ನವದೆಹಲಿ: ನಾಯಕತ್ವದ ಜವಾಬ್ದಾರಿಯನ್ನು ನೀಡಿದ ನಂತರ ರಿಷಭ್ ಪಂತ್ ಅವರ ಆಟ ಮತ್ತೊಂದು ಹಂತವನ್ನು ತಲುಪಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಐಪಿಎಲ್ ಫ್ರ್ಯಾಂಚೈಸ್ ದೆಹಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಮಂಗಳವಾರ, ದೆಹಲಿ ಕ್ಯಾಪಿಟಲ್ಸ್ (Delhi Capitals) ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಋತುವಿಗೆ ತಂಡದ ಹೊಸ ನಾಯಕನಾಗಿ ರಿಷಭ್ ಪಂತ್ ಅವರನ್ನು ನೇಮಿಸಿತು. ವಾಸ್ತವವಾಗಿ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದೆಹಲಿ ತಂಡದ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಅದರ ನಂತರ ಅವರು ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಮತ್ತು 14 ನೇ ಐಪಿಎಲ್ ಋತುವಿನ ಭಾಗವಾಗಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ - IPL 2021: ಈ ಋತುವಿನಲ್ಲಿ ಒಂದೇ ಒಂದು ಪಂದ್ಯ ಆಡದಿದ್ದರೂ Shreyas Iyerಗೆ ಸಿಗುತ್ತೆ ಸಂಭಾವನೆ
ಈ ಕುರಿತಂತೆ ಟ್ವೀಟ್ ಮಾಡಿರುವ ಮೊಹಮ್ಮದ್ ಕೈಫ್, "ಐಪಿಎಲ್ (IPL) ಫೈನಲ್‌ಗೆ ನಮ್ಮನ್ನು ಮುನ್ನಡೆಸಿದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ದೆಹಲಿಯ ನಮ್ಮ ಯುವ ನಾಯಕ ರಿಷಭ್ ಪಂತ್ ಅವರನ್ನು ನಾವು ಅಭಿನಂದಿಸುತ್ತೇವೆ. ನಾಯಕತ್ವವು ಅವನ ಆಟವನ್ನು ಬೇರೆ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Wishing a speedy recovery to @ShreyasIyer15 who captained us in our dream run to the IPL final. All the best to our dilli ka kadak launda, @RishabhPant17. I'm sure captaincy will take his game to yet another level.
— Mohammad Kaif (@MohammadKaif) April 2, 2021
ಇದನ್ನೂ ಓದಿ - WATCH: ಪಂದ್ಯದ ಚಿತ್ರಣವನ್ನೇ ಬದಲಿಸಿದ ವಿರಾಟ್ ಕೊಹ್ಲಿ ಹಿಡಿದ ಆ ಕ್ಯಾಚ್..!
ದೆಹಲಿ ಕ್ಯಾಪಿಟಲ್ಸ್ ನೂತನ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಈ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ್ದು, "ನಾನು ದೆಹಲಿಯಲ್ಲಿ ಬೆಳೆದಿದ್ದೇನೆ ಮತ್ತು ಇಲ್ಲಿಯೇ ನನ್ನ ಐಪಿಎಲ್ ಪ್ರಯಾಣ ಆರು ವರ್ಷಗಳ ಹಿಂದೆ ಪ್ರಾರಂಭವಾಯಿತು. ಒಂದು ದಿನ ಈ ತಂಡಕ್ಕೆ ನಾಯಕತ್ವ ವಹಿಸುವುದು ನನ್ನ ಕನಸು, ಈಗ ಈ ಕನಸು ನನಸಾಗಿದೆ. ಇದರ ಬಗ್ಗೆ ನನಗೆ ಗೌರವವಿದೆ" ಎಂದು ಹೇಳಿದ್ದಾರೆ.
"ನಾನು ಈ ಪಾತ್ರಕ್ಕೆ ಅರ್ಹನೆಂದು ಭಾವಿಸಿದ ಎಲ್ಲರಿಗೂ, ವಿಶೇಷವಾಗಿ ತಂಡದ ಮಾಲೀಕರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು. ಈ ಶ್ರೇಷ್ಠ ಕೋಚಿಂಗ್ ಸಿಬ್ಬಂದಿ ಮತ್ತು ಅನೇಕ ಹಿರಿಯ ಆಟಗಾರರೊಂದಿಗೆ, ದೆಹಲಿ ಕ್ಯಾಪಿಟಲ್ಸ್ ನನ್ನ ಕೈಲಾದಷ್ಟು ಪ್ರಯತ್ನ ಮಾಡಲು ನಾನು ಉತ್ಸುಕನಾಗಿದ್ದೇನೆ" ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.