Mamata Banerjee Statement On PM Modi: ಸಿಬಿಐ ಮತ್ತು ಇಡಿ ದುರ್ಬಳಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೈವಾಡವಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದೀಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ (ಸೆಪ್ಟೆಂಬರ್ 20, 2022) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವುದೇ ಸರ್ಟಿಫಿಕೆಟ್ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಬಿಜೆಪಿಯಲ್ಲಿರುವ ಯಾರಿಗೂ ಮತ್ತು ಖಂಡಿತವಾಗಿಯೂ ಪ್ರಧಾನಿಗೆ ಮಮತಾ ಬ್ಯಾನರ್ಜಿಯಿಂದ ಯಾವುದೇ ಮನ್ನಣೆ ನೀಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.


ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ಮೋದಿ ಕುರಿತು ಈ ಹೇಳಿಕೆ ನೀಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Road Safety: ಇನ್ಮುಂದೆ ರಸ್ತೆಯ ಮೇಲೆ ವೇಗವಾಗಿ ಕಾರ್-ಬೈಕ್ ಗಳು ಓಡುವುದಿಲ್ಲ, ಬದಲಾಗುತ್ತಿವೆ ಸ್ಪೀಡ್ ಹಾಗೂ ಹಾರ್ನ್ ಗೆ ಸಂಬಂಧಿಸಿದ ನಿಯಮಗಳು

ಬಿಜೆಪಿ ಮೇಲೆ ಆರೋಪ ಮಾಡಿದ್ದ ಮಮತಾ ದಿದಿ 
ನಿತ್ಯ ವಿರೋಧ ಪಕ್ಷಗಳ ನಾಯಕರಿಗೆ ಬಿಜೆಪಿ ನಾಯಕರು ಸಿಬಿಐ ಮತ್ತು ಇಡಿ ಬಂಧನದ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೇಶದ ಕೇಂದ್ರೀಯ ಸಂಸ್ಥೆಗಳು ಈ ರೀತಿ ಕೆಲಸ ಮಾಡಬೇಕೆ? ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ ಎಂದು ನನಗೆ ಅನಿಸುವುದಿಲ್ಲ, ಆದರೆ ಕೆಲವು ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.


ಇದನ್ನೂ ಓದಿ-Dussehra Rally ಶಿವಾಜಿ ಪಾರ್ಕ್ ನಲ್ಲಿಯೇ ನಡೆಯಲಿದೆ, ಅನುಮತಿ ಸಿಗಲಿ ಅಥವಾ ಸಿಗದಿರಲಿ: ಉದ್ಧವ್ ಬಣದ ಘೋಷಣೆ


ಇಡಿ ರಾಡಾರ್‌ನಲ್ಲಿ ಅನೇಕ ಟಿಎಂಸಿ ನಾಯಕರು
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕೆಲ ಹಿರಿಯ ನಾಯಕರು ಆರೋಪಿಗಳಾಗಿದ್ದು, ರಾಜ್ಯದಲ್ಲಿ ಸಿಬಿಐ ಮತ್ತು ಇಡಿಯಂತಹ ಕೇಂದ್ರೀಯ ಸಂಸ್ಥೆಗಳು ಅವರನ್ನು ತನಿಖೆಗೆ ಒಳಪಡಿಸಿವೆ. ಪ್ರಧಾನಿ ಕಚೇರಿಗೆ ವರದಿ ಸಲ್ಲಿಸುತ್ತಿದ್ದ ಸಿಬಿಐ ಇದೀಗ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳ ಅತಿರೇಕವನ್ನು ಪ್ರಧಾನಿ ಗಮನಿಸಬೇಕು ಎಂದು ಮಮತಾ ಆಗ್ರಹಿಸಿದ್ದರು. ಕೇಂದ್ರ ಸರ್ಕಾರದ ಕಾರ್ಯವೈಖರಿ ಮತ್ತು ಅವರ ಪಕ್ಷದ ಹಿತಾಸಕ್ತಿ ಬೆರೆಯದಂತೆ ಪ್ರಧಾನಿಗಳು ನೋಡಿಕೊಳ್ಳಬೇಕು ಎಂದು ಮಮತಾ ಸಲಹೆ ನೀಡಿದ್ದರು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.