Congress President Election: ಶಶಿ ತರೂರ್ ಗೂ ಕೂಡ ಜಿತೇಂದ್ರ ಪ್ರಸಾದ್ ಸ್ಥಿತಿ ಬರಲಿದೆಯಾ? 22 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಲಿದೆಯಾ?

Congress President Election: ದೇಶದ ಅತ್ಯಂತ ಹಳೆ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಸರ್ವೋಚ್ಛ ಹುದ್ದೆಗೆ ಚುನಾವಣೆ ನಡೆಯುವ ಸಾಧ್ಯತೆಗಳು ಇದೀಗ ಹೆಚ್ಚಾಗ ತೊಡಗಿದೆ.  

Written by - Nitin Tabib | Last Updated : Sep 20, 2022, 04:33 PM IST
  • ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ,
  • 22 ವರ್ಷಗಳ ನಂತರ ಈ ರೀತಿಯ ಒಂದು ಪೈಪೋಟಿ ನಡೆಯುತ್ತಿರುವುದು ಇದೆ ಮೊದಲು
  • 2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ನಡುವೆ ಪೈಪೋಟಿ ಏರ್ಪಟ್ಟಿತ್ತು,
Congress President Election: ಶಶಿ ತರೂರ್ ಗೂ ಕೂಡ ಜಿತೇಂದ್ರ ಪ್ರಸಾದ್ ಸ್ಥಿತಿ ಬರಲಿದೆಯಾ? 22 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಲಿದೆಯಾ? title=
Congress President Election

Congress Presidential Election: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಸಾರಥ್ಯ ವಹಿಸುವುದಿಲ್ಲ ಎಂಬ ಸೂಚನೆ ನೀಡಿದ್ದು, ಇದೀಗ ದೇಶದ ಅತ್ಯಂತ ಹಳೆಯ ಪಕ್ಷದಲ್ಲಿ ಅತ್ಯುನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಯುವುದು ಬಹುತೇಕ ಖಚಿತವಾಗಿದೆ.

ಒಂದೆಡೆ ಪಕ್ಷದ ಕೆಲವು ಹಿರಿಯ ನಾಯಕರು ಒಮ್ಮತದ ಅಭ್ಯರ್ಥಿ ಆಯ್ಕೆಗೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಶಶಿ ತರೂರ್ ಸೋಮವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಚುನಾವಣಾ ಸಮರಕ್ಕೆ ಇಳಿಯುವ ಲಕ್ಷಣಗಳು ಇದೀಗ ಗೋಚರಿಸತೊಡಗಿವೆ. ಇನ್ನು ಕೆಲವರು  ಕೂಡ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

22 ವರ್ಷಗಳ ನಂತರ ಕಾಂಗ್ರೆಸ್ ನಲ್ಲಿ ಈ ರೀತಿಯ ಸ್ಪರ್ಧೆ ನಡೆಯುತ್ತದೆ
ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ, 22 ವರ್ಷಗಳ ನಂತರ ಈ ರೀತಿಯ ಒಂದು ಪೈಪೋಟಿ ನಡೆಯುತ್ತಿರುವುದು ಇದೆ ಮೊದಲು. 2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಮತ್ತು ಜಿತೇಂದ್ರ ಪ್ರಸಾದ್ ನಡುವೆ ಪೈಪೋಟಿ ಏರ್ಪಟ್ಟಿತ್ತು, ಅದರಲ್ಲಿ ಅದರಲಿ ಜಿತೇಂದ್ರ ಪ್ರಸಾದ್ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಹಿಂದೆ 1997ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೀತಾರಾಮ್ ಕೇಸರಿ, ಶರದ್ ಪವಾರ್ ಹಾಗೂ ರಾಜೇಶ್ ಪೈಲಟ್ ನಡುವೆ ಇದೇ ರೀತಿಯ ಪೈಪೋಟಿ ಏರ್ಪಟ್ಟಿದ್ದು, ಅದರಲ್ಲಿ ಸೀತಾರಾಂ ಕೇಸರಿ ಗೆಲುವು ಸಾಧಿಸಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ತರೂರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಅವರು ಸೋಮವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ತಮ್ಮ ಇಂಗಿತವನ್ನು ತಿಳಿಸಿದ್ದಾರೆ ಎನ್ನಲಾಗಿದ್ದು , ಸೋನಿಯಾ ಕೂಡ ಅದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.  ಈ ಚುನಾವಣೆಯಲ್ಲಿ ಬಹು ಅಭ್ಯರ್ಥಿಗಳನ್ನು ಹೊಂದಿರುವುದು ಪಕ್ಷದ ದೃಷ್ಟಿಯಿಂದ ಉತ್ತಮವಾಗಿದ್ದು, ಅದರಲ್ಲಿ ತಮ್ಮ ಪಾತ್ರ ತಟಸ್ಥವಾಗಿರುತ್ತದೆ ಎಂದು ಸೋನಿಯಾ ಹೇಳಿದ್ದಾರೆ ಎನ್ನಲಾಗಿದೆ.

ಯಾರು ಬೇಕಾದರೂ ಸ್ಪರ್ಧಿಸಲು ಸ್ವತಂತ್ರರು
ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಈ ಚುನಾವಣೆಯಲ್ಲಿ ಪಕ್ಷದಿಂದ "ಅಧಿಕೃತ ಅಭ್ಯರ್ಥಿ" ಎಂಬ ಕಲ್ಪನೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಸೋನಿಯಾ ಅವರನ್ನು ತರೂರ್ ಭೇಟಿಯಾದ ಹಿನ್ನೆಲೆಯಲ್ಲಿ, ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರರು ಮತ್ತು ಇದು ಪಕ್ಷದ ನಾಯಕತ್ವದ ಸ್ಥಿರ ನಿಲುವಾಗಿದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಯಾರ ಅನುಮತಿ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಸೂಚನೆ ನೀಡಿದಂತಾಗಿದೆ.

ಲೋಕಸಭಾ ಸದಸ್ಯರಾದ ತರೂರ್ ಅವರು ಇತ್ತೀಚೆಗೆ ಸೋನಿಯಾ ಗಾಂಧಿ ಅವರು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಸೂಚಿಸಿದ ಸಮಯದಲ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್‌ಗೆ ನಿಕಟವಾಗಿರುವ ಕೆಲವು ಮೂಲಗಳ ಪ್ರಕಾರ  ಗೆಹ್ಲೋಟ್ ಸಹ ಅಭ್ಯರ್ಥಿಯಾಗಬಹುದು ಮತ್ತು ಇದು ಸಂಭವಿಸಿದರೆ, ಗಾಂಧಿ ಕುಟುಂಬದ ವಿಶ್ವಾಸಾರ್ಹತೆ ಮತ್ತು ಸುದೀರ್ಘ ರಾಜಕೀಯ ಅನುಭವವನ್ನು ಗಮನಿಸಿದರೆ ಅವರ ಹಕ್ಕು ಪ್ರಬಲವಾಗಿದೆ ಎಂದು ಹೇಳುತ್ತದೆ. ಈ ಮೂಲಕ ರಾಹುಲ್ ಗಾಂಧಿ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸುವುದಾಗಿ ಗೆಹ್ಲೋಟ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಈಗಾಗಲೇ ನಿರ್ಣಯ ಅಂಗೀಕಾರಗೊಂಡಿವೆ
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ಮತ್ತೊಮ್ಮೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಗ್ರಹವೂ ತೀವ್ರಗೊಂಡಿದೆ. ಈ ಹಿನ್ನೆಲೆ, ಸೋಮವಾರ, ಕೆಲವು ರಾಜ್ಯ ಕಾಂಗ್ರೆಸ್ ಸಮಿತಿಗಳು ರಾಹುಲ್ ಗಾಂಧಿಯನ್ನು ಬೆಂಬಲಿಸುವ ನಿರ್ಣಯಗಳನ್ನು ಅಂಗೀಕರಿಸಿವೆ.

ಇದನ್ನೂ ಓದಿ-Mamata Banarjee: ಮೊದಲು RSS ಬಣ್ಣನೆ, ನಂತರ ಪ್ರಧಾನಿ ಮೋದಿ ಸಮರ್ಥನೆ, ಮಮತಾ ಮೈಂಡ್ ನಲ್ಲಿ ನಡೆದಿದ್ದಾದರು ಏನು?

ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್‌ಗಢದ ನಂತರ ತಮಿಳುನಾಡು, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ಬಿಹಾರದ ಕಾಂಗ್ರೆಸ್ ಘಟಕಗಳು  ಕೂಡ ರಾಹುಲ್ ಗಾಂಧಿ ಮತ್ತೊಮ್ಮೆ ಪಕ್ಷದ ಸಾರಥ್ಯ ವಹಿಸಬೇಕು ಎಂದು ನಿರ್ಣಯವನ್ನು ಅಂಗೀಕರಿಸಿವೆ. ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಹುಲ್‌ಗೆ ಮನವಿ ಮಾಡಿದರೂ, ಮಾಜಿ ಕಾಂಗ್ರೆಸ್ ಅಧ್ಯಕ್ಷರು ಈ ತಿಂಗಳ ಆರಂಭದಲ್ಲಿ ತಾವು ಈ ಕುರಿತು ನಿರ್ಧಾರ ಕೈಗೊಂಡಿದ್ದು, ತಮ್ಮ ಯೋಜನೆಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿದ್ದರೆ ಅದಕ್ಕೆ ಕಾರಣ ನೀಡುವುದಾಗಿಯೂ ಅವರು ಹೇಳಿದ್ದರು.

ಇದನ್ನೂ ಓದಿ-Big News: ಮುಂದಿನ ಕಾಂಗ್ರೆಸ್ ಅಧ್ಯಕ್ಷ ಗಾಂಧಿ ಕುಟುಂಬ ಸದಸ್ಯನಾಗಿರುವುದಿಲ್ಲ! ಸೋನಿಯಾ ಘೋಷಣೆ!

ರಾಹುಲ್ ಅವರ ಈ ಮಾತುಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧರಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂಬಂತೆ ಪಕ್ಷದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆ.22ರಂದು ಅಧಿಸೂಚನೆ ಹೊರಬೀಳಲಿದ್ದು, 24ರಿಂದ 30ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News