ಇಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಪ್ರಧಾನಿ ಮೋದಿ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ (Narednra Modi) ಅವರು ಇಂದು (ಮಾರ್ಚ್ 07) ಯುದ್ಧ ಪೀಡಿತ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಲಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narednra Modi) ಅವರು ಇಂದು (ಮಾರ್ಚ್ 07) ಯುದ್ಧ ಪೀಡಿತ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಲಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ‘ಪರಮಾಣು ಬಾಂಬ್’ ಹಾಕುತ್ತಾ ರಷ್ಯಾ! 500 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವೇನು?
ರಷ್ಯಾದಿಂದ (Russia) ದಾಳಿಯನ್ನು ಎದುರಿಸುತ್ತಿರುವ ದೇಶದಿಂದ ತನ್ನ ಪ್ರಜೆಗಳನ್ನು, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತವು ಸಂಪೂರ್ಣ ಪ್ರಯತ್ನ ಪಡುತ್ತಿದೆ. ಈ ಮಧ್ಯೆ ಝೆಲೆನ್ಸ್ಕಿಯೊಂದಿಗೆ ಮೋದಿಯವರ (Narendra Modi) ಮಾತುಕತೆ ಮಹತ್ವದ್ದಾಗಿದೆ.
ಯುದ್ಧ ಆರಂಭವಾದ ನಂತರ ಮೋದಿ ಅವರು ಝೆಲೆನ್ಸ್ಕಿ (Zelensky) ಅವರೊಂದಿಗೆ ಮಾತನಾಡುತ್ತಿರುವುದು ಇದು ಎರಡನೇ ಬಾರಿ. ಫೆಬ್ರವರಿ 24 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ ಝೆಲೆನ್ಸ್ಕಿಯೊಂದಿಗೆ ಪಿಎಂ ಮೋದಿ ಫೆಬ್ರವರಿ 26 ರಂದು ಮೊದಲ ಬಾರಿಗೆ ಮಾತನಾಡಿದರು.
ವಿಶ್ವಸಂಸ್ಥೆಯಲ್ಲಿ ಮತದಾನದ ವೇಳೆ ಭಾರತ ಗೈರು ಹಾಜರಾದ ನಂತರ, ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿಯವರನ್ನು ಮಾತನಾಡಿಸಿ ಭಾರತದ ರಾಜಕೀಯ ಬೆಂಬಲವನ್ನು ಕೋರಿದರು.
ಉಕ್ರೇನ್ (Ukraine) ಮೇಲೆ ದಾಳಿ ನಡೆಸಿದ ಬಳಿಕ ಪ್ರಧಾನಿಯವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೂ ಮಾತನಾಡಿದ್ದಾರೆ.
ಯುದ್ಧ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ಅವರು ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯ ಪ್ರಗತಿ ಮತ್ತು ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.
ಇದನ್ನೂ ಓದಿ: Russia-Ukraine War: ರಷ್ಯಾನಲ್ಲಿ Marshal Law ಜಾರಿಗೆ Vladimir Putin ನಕಾರ, ಉಕ್ರೇನ್ ಬೆಂಬಲಿಸುವ ದೇಶಗಳಿಗೆ ಹೊಸ ಧಮ್ಕಿ
ಕಳೆದ ವಾರದಲ್ಲಿ, ಆಪರೇಷನ್ ಗಂಗಾ (Operation Ganga) ಅಡಿಯಲ್ಲಿ 10,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. ಖಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ, ಉಕ್ರೇನ್‌ನ ಉಳಿದ ಪ್ರದೇಶಗಳಿಂದ ಬಹುತೇಕ ಎಲ್ಲ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.