ನವದೆಹಲಿ: PM Meeting On Corona Situation - ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕರಣಗಳು ಇದೀಗ ಪುನಃ ದೇಶವನ್ನು ಚಿಂತೆಗೀಡು ಮಾಡಿವೆ. ಆದರೆ, ಈ ಬಾರಿಯ ಕೊರೊನಾ ವೇಗ ಕಳೆದ ಬಾರಿಗಿಂತಲೂ ಹೆಚ್ಚಾಗಿದ್ದು, ಜನರಲ್ಲಿ ಲಾಕ್ ಡೌನ್ ನೆನಪು ಮರುಕಳಿಸಲಾರಂಭಿಸಿದೆ. ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಹಾಗೂ ವ್ಯಾಕ್ಸಿನೆಶನ್ ಅಭಿಯಾನದಸಮೀಕ್ಷೆಗಾಗಿ  ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಒಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಕೊರೊನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಸದ್ಯ ಉನ್ನತ ಮಟ್ಟದ ಸಭೆಯೊಂದನ್ನು ನಡೆಸುತ್ತಿದ್ದು, ಕೊರೊನಾ ವೈರಸ್ ನ ಎರಡನೇ ಅಲೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸಭೆಯ ಬಳಿಕ ದೊಡ್ಡ ಘೋಷಣೆಯೊಂದನ್ನು ಮಾಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- IPL 2021: ದೆಹಲಿ ಕ್ಯಾಪಿಟಲ್ಸ್ ನಾಯಕನಾಗಿ ರಿಷಭ್ ಪಂತ್ ಆಯ್ಕೆ ಬಗ್ಗೆ ಮೊಹಮ್ಮದ್ ಕೈಫ್ ಹೇಳಿದ್ದೇನು


ಸುದ್ದಿಸಂಸ್ಥೆ ANI ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕೊರೊನಾ ವೈರಸ್(Coronavirus) ಗೆ ಸಂಬಂಧಿತ ಅಂಶಗಳ ಚರ್ಚೆ ಹಾಗೂ ಲಸೀಕಾಕರಣ ಅಭಿಯಾನದ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಒಂದು ಉನ್ನತಮಟ್ಟದ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಕ್ಯಾಬಿನೆಟ್ ಸಚಿವರು, ಪ್ರಧಾನಿ ಅವರ ಪ್ರಧಾನ ಸಚಿವರು, ಆರೋಗ್ಯ ಸಚಿವರು, ಡಾ.ವಿನೋದ್ ಪಾಲ್ ಸೇರಿದಂತೆ ಹಲವು ವರಿಷ್ಠ ಅಧಿಕಾರಿಗಳು ಶಾಮೀಲಾಗಿದ್ದಾರೆ. ಭಾನುವಾರ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ (Covid-19) ನ ಪ್ರಕರಣಗಳ ಸಂಖ್ಯೆ 93 ಸಾವಿರ ದಾಟಿದ ಹಿನ್ನೆಲೆ ಈ ಸಭೆ ಭಾರಿ ಮಹತ್ವಪಡೆದುಕೊಂಡಿದೆ. ಏಕೆಂದರೆ ಮುಂದಿನ ಒಂದೆರಡು ದಿನಗಳಲ್ಲಿ ಈ ಅಂಕಿ 1 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ.


ಇದನ್ನೂ ಓದಿ- Facebook Data Leak: 53 ಕೋಟಿಗೂ ಅಧಿಕ ಬಳಕೆದಾರರ ಫೋನ್ ನಂಬರ್ ಡಾಟಾ ಲೀಕ್


Akshay Kumar ಗೆ ಕೊರೊನಾ ಸೋಂಕು, ಟ್ವೀಟ್ ಕಂಡ ಅಭಿಮಾನಿಗಳಲ್ಲಿ ಆತಂಕ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.