ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್!: ಈ ಪ್ರಿಪೇಯ್ಡ್ ಯೋಜನೆ ಮೇಲೆ 20% ಕ್ಯಾಶ್‌ಬ್ಯಾಕ್

ಶೇ.20ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಜಿಯೋಮಾರ್ಟ್‌ನಲ್ಲಿ ಪಾಯಿಂಟ್‌ಗಳ ರೂಪದಲ್ಲಿ ನೀಡಲಾಗುತ್ತದೆ ಮತ್ತು ಆ ಪ್ಲಾಟ್‌ಫಾರ್ಮ್‌ನಲ್ಲಿ ಏನನ್ನಾದರೂ ಖರೀದಿಸುವಾಗ ಈ ಪಾಯಿಂಟ್‌ಗಳನ್ನು ನೀವು ಬಳಸಬಹುದು.

Written by - Puttaraj K Alur | Last Updated : Dec 4, 2021, 06:36 AM IST
  • ಜಿಯೋ ಬಳಕೆದಾರರಿಗೆ ಸಿಗಲಿದೆ ಶೇ.20ರಷ್ಟು ಕ್ಯಾಶ್‌ಬ್ಯಾಕ್
  • ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ JioMartಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್
  • 299, 666 & 719 ರೂ. ಪ್ರಿಪೇಯ್ಡ್ ಯೋಜನೆಗಳಿಗೆ ಸಿಗಲಿದೆ ಭರ್ಜರಿ ಆಫರ್
ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್!: ಈ ಪ್ರಿಪೇಯ್ಡ್ ಯೋಜನೆ ಮೇಲೆ 20% ಕ್ಯಾಶ್‌ಬ್ಯಾಕ್  title=
JioMartಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್

ನವದೆಹಲಿ: ಭಾರತದ ಅತ್ಯಂತ ಜನಪ್ರಿಯ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಕಳೆದ ಕೆಲವು ದಿನಗಳಲ್ಲಿ ತನ್ನ ಬಳಕೆದಾರರಿಗೆ ಆಘಾತ ನೀಡಿತ್ತು. ಏರ್ಟೆಲ್, ವೋಡಾಫೋನ್-ಐಡಿಯಾ ಬಳಿಕ ಕಂಪನಿಯು ಮೊದಲು ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿತು. ನಂತರ Jio ಫೋನ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿತು. ಈಗ Jio ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ JioMartಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್(JioMart Cashback) ನೀಡುತ್ತಿದೆ. ಈ ಹೊಸ ಪ್ರಕಟಣೆಯೊಂದಿಗೆ ಗ್ರಾಹಕರನ್ನು Jio ಸಂತೋಷಪಡಿಸಿದೆ. ಈ ಯೋಜನೆಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಜಿಯೋ 299 ರೂ. ಯೋಜನೆ

ಜಿಯೋದ ಈ ಪ್ರಿಪೇಯ್ಡ್ ಯೋಜನೆಯ(Jio Prepaid Plans) ಬೆಲೆ 299 ರೂ. ಮತ್ತು ಇದರ ವ್ಯಾಲಿಡಿಟಿ 28 ದಿನಗಳು. ಇದರಲ್ಲಿ ನೀವು ಪ್ರತಿದಿನ 2GB ಇಂಟರ್ನೆಟ್, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಅನ್ನು ಪಡೆಯುತ್ತೀರಿ. ಅಲ್ಲದೆ ಇದರಲ್ಲಿ ನೀವು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಉಚಿತವಾಗಿ ಪಡೆಯುತ್ತೀರಿ. ಈ ಯೋಜನೆಯನ್ನು ತೆಗೆದುಕೊಳ್ಳುವಾಗ ನೀವು Jioನಿಂದ JioMart ನಲ್ಲಿ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. 

ಇದನ್ನೂ ಓದಿ: ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತವಾಗಿ ಸಿಗಲಿದೆ 5 ಲಕ್ಷ ರೂ. ಲಾಭ

ಜಿಯೋದ 666 ರೂ. ಪ್ರಿಪೇಯ್ಡ್ ಯೋಜನೆ

666 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯಲ್ಲಿ ನೀವು 84 ದಿನಗಳವರೆಗೆ ಪ್ರತಿದಿನ 1.5GB ಡೇಟಾ, ದಿನಕ್ಕೆ 100 SMS ಮತ್ತು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ನಿಮಗೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯನ್ನು ತೆಗೆದುಕೊಳ್ಳುವಾಗ ನೀವು Jio ನಿಂದ JioMart ನಲ್ಲಿ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. 

ಜಿಯೋ 719 ರೂ. ಯೋಜನೆ

ಜಿಯೋದ ಈ ಯೋಜನೆ(Jio Recharge Plans)ಯಲ್ಲಿ ನೀವು ದಿನಕ್ಕೆ 2GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಮತ್ತು ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾದಂತಹ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಯೋಜನೆಯ ಬೆಲೆ 719 ರೂ. ಆಗಿದ್ದು, ಇದರ ವ್ಯಾಲಿಡಿಟಿ 84 ದಿನಗಳು.

ಇದನ್ನೂ ಓದಿ: Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಗೆ ಬಂಪರ್ ದರ

ಈಗ ಹೇಳುತ್ತಿರುವ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಜಿಯೋಮಾರ್ಟ್‌ನಲ್ಲಿ ಪಾಯಿಂಟ್‌ಗಳ ರೂಪದಲ್ಲಿ ನೀಡಲಾಗುತ್ತದೆ ಮತ್ತು ಆ ಪ್ಲಾಟ್‌ಫಾರ್ಮ್‌ನಲ್ಲಿ ಏನನ್ನಾದರೂ ಖರೀದಿಸುವಾಗ ಈ ಪಾಯಿಂಟ್‌ಗಳನ್ನು ನೀವು ಬಳಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News