವಿಶ್ವದ ಭೀತಿಗೆ ಕರನವಾಗಿರುವ ಹೊಸ ರೂಪಾಂತರಿ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿತ್ವದ (Covaxin shot will work on Omicron) ಬಗ್ಗೆ ಅಧ್ಯಯನ ನಡೆಸಲು ಕಂಪನಿಯು ಮುಂದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.