Girls Permitted To Join NDA: ಸಶಸ್ತ್ರ ಪಡೆಗಳಲ್ಲಿನ ತಾರತಮ್ಯಕ್ಕೆ ತೆರೆ, NDA ಮೂಲಕ ಮಹಿಳೆಯರಿಗೆ ಎಂಟ್ರಿ
Girls Permitted To Join NDA: ಈ ವರ್ಷ ನಡೆಯಲಿರುವ NDA ಪ್ರವೇಶ ಪರೀಕ್ಷೆಯಲ್ಲಿ ಯುವತಿಯರಿಗೂ ಕೂಡ ಕೂಡ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಆಗಸ್ಟ್ 18 ರಂದು ಆದೇಶಿಸಿತ್ತು. ಈ ವೇಳೆ ಸಶಸ್ತ್ರ ಪಡೆಗಳಲ್ಲಿ (Armed Forces) ಪ್ರವೇಶದ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿತ್ತು.
ನವದೆಹಲಿ: Girls Permitted To Join NDA - ಇನ್ಮುಂದೆ ಮಹಿಳೆಯರಿಗೂ ಕೂಡ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಅಂದರೆ ಎನ್‌ಡಿಎಗೆ ಪ್ರವೇಶ ಪಡೆಯಲು ಸಾಧ್ಯವಾಗಲಿದೆ. ಎನ್ ಡಿಎ ಮೂಲಕ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ನ್ಯಾಯಾಲಯ, ಲಿಖಿತ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರವನ್ನು ಸೂಚಿಸಿದೆ.
ಇದುವರೆಗೆ ಯುವತಿಯರಿಗಾಗಿ ಎನ್‌ಡಿಎ (NDA)ಬಾಗಿಲು ಮುಚ್ಚಲಾಗಿತ್ತು. ಯುವಕರಿಗೆ ಮಾತ್ರ ಅಲ್ಲಿ ಪ್ರವೇಶ ನೀಡಲಾಗುತ್ತಿತ್ತು. ಇದನ್ನು ತಾರತಮ್ಯ ಎಂದು ವಿವರಿಸಿ, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿತ್ತು. ಆಗಸ್ಟ್ 18ರಂದು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಈ ವರ್ಷ ನಡೆಯಲಿರುವ ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಯುವತಿಯರಿಗೂ ಕೂಡ ಹಾಜರಾಕಲು ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿತ್ತು ಮತ್ತು ಸಶಸ್ತ್ರಪಡೆಗೆ ಪ್ರವೇಶದ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇಂದು ಈ ಪ್ರಕರಣದ ವಿಚಾರಣೆ ಆರಂಭವಾದ ತಕ್ಷಣ ಸರ್ಕಾರದ (Government Of India) ಪರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರ ಐಶ್ವರ್ಯಾ ಭಾಟಿ, "ನಾನು ನ್ಯಾಯಾಲಯಕ್ಕೆ ಒಂದು ಒಳ್ಳೆಯ ಸುದ್ದಿಯನ್ನು ನೀಡಲು ಬಯಸುತ್ತೇನೆ. ಸರ್ಕಾರ ನಿನ್ನೆಯಷ್ಟೇ ಹೆಣ್ಣು ಮಕ್ಕಳಿಗೆ NDA (National Defence Academy) ಹಾಗೂ ನೌಕಾಪಡೆ ಅಕಾಡೆಮಿಗೆ (Naval Academy) ಪ್ರವೇಶ ನೀಡಲು ಅನುಮತಿಸಿದೆ. ಆದರೆ, ಈ ವರ್ಷ ಪರೀಕ್ಷೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರೆಸಲು ವಿನಂತಿಸಿದೆ. ಈ ಪರೀಕ್ಷೆ ಜೂನ್ ನಲ್ಲಿ ನಡೆಯಬೇಕಿದ್ದವು. ಆದರೆ, ಕೊರೊನಾ ಹಿನ್ನೆಲೆ ಅದನ್ನು ಸ್ಥಗಿತಗೊಳಿಸಲಾಗಿತ್ತು. ಚಾಲ್ತಿ ವರ್ಷದಿಂದಲೇ ಈ ಬದಲಾವಣೆ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-ಬಿಜೆಪಿ ಸಂಸದನ ಮನೆ ಸಮೀಪ ಬಾಂಬ್ ದಾಳಿ: ಟಿಎಂಸಿ ವಿರುದ್ಧ ಆಕ್ರೋಶ..!
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ ಮಾತನಾಡಿರುವ ಸುಪ್ರೀಂ ದ್ವಿಸದಸ್ಯ ಪೀಠದ ಅಧ್ಯಕ್ಷ ಸಂಜಯ್ ಕಿಶನ್ ಕೌಲ್, "ಭಾರತೀಯ ಸೇನೆಯೇ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದು ಖುಷಿ ತಂದಿದೆ. ನಾವು ಸೇನೆಯನ್ನು ಗೌರವಿಸುತ್ತೇವೆ. ಆದರೆ, ಲೈಂಗಿಕ ಸಮಾನತೆಯ ಕುರಿತು ಸೇನೆ ಬಹಳಷ್ಟು ಸಂಗತಿಗಳನ್ನು ಮಾಡಬೇಕಿದೆ. ಮಹಿಳೆಯರು ನಿಭಾಯಿಸುತ್ತಿರುವ ಜವಾಬ್ದಾರಿಯ ಮಹತ್ವ ಅರಿಯಬೇಕಿದೆ. ಒಂದು ವೇಳೆ ಈ ನಿರ್ಧಾರ ಈ ಮುಂಚೆಯೇ ತೆಗೆದುಕೊಂಡಿದ್ದರೆ, ನಮಗೆ ಆದೇಶ ನೀಡುವ ಅವಶ್ಯಕತೆ ಬೀಳುತ್ತಿರಲಿಲ್ಲ" ಎಂದಿದ್ದಾರೆ. ಈ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚನೆ ನೀಡಿರುವ ನ್ಯಾಯಪೀಠ, ಸರ್ಕಾರದವತಿಯಿಂದ ತೆಗೆದುಕೊಳ್ಳಲಾಗಿರುವ ಈ ನಿರ್ಧಾರದ ಕುರಿತು ಲಿಖಿತ ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ.
ಇದನ್ನೂ ಓದಿ-Sukanya Samriddhi Yojana: ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು ಡಬಲ್ ಲಾಭ ಪಡೆಯಿರಿ
ಈ ಬಾರಿ ನಡೆಯುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನ್ಯಾಯಮೂರ್ತಿಗಳು, 'ಸೆಪ್ಟೆಂಬರ್ 20ರೊಳಗೆ ಅರ್ಜಿಯಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂಬುದರ ಅಫಿಡವಿಟ್ ಸಲ್ಲಿಸಿ ತಿಳಿಸಬೇಕು. ಈ ಕುರಿತಾದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಡೆಯಲಿದ್ದು ಆಗ ಸರ್ಕಾರದ ವಿನಂತಿಯ ಕುರಿತು ಯೋಚಿಸಲಾಗುವುದು ಎಂದು ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.