Road Safety: ಇನ್ಮುಂದೆ ರಸ್ತೆಯ ಮೇಲೆ ವೇಗವಾಗಿ ಕಾರ್-ಬೈಕ್ ಗಳು ಓಡುವುದಿಲ್ಲ, ಬದಲಾಗುತ್ತಿವೆ ಸ್ಪೀಡ್ ಹಾಗೂ ಹಾರ್ನ್ ಗೆ ಸಂಬಂಧಿಸಿದ ನಿಯಮಗಳು

New Road Speed policy: ಶೀಘ್ರದಲ್ಲೇ ಭಾರತದಲ್ಲಿ ವಾಹನಗಳ ವೇಗ ಮತ್ತು ಹಾರ್ನ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ಇದರ ಅಡಿಯಲ್ಲಿ, ಗರಿಷ್ಠ ವೇಗದ ಮಿತಿ ಕಡಿಮೆಯಾಗುವ ಸಾಧ್ಯತೆ ಇದೆ ಮತ್ತು ಹಾರ್ನ್ ನಿಯಮಗಳು ಸಹ ಬದಲಾಗಬಹುದು. ಹೊಸ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸಿದ್ಧಪಡಿಸಲಿವೆ ಎನ್ನಲಾಗಿದೆ.  

Written by - Nitin Tabib | Last Updated : Sep 20, 2022, 09:13 PM IST
  • ಹೆದ್ದಾರಿಯಲ್ಲಿ ಕಾರು ಅಥವಾ ಬೈಕು ಓಡಿಸಲು ನಿಮಗೂ ಇಷ್ಟವಾಗುತ್ತಿದ್ದರೆ,
  • ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಹಾಗೆ ಮಾಡುವುದರಿಂದ ನಿಮಗೆ ಹೆಚ್ಚು ದುಬಾರಿ ಬೀಳುವ ಸಾಧ್ಯತೆ ಇದೆ.
  • ಶೀಘ್ರದಲ್ಲೇ ಭಾರತದಲ್ಲಿ ವಾಹನಗಳ ವೇಗ ಮತ್ತು ಹಾರ್ನ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ.
Road Safety: ಇನ್ಮುಂದೆ ರಸ್ತೆಯ ಮೇಲೆ ವೇಗವಾಗಿ ಕಾರ್-ಬೈಕ್ ಗಳು ಓಡುವುದಿಲ್ಲ, ಬದಲಾಗುತ್ತಿವೆ ಸ್ಪೀಡ್ ಹಾಗೂ ಹಾರ್ನ್ ಗೆ ಸಂಬಂಧಿಸಿದ ನಿಯಮಗಳು title=
Road Safety Rules

New Rules for Speed and Horn: ಹೆದ್ದಾರಿಯಲ್ಲಿ ಕಾರು ಅಥವಾ ಬೈಕು ಓಡಿಸಲು ನಿಮಗೂ ಇಷ್ಟವಾಗುತ್ತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಹಾಗೆ ಮಾಡುವುದರಿಂದ ನಿಮಗೆ ಹೆಚ್ಚು ದುಬಾರಿಯಾಗಬಹುದು. ಏಕೆಂದರೆ, ಶೀಘ್ರದಲ್ಲೇ ಭಾರತದಲ್ಲಿ ವಾಹನಗಳ ವೇಗ ಮತ್ತು ಹಾರ್ನ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ. ಇದರ ಅಡಿಯಲ್ಲಿ, ಗರಿಷ್ಠ ವೇಗದ ಮಿತಿಯನ್ನು ಕಡಿಮೆಯಾಗುವ ಸಾಧ್ಯತೆ ಇದೆ ಮತ್ತು ಹಾರ್ನ್ ನಿಯಮಗಳೂ ಸಹ ಬದಲಾಯಿಸಬಹುದು. ಹೊಸ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸಿದ್ಧಪಡಿಸುವ ಸಾಧ್ಯತೆ ಇದೆ.

ಟೈಮ್ಸ್ ಆಫ್ ಇಂಡಿಯಾನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೊಸ ನೀತಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ, ಇದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ರಸ್ತೆಗಳಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ನಿಗದಿಪಡಿಸಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Dussehra Rally ಶಿವಾಜಿ ಪಾರ್ಕ್ ನಲ್ಲಿಯೇ ನಡೆಯಲಿದೆ, ಅನುಮತಿ ಸಿಗಲಿ ಅಥವಾ ಸಿಗದಿರಲಿ: ಉದ್ಧವ್ ಬಣದ ಘೋಷಣೆ

ವೇಗ ಮತ್ತು ಹಾರ್ನ್ ಅನ್ನು ನಿಯಂತ್ರಿಸಲಾಗುತ್ತಿದೆ
ವಾಹನಗಳ ವೇಗದ ಮಿತಿ ನಿಗದಿ ಹಾಗೂ ಹೊಸ ನೀತಿ ರೂಪಿಸುವ ಹಕ್ಕು ಕೇಂದ್ರ ಹಾಗೂ ರಾಜ್ಯಗಳೆರಡಕ್ಕೂ ಇದೆ ಎಂದು ರಾಜ್ಯ ಸಾರಿಗೆ ಸಚಿವರಿಗೆ ತಿಳಿಸಿದ್ದಾರೆ. ವೇಗದ ಹೊರತಾಗಿ ಹಾರ್ನ್ ಗೆ ಸಂಬಂಧಿಸಿದಂತೆಯೂ ಸರ್ಕಾರ ಹೊಸ ನೀತಿಯನ್ನೂ ತರುವ ಸಾಧ್ಯತೆ ಇದೆ. ಇದರ ಅಡಿಯಲ್ಲಿ, ವಾಹನಕ್ಕೆ ಕಂಪನಿಗಳು ಅಳವಡಿಸುವ ಹಾರ್ನ್ ಗಳನ್ನು ಹೊರತುಪಡಿಸಿ, ಮಾರುಕಟ್ಟೆಯಲ್ಲಿ ದೊರೆಯುವ ಕರ್ಕಶ ಹಾರ್ನ್ ಗಳ ಬಗ್ಗೆಯೂ ಕೂಡ ನಿಯಮಗಳನ್ನು ತರಲಾಗುವುದು ಎನ್ನಲಾಗಿದೆ. ಪ್ರಸ್ತುತ 7.5 ಮೀಟರ್ ದೂರದಲ್ಲಿ ಅಳೆಯುವಾಗ ವಾಹನದ ಹಾರ್ನ್‌ಗಳು 93 ರಿಂದ 112 ಡೆಸಿಬಲ್‌ಗಳ ಒಳಗೆ ಇರಬೇಕು ಎಂಬ ನಿಯಮವಿದೆ.

ಇದನ್ನೂ ಓದಿ-Congress President Election: ಶಶಿ ತರೂರ್ ಗೂ ಕೂಡ ಜಿತೇಂದ್ರ ಪ್ರಸಾದ್ ಸ್ಥಿತಿ ಬರಲಿದೆಯಾ? 22 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಲಿದೆಯಾ?

ಇದಕ್ಕೂ ಮುನ್ನ ನಿತಿನ್ ಗಡ್ಕರಿ ಅವರು ವಾಹನಗಳ ಹಾರ್ನ್‌ಗೆ ಸಂಗೀತ ವಾದ್ಯಗಳ ಧ್ವನಿಯನ್ನು ಬಳಸಲು ಸೂಚಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದ ನಂತರ ರಸ್ತೆ ಸುರಕ್ಷತೆಯನ್ನು ಬಿಗಿಗೊಳಿಸಲಾಗುತ್ತಿದೆ. ವರದಿಗಳ ಪ್ರಕಾರ, ಮಿಸ್ತ್ರಿ ಸಾವಿನ ಹಿಂದೆ ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ವೇಗದ ಚಾಲನೆ ಮತ್ತು ಕಳಪೆ ರಸ್ತೆ ವಿನ್ಯಾಸ ಸೇರಿದಂತೆ ಹಲವು ಕಾರಣಗಳು ಮುನ್ನೆಲೆಗೆ ಬಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News