ಮದುವೆಯಾದ 6 ತಿಂಗಳಿಗೆ ಕೊರೊನಾಗೆ ಪತಿ ಬಲಿ: ಕೋವಿಡ್ ನಿಧಿಗೆ 40 ಲಕ್ಷ ದೇಣಿಗೆ ನೀಡಿದ ವಿಧವೆ

ಪತಿ ಕಳೆದುಕೊಂಡ ದುಃಖದಲ್ಲಿಯೂ ಕೋವಿಡ್ ನಿಂದ ನೊಂದು ಬೆಂದವರಿಗೆ ಸಹಾಯ ಮಾಡಬೇಕೆನ್ನುವ ತುಡಿತ ಹೊಂದಿರುವ ಇವರ ನಿಜಜೀವನದ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

Written by - Zee Kannada News Desk | Last Updated : Feb 1, 2022, 09:59 PM IST
  • ಮದುವೆಯಾದ ಕೇವಲ 6 ತಿಂಗಳಿಗೆ ಕೊರೊನಾ ವೈರಸ್ ಗೆ ಪತಿ ಬಲಿ
  • ದುಃಖದಲ್ಲಿಯೂ ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ
  • ಪ್ರತಿಯೊಬ್ಬರಿಗೂ ಸ್ಫೂರ್ತಿ ಭದ್ರಕ್‌ನ ಬಸುದೇವ್‌ಪುರದ ಮೌಸುಮಿ ಮೊಹಾಂತಿ
ಮದುವೆಯಾದ 6 ತಿಂಗಳಿಗೆ ಕೊರೊನಾಗೆ ಪತಿ ಬಲಿ: ಕೋವಿಡ್ ನಿಧಿಗೆ 40 ಲಕ್ಷ ದೇಣಿಗೆ ನೀಡಿದ ವಿಧವೆ title=
ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ

ಭುವನೇಶ್ವರ: ಮದುವೆಯಾದ ಕೇವಲ 6 ತಿಂಗಳಿಗೇ ಕೊರೊನಾದಿಂದ ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವಳು ಕೋವಿಡ್ ಪರಿಹಾರ ನಿಧಿಗೆ ಬರೋಬ್ಬರಿ 40 ಲಕ್ಷ ರೂ. ದೇಣಿಗೆ ನೀಡಿರುವ ಹೃದಯಸ್ಪರ್ಶಿ ಘಟನೆ ಒಡಿಶಾದ ಬಸುದೇವಪುರದಲ್ಲಿ ನಡೆದಿದೆ. ಹೌದು, ಕೇವಲ 23 ವರ್ಷದ ಮೌಸುಮಿ ಮೊಹಾಂತಿ(Mousumi Mohanty) ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಪತಿ ಕಳೆದುಕೊಂಡ ದುಃಖದಲ್ಲಿಯೂ ಕೋವಿಡ್(COVID-19)ನಿಂದ ನೊಂದು ಬೆಂದವರಿಗೆ ಸಹಾಯ ಮಾಡಬೇಕೆನ್ನುವ ತುಡಿತ ಹೊಂದಿರುವ ಇವರ ನಿಜಜೀವನದ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಪತಿ ಕಳೆದುಕೊಂಡ ಇವರ ಸಮಾಜಸೇವಾ ಮನೋಭಾವಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಭದ್ರಕ್‌ನ ಬಸುದೇವ್‌ಪುರ(Basudevpur)ದ ಮೌಸುಮಿ ಮೊಹಾಂತಿ ಅವರ ಪತಿಗೆ ಮದುವೆಯಾದ ಕೇವಲ ಎರಡೇ ವಾರಕ್ಕೆ ಕೊರೊನಾ ಸೋಂಕು ತಗುಲಿತ್ತು.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.14 ರಷ್ಟು ಹೆಚ್ಚಳ!

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮೊಹಾಂತಿಯವರ ಪತಿಗೆ ಐದಾರು ತಿಂಗಳು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಕೊರೊನಾ ಸೋಂಕಿಗೆ(CoronaVirus) ಬಳಲಿ ಬೆಂಡಾಗಿದ್ದ ಪತಿಯನ್ನು ಉಳಿಸಿಕೊಳ್ಳಲು ಮೊಹಾಂತಿ ಸಾಕಷ್ಟು ಪ್ರಯತ್ನಿಸಿದ್ದರು. ಜೀವನ್ಮರಣ ಸ್ಥಿತಿಯಲ್ಲಿದ್ದ ಪತಿಯನ್ನು ಉಳಿಸಿಕೊಳ್ಳಲು ಚಿಕಿತ್ಸೆಗಾಗಿ ಕ್ರೌಡ್ ಫಂಡಿಂಗ್(Crowdfunding) ಮೂಲಕ 40 ಲಕ್ಷ ರೂ. ಸಂಗ್ರಹಿಸಿದ್ದಳು. ಆದರೆ ಪತಿಯ ಜೀವವನ್ನು ಮಾರಕ ವೈರಸ್ ಬಲಿತೆಗೆದುಕೊಂಡಿತ್ತು. ಮದುವೆಯಾದ ಆರೇ ತಿಂಗಳಿಗೆ ಪತಿ ಕಳೆದುಕೊಂಡ ಮೊಹಾಂತಿಗೆ ದಿಗ್ಭ್ರಮೆ ಉಂಟಾಗಿತ್ತು. ಈ ಆಘಾತದಿಂದ ಹೊರಬರಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಕೋವಿಡ್ ನಿಧಿಗೆ 40 ಲಕ್ಷ ದೇಣಿಗೆ

ಪತಿಯನ್ನುಕಳೆದುಕೊಂಡ ದುಃಖದಲ್ಲಿದ್ದ ಮೊಹಾಂತಿ(Mousumi Mohanty)ಯವರು ಸಾಂಕ್ರಾಮಿಕ ರೋಗದ ಪರಿಣಾಮದಿಂದ ಬಳಲುತ್ತಿರುವ ಸಾವಿರಾರು ಜನರ ಬಗ್ಗೆ ಯೋಚಿಸಿದರು. ಜ.17ರಂದು ತನ್ನ ಗಂಡನ ಚಿಕಿತ್ಸೆಗಾಗಿ ಕ್ರೌಡ್ ಫಂಡಿಗ್ ಮೂಲಕ ಸಂಗ್ರಹಿಸಿದ್ದ 40 ಲಕ್ಷ ರೂ.ವನ್ನು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆಂದು ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.  

ಇದನ್ನೂ ಓದಿ: Budget 2022 : ಕೇಂದ್ರ ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ಸಿಹಿ ಸುದ್ದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News