Oxygen Plant:ಕರೋನಾ ಮೂರನೇ ತರಂಗದಲ್ಲಿ ಎದುರಾಗಲ್ಲ ಆಮ್ಲಜನಕದ ಕೊರತೆ
Oxygen Plant: ಪಿಎಂ ಕೇರ್ಸ್ ಫಂಡ್‌ನಿಂದ ದೇಶಾದ್ಯಂತ 1213 ಪಿಎಸ್‌ಎ ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಮುಂದಿನ ತಿಂಗಳು ಜುಲೈ ವೇಳೆಗೆ ಸ್ಥಾವರ ಸ್ಥಾಪಿಸುವ ಗುರಿ ಪೂರ್ಣಗೊಳ್ಳಲಿದೆ.
ನವದೆಹಲಿ: Oxygen Plant- ದೇಶದಲ್ಲಿ ಕರೋನದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸಹ ಜನರು ಕರೋನಾ ಮೂರನೇ ತರಂಗದ ಬಗ್ಗೆ ಚಿಂತಿತರಾಗಿದ್ದಾರೆ. ಈ ಮಧ್ಯೆ ಸರ್ಕಾರ ಕರೋನಾ ಮೂರನೇ ತರಂಗವನ್ನು ಎದುರಿಸಲು ಭಾರೀ ಸಿದ್ಧತೆ ನಡೆಸುತ್ತಿದೆ. ಕರೋನಾ ಎರಡನೇ ತರಂಗದ ಸಮಯದಲ್ಲಿ ಎದುರಾಗಿದ್ದ ಬಹಳ ಮುಖ್ಯವಾದ ಸಮಸ್ಯೆಗಳಲ್ಲಿ ಆಮ್ಲಜನಕದ ಕೊರತೆಯೂ ಕೂಡ ಒಂದು. ಆದರೆ ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ರೋಗಿಯು ತನ್ನ ಪ್ರಾಣವನ್ನು ಕಳೆದುಕೊಳ್ಳದಂತೆ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ದೊಡ್ಡ ಪ್ರಯತ್ನವನ್ನು ಕೈಗೊಂಡಿದೆ. ಪಿಎಂ ಕೇರ್ಸ್ ಫಂಡ್‌ನಿಂದ ದೇಶಾದ್ಯಂತ 1213 ಪಿಎಸ್‌ಎ ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಮುಂದಿನ ತಿಂಗಳು ಅಂದರೆ ಜುಲೈ ವೇಳೆಗೆ ಸ್ಥಾವರ ಸ್ಥಾಪಿಸುವ ಗುರಿ ಪೂರ್ಣಗೊಳ್ಳಲಿದೆ.
ಪಿಎಂ ಕೇರ್ಸ್ ಫಂಡ್‌ನಿಂದ 1213 ಪ್ಲಾಂಟ್‌ಗಳ ಸ್ಥಾಪನೆ:
ಸುದ್ದಿ ಸಂಸ್ಥೆ ಐಎಎನ್‌ಎಸ್ ಪ್ರಕಾರ, ಭಾನುವಾರ ದೆಹಲಿಯ ಪಂಜಾಬಿ ಬಾಗ್‌ನ ಮಹಾರಾಜ ಅಗ್ರಸೆನ್ ಆಸ್ಪತ್ರೆಯಲ್ಲಿ ಪಿಎಸ್‌ಎ ಆಕ್ಸಿಜನ್ ಸ್ಥಾವರವನ್ನು (1213 PSA Oxygen Plants) ಉದ್ಘಾಟಿಸುವಾಗ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ದೇಶದಲ್ಲಿ ಕರೋನಾ ಮೂರನೇ ತರಂಗದ (Corona Third Wave) ಸಂದರ್ಭದಲ್ಲಿ ಆಮ್ಲಜನಕದ ಬಗ್ಗೆ ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ. ಯಾವುದೇ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಪ್ರಾಣ ಕಳೆದುಕೊಳ್ಳುವಂತೆ ಆಗಬಾರದು. ಇದಕ್ಕಾಗಿ ಪಿಎಂ ಕೇರ್ಸ್ ಫಂಡ್‌ನಿಂದ ದೇಶಾದ್ಯಂತ 1213 ಪಿಎಸ್‌ಎ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿತ್ತು. ಈ ಗುರಿ ಮುಂದಿನ ತಿಂಗಳು ಜುಲೈನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ- CoWin Portal ಬಳಸುವಾಗ ಈ ವಿಚಾರಗಳ ಬಗ್ಗೆ ಎಚ್ಚರವಿರಲಿ, ತಪ್ಪಿದರೆ ಬ್ಲಾಕ್ ಆದೀತು..!
ಎಲ್ಲೆಡೆ ಆಕ್ಸಿಜನ್ ಸ್ಥಾವರ ಸ್ಥಾಪನೆ:
ಈ ಆಕ್ಸಿಜನ್ ಸ್ಥಾವರಗಳ ಉತ್ಪಾದನಾ ಸಾಮರ್ಥ್ಯ ದಿನಕ್ಕೆ 35,000 ಮೆಟ್ರಿಕ್ ಟನ್ ಆಮ್ಲಜನಕ (Oxygen) ವನ್ನು ಉತ್ಪಾದಿಸುತ್ತವೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಎಲ್ಲಾ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಿಂದ ಸ್ಥಳದಿಂದ ಸ್ಥಳಕ್ಕೆ ಇಂತಹ ಸ್ಥಾವರಗಳನ್ನು ಸ್ಥಾಪಿಸುತ್ತಿವೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಹೇಳಿದರು. ಐಜಿಎಲ್ ನಿಧಿಯೊಂದಿಗೆ ದೆಹಲಿಯಲ್ಲಿ ಇಂದು (ಭಾನುವಾರ) ಸ್ಥಾಪಿಸಲಾದ ಸ್ಥಾವರ ವೆಚ್ಚ 2.5 ಕೋಟಿ. ಇದರೊಂದಿಗೆ ಪ್ರತಿದಿನ 400 ರಿಂದ 500 ಸಿಲಿಂಡರ್‌ಗಳನ್ನು ಭರ್ತಿ ಮಾಡಬಹುದು. ಇಲ್ಲಿಂದಲೂ ಅನಿಲ ಸರಬರಾಜು ಮಾಡಬಹುದು ಮತ್ತು ಸಿಲಿಂಡರ್‌ಗಳನ್ನು ಸಹ ಭರ್ತಿ ಮಾಡಬಹುದು ಎಂದು ಪ್ರಧಾನ್ ಹೇಳಿದರು.
ಇದನ್ನೂ ಓದಿ- ಜೂನ್ 21 ರಿಂದ 18+ ಎಲ್ಲರಿಗೂ ಕೂಡ ಉಚಿತ ವ್ಯಾಕ್ಸಿನ್, ನವೆಂಬರ್ ವರೆಗೆ ಉಚಿತ ಪಡಿತರ ಯೋಜನೆ ವಿಸ್ತರಣೆ
ಕರೋನಾ ಪ್ರಕರಣಗಳು ಪ್ರತಿದಿನ ಕಡಿಮೆಯಾಗುತ್ತಿವೆ:
ಕರೋನಾ ಸೋಂಕಿನ (Corona Infection) ವೇಗ ಕ್ರಮೇಣ ದುರ್ಬಲಗೊಳ್ಳುತ್ತಿದೆ. 71 ದಿನಗಳ ನಂತರ, ದೇಶದಲ್ಲಿ ಕಡಿಮೆ 80,834 ಹೊಸ ಪ್ರಕರಣಗಳು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.