ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಜೆಟ್ 2022 ಕುರಿತು ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಸಂವಾದದಲ್ಲಿ ಬಜೆಟ್‌ನ ಸಾಧನೆಗಳನ್ನು ಕುರಿತು ಪ್ರಧಾನಿ ಮೋದಿ ಮಾತನಾಡಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ ಎಂಬುವುದು ನಿಮಗೆ ಗೊತ್ತಿರುವ ವಿಚಾರ.


COMMERCIAL BREAK
SCROLL TO CONTINUE READING

ದೇಶವು 100 ವರ್ಷಗಳ ಅತಿದೊಡ್ಡ ಮಹಾಮಾರಿ ವಿರುದ್ಧ ಹೋರಾಡುತ್ತಿದೆ


ದೇಶವು 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ ಎಂದು ಪ್ರಧಾನಿ ಮೋದಿ(PM Modi) ಹೇಳಿದರು. ಕೊರೊನಾವೈರಸ್‌ನ ಈ ಅವಧಿಯು ಜಗತ್ತಿಗೆ ಅನೇಕ ಸವಾಲುಗಳನ್ನು ತಂದೊಡ್ಡಿದೆ ಎಂದು ಹೇಳಿದರು.


ಇದನ್ನೂ ಓದಿ : ಸಂವಿಧಾನದ ಬಗ್ಗೆ ತೆಲಂಗಾಣ ಮುಖ್ಯಮತ್ರಿಯ ವಿವಾದಾತ್ಮಕ ಹೇಳಿಕೆ


ಜಗತ್ತಿನಲ್ಲಿ ಭಾರತವನ್ನು ನೋಡುವ ಮನೋಭಾವ ಬದಲಾಗುತ್ತಿದೆ


ಕೊರೊನಾ(Corona) ನಂತರ ಹೊಸ ವಿಶ್ವ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದರ ಲಕ್ಷಣಗಳೂ ಗೋಚರಿಸುತ್ತಿವೆ. ಇಂದು ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನದಲ್ಲಿ ದೊಡ್ಡ ಬದಲಾವಣೆಯಾಗಿದೆ. ಈಗ ವಿಶ್ವದ ಜನರು ಭಾರತವನ್ನು ಪ್ರಬಲ ಶಕ್ತಿ ರೂಪದಲ್ಲಿ ನೋಡಲು ಬಯಸುತ್ತಾರೆ, ಆದ್ದರಿಂದ ಇಡೀ ಜಗತ್ತು ಭಾರತದತ್ತ ಹೊಸ ನೋಟದತ್ತ ನೋಡುತ್ತಿರುವಾಗ, ನಾವು ಕೂಡ ದೇಶವನ್ನು ವೇಗವಾಗಿ ಮುನ್ನಡೆಸುವುದು ಅವಶ್ಯಕ. ಹೊಸ ಅವಕಾಶಗಳು ಮತ್ತು ಹೊಸ ನಿರ್ಣಯಗಳನ್ನು ಪೂರೈಸುವ ಸಮಯ ಇದು ಎಂದು ತಿಳಿಸಿದರು.


ಭಾರತದ ವಿದೇಶಿ ವಿನಿಮಯ ಮೀಸಲು ವೇಗವಾಗಿ ಹೆಚ್ಚಳ


ಇಂದು ಭಾರತದ ಜಿಡಿಪಿ(GDP) ಸುಮಾರು 2 ಲಕ್ಷ 30 ಸಾವಿರ ಕೋಟಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಸ್ತುತ ಭಾರತದ ವಿದೇಶಿ ವಿನಿಮಯ ಮೀಸಲು $630 ಬಿಲಿಯನ್ ದಾಟಿದೆ. 2013-14ನೇ ಸಾಲಿನಲ್ಲಿ ಭಾರತದ ರಫ್ತು 2 ಲಕ್ಷ 85 ಸಾವಿರ ಕೋಟಿ ರೂ. ಇಂದು ಭಾರತದ ರಫ್ತು ಸುಮಾರು 4 ಲಕ್ಷ 70 ಸಾವಿರ ಕೋಟಿ ರೂ.ಗೆ ತಲುಪಿದೆ. ಈ ಕೊರೊನಾ ಅವಧಿಯಲ್ಲೂ ಭಾರತ ತನ್ನ ಆರ್ಥಿಕತೆಯ ಬಲದಿಂದ ವಿಶ್ವದ ಗಮನ ಸೆಳೆದಿದೆ. ಈ ಬಜೆಟ್‌ನಲ್ಲಿ ಬಡವರು ಮತ್ತು ಯುವಕರ ಮೇಲೆ ಕೇಂದ್ರೀಕೃತವಾಗಿದೆ. ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಗುರಿ.


3 ಕೋಟಿ ಬಡವರು ಲಕ್ಷಾಧಿಪತಿಗಳು


ಕಳೆದ 7 ವರ್ಷಗಳಲ್ಲಿ ನಮ್ಮ ಸರ್ಕಾರ 3 ಕೋಟಿ ಬಡವರಿಗೆ ಮನೆಗಳನ್ನು ನೀಡುವ ಮೂಲಕ ಲಕ್ಷಾಧಿಪತಿಗಳನ್ನಾಗಿ ಮಾಡಿದೆ ಎಂದರು. ಈಗ ಸುಮಾರು 9 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿಯಿಂದ ನೀರು ತಲುಪಲಾರಂಭಿಸಿದೆ. ಈ ಪೈಕಿ ಕಳೆದ ಎರಡು ವರ್ಷಗಳಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ 5 ಕೋಟಿಗೂ ಹೆಚ್ಚು ನೀರಿನ ಸಂಪರ್ಕಗಳನ್ನು ನೀಡಲಾಗಿದೆ. ಈ ವರ್ಷ ಸುಮಾರು 4 ಕೋಟಿ ಗ್ರಾಮೀಣ ಕುಟುಂಬಗಳಿಗೆ ನೀರಿನ ಸಂಪರ್ಕ ನೀಡುವುದಾಗಿ ಬಜೆಟ್‌(Budget 2022)ನಲ್ಲಿ ಘೋಷಿಸಲಾಗಿದೆ ಎಂದು ತಿಳಿಸಿದರು.


ಇದನ್ನೂ ಓದಿ : Free Ration Scheme : ಮಾರ್ಚ್ ನಂತರವೂ 'ಉಚಿತ ಪಡಿತರ' ಸಿಗುತ್ತದೆಯೇ? ವಿತ್ತ ಸಚಿವೆ ಹೇಳಿದ್ದೇನು ಗೊತ್ತಾ?


ಬಡವರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು, ಈಗ ಅವರಿಗೆ ಸ್ವಂತ ಮನೆ ಇದೆ ಎಂದರು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈ ಮನೆಗಳ ಮೊತ್ತವೂ ಹೆಚ್ಚಿದೆ ಮತ್ತು ಮನೆಗಳ ಗಾತ್ರವೂ ಹೆಚ್ಚಾಗಿದೆ ಇದರಿಂದ ಮಕ್ಕಳಿಗೆ ಅಧ್ಯಯನಕ್ಕೆ ಸ್ಥಳಾವಕಾಶ ಸಿಗುತ್ತದೆ. ಈ ಮನೆಗಳು ಹೆಚ್ಚಾಗಿ ಹೆಣ್ಣು ಮಕ್ಕಳ ಹೆಸರಿನಲ್ಲಿವೆ ಅಂದರೆ ಮಹಿಳೆಯನ್ನ ಮನೆಯ ಯಜಮಾನಿಯನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.


ಭಾರತದಂತಹ ದೇಶದಲ್ಲಿ ಯಾವುದೇ ಪ್ರದೇಶ ಹಿಂದುಳಿದಿದ್ದರೆ ಅದು ಸರಿಯಲ್ಲ ಎಂದರು. ಅದಕ್ಕಾಗಿಯೇ ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳು - Aspirational Districts ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಈ ಜಿಲ್ಲೆಗಳಲ್ಲಿ ಬಡವರ ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಮತ್ತು ನೀರಿಗಾಗಿ ಮಾಡಿರುವ ಕೆಲಸ ವಿಶ್ವಸಂಸ್ಥೆಯಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಭಾರತದಂತಹ ದೇಶದಲ್ಲಿ ಕೆಲವು ಪ್ರದೇಶಗಳು ಹಿಂದುಳಿದಿದ್ದರೆ, ಅದು ಸರಿಯಲ್ಲ. ಅದಕ್ಕಾಗಿಯೇ ನಾವು Aspirational Districts ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದರು.


ರಾಷ್ಟ್ರದ ಭದ್ರತೆಗಾಗಿ, ನಮ್ಮ ಪಡೆಗಳು, ನಮ್ಮ ಸೈನಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರು ತಮ್ಮ ಪ್ರಾಣವನ್ನೂ ಪಣಕ್ಕಿಟ್ಟಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಗಡಿ ಗ್ರಾಮಗಳೂ ಕೋಟೆಯಂತೆ ವರ್ತಿಸುವುದರಿಂದ ಆ ಗಡಿಗ್ರಾಮಗಳ ದೇಶಪ್ರೇಮವೂ ಅದ್ಭುತ ಎಂದು ಶ್ಲಾಘಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.