ನವದೆಹಲಿ: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕೃಷಿಯಲ್ಲಿ ಯಾವ ಸುಧಾರಣೆ ಬೇಕು ಎಂದು ಪ್ರತಿಪಾದಿಸಿದ್ದರೋ ಅದೇ ಬದಲಾವಣೆಯನ್ನ ಈಗ ತರಲಾಗಿದೆ ಎಂದು ರಾಜ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಹೊಸ ಮಸೂದೆಗಳು ಕೃಷಿ ಕ್ಷೇತ್ರ(Farm Laws)ದಲ್ಲಿ ಯಾವ ರೀತಿಯ ಬದಲಾವಣೆಗಳನ್ನ ತರುತ್ತವೆ ಅನ್ನೋದನ್ನ ಮೊದಲು ನೋಡೋಣ. ಆ ಬಳಿಕ ಮಸೂದೆಯಲ್ಲಿ ಸಮಸ್ಯೆ ಕಂಡು ಬಂದರೆ ಅದನ್ನ ಸರಿ ಮಾಡೋಣ ಎಂದರು.


EPFO Latest News: PFಗೆ ಸಂಬಂಧಿಸಿದ ಈ ದೊಡ್ಡ ಅಡಚಣೆ ಇದೀಗ ನಿವಾರಣೆಯಾಗಿದೆ


ನೂತನ ಕೃಷಿ ಮಸೂದೆಯಿಂದ ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ವೃದ್ಧಿಯಾಗಲಿದೆ ಎಂಬ ನಂಬಿಕೆ ನನಗಿದೆ. ಎಂಎಸ್ಪಿ(MSP) ಇದೆ, ಎಂಎಸ್ಪಿ ಇರಲಿದೆ, ಹಾಗೂ ಎಂಎಸ್ಪಿ ಮುಂದುವರಿಯಲಿದೆ. ಪ್ರತಿ ಸರ್ಕಾರವೂ ಕೃಷಿ ಸುಧಾರಣೆಯನ್ನ ಈ ಹಿಂದೆ ಬೆಂಬಲಿಸಿದೆ. ಆದರೆ ಈಗ ವಿಪಕ್ಷಗಳು ಯೂ ಟರ್ನ್ ಹೊಡೆದಿವೆ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳಿಗೆ ಛಾಟಿ ಬೀಸಿದ್ದಾರೆ.


Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ


ಸದನದಲ್ಲಿ ಪ್ರತಿಯೊಬ್ಬರು ರೈತರ(Farmers) ಆಂದೋಲನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಯಾವೊಬ್ಬ ವಿರೋಧ ಪಕ್ಷದ ನಾಯಕನೂ ಕೃಷಿ ಆಂದೋಲನ ಏಕೆ ನಡೀತಾ ಇದೆ ಅನ್ನೋದರ ಬಗ್ಗೆ ಮಾತೇ ಆಡಿಲ್ಲ. ಕೃಷಿ ಹೋರಾಟ ಆರಂಭವಾಗಿರೋದ್ರ ಮೂಲ ಉದ್ದೇಶ ಏನು ಅನ್ನೋದ್ರ ಬಗ್ಗೆ ಮೊದಲು ಚರ್ಚೆ ನಡೆಯಬೇಕು. ಈ ವಿಚಾರದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅತ್ಯಂತ ಶಕ್ತಿಶಾಲಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ರು.


Twitter ನಿಂದ 1178 ಪಾಕ್-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕಲು ಮೋದಿ ಸರ್ಕಾರದ ಫರ್ಮಾನು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.