ನವದೆಹಲಿ: Akshay Kumar Tested Covid-19 Positive - ಬಾಲಿವುಡ್ (Bollywood) ನಿಂದ ಸತತವಾಗಿ ಕೊರೊನಾ ವೈರಸ್ (Coronavirus) ಕುರಿತು ಬೆಚ್ಚಿಬೀಳಿಸುವ ವರದಿಗಳು ಬೆಳಕಿಗೆ ಬರುತ್ತಲೇ ಇವೆ. ಸ್ವಲ್ಪ ಸಮಯದ ಹಿಂದೆ ಪ್ರಕಟಗೊಂಡ ವರದಿಯೊಂದರ ಪ್ರಕಾರ ಇದೀಗ ಖ್ಯಾತ ಬಾಲಿವುಡ್ ನಟ ಅಕ್ಷಯ್ (Akshay Kumar)ಕುಮಾರ್ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ವತಃ ಅಕ್ಷಯ್ ಕುಮಾರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.
ಹೋಮ್ ಕ್ವಾರಂಟೀನ್ (Home Qurantine) ಆಗಿರುವ ಕುರಿತು ಹೇಳಿದ ಅಕ್ಷಯ್
ಈ ಕುರಿತು ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ಅಕ್ಕಿ, 'ಇಂದು ಬೆಳಗ್ಗೆ ನನ್ನ ಕೊರೊನಾ (Covid-19) ವರದಿ ಸಕಾರಾತ್ಮಕ ಹೊರಬಂದಿದ್ದು, ನಾನು ಎಲ್ಲಾ ರೀತಿಯ ಪ್ರೋಟೋಕಾಲ್ ಗಳನ್ನು ಅನುಸರಿಸಿ ಹೋಮ್ ಕ್ವಾರಂಟೀನ್ ಗೆ ಒಳಗಾಗುತ್ತಿದ್ದೇನೆ. ಶೀಘ್ರವೇ ಕೆಲಸಕ್ಕೆ ಮರಳುವ ನಿರೀಕ್ಷೆ ಹೊಂದಿದ್ದೇನೆ ಎಂಬುದನ್ನು ಸೂಚಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
— Akshay Kumar (@akshaykumar) April 4, 2021
ಇದನ್ನೂ ಓದಿ-Rashmika Mandanna: ಅಮಿತಾಬ್ ಬಚ್ಚನ್ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿರಿಕ್ ಬೆಡಗಿ
ಸೂರ್ಯವಂಶಿ ಬಿಡುಗಡೆಗೆ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು
ಅಕ್ಷಯ್ ಕುಮಾರ್ ಅವರ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ, ಅಕ್ಷಯ್ ಒಂದಾದ ಮೇಲೊಂದರಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಬಳಿ ಚಲನಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಇನ್ನೊಂದೆಡೆ ಅಕ್ಕಿ ಅಭಿಮಾನಿಗಳು ಕೂಡ ಅವರ 'ಸೂರ್ಯವಂಶಿ' ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಕತ್ರಿನಾ ಕೈಫ್ ಜೊತೆಗೆ ರೋಮಾನ್ಸ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು. ಈ ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಕೂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ-Ajay Devgn: ಬರ್ಥ್ ಡೇ ಸಂಭ್ರಮದಲ್ಲಿರುವ ಅಜಯ್ ದೇವ್ಗನ್ ರಾಜಮೌಳಿಯಿಂದ 'ಬಂಪರ್ ಗಿಫ್ಟ್'!
ಅಕ್ಷಯ್ ಅವರ ಮುಂಬರುವ ಚಿತ್ರಗಳು ಇಂತಿವೆ
'ಸೂರ್ಯವಂಶಿ'ಯನ್ನು ಹೊರತುಪಡಿಸಿ ಶೀಘ್ರದಲ್ಲಿಯೇ ಅಕ್ಷಯ್ ಪೃಥ್ವಿರಾಜ್, ಬೆಲ್ ಬಾಟಮ್, ಬಚ್ಚನ್ ಪಾಂಡೆ ಹಾಗೂ ರಾಮ್ ಸೇತು ಚಿತ್ರಗಳಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ
ಇದನ್ನೂ ಓದಿ-Satyavathi Mangli: ಗಾಯಕಿ 'ಸತ್ಯವತಿ ಮಂಗ್ಳಿ' ಮತ್ತೆ ಸ್ಯಾಂಡಲ್ ವುಡ್ ಗೆ ರಿ ಎಂಟ್ರಿ..!
ಮನರಂಜನಾ ವಿಭಾಗದ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು Zee Hindustan Kannada ವೆಬ್ ಸೈಟ್ ನ ENTERTAINMENT ವಿಭಾಗಕ್ಕೆ ಭೇಟಿ ನೀಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.