ಒಡಿಶಾ : ದೇಶದಲ್ಲಿ ಕರೋನಾ (Coronavirus) ಪ್ರಕರಣಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕರೋನಾ ಮಾರ್ಗಸೂಚಿಗಳನ್ನು (Corona Guidelines) ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವೂ ಇದೆ. ರಾಜ್ಯ , ಕೇಂದ್ರ ಸರ್ಕಾರಗಳು ಕೂಡಾ ಈ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ನಡೆಸುತ್ತಿದೆ. ಅಲ್ಲದೆ ಕರೋನಾ ಮಾರ್ಗಸೂಚಿಗಳನ್ನು ಪಾಲಿಸದೇ ಇರುವವರ ಮೇಲೆ ದಂಡ ವಿಧಿಸಲಾಗುತ್ತಿದೆ. ಕರೋನಾ ಮಾರ್ಗಸೂಚಿಗಳನ್ನು ಪಾಲಿದೇ ಹೋದರೆ ಅಡ್ಡಗಟ್ಟಿ ದಂಡದ ರಶೀದಿ ಬರೆಯುತ್ತಾರೆ ಪೊಲೀಸ್. ಆದರೆ ಪೊಲೀಸರೇ ನಿಯಮ ಉಲ್ಲಂಘಿಸಿದರೆ, ಅವರೂ ದಂಡ ತೆರಬೇಕು. ಹೌದು, ಒಡಿಶಾದಲ್ಲಿ ಇಂಥದ್ದೊಂದು ಘಟನೆ  ನಡೆದಿದೆ.  ಮಾಸ್ಕ್  (Mask)ಧರಿಸದ ಕಾರಣ  ಟ್ರಾಫಿಕ್ ಕಾನ್‌ಸ್ಟೆಬಲ್‌ಗೆ 2000 ರೂ. ದಂಡ ವಿಧಿಸಲಾಗಿದೆ.  


COMMERCIAL BREAK
SCROLL TO CONTINUE READING

ಒಡಿಶಾದಲ್ಲಿ ಕೋವಿಡ್ -19  (COVID-19) ನಿಯಮಗಳನ್ನು ಜಾರಿಗೆ ತರುವ ಉದ್ದೇಶದಿಂದ 14 ದಿನಗಳ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನದ ಅಂಗವಾಗಿ ಕೋವಿಡ್ ನಿಯಮವನ್ನು ಪಾಲಿಸದೇ ಹೋದರೆ ಅವರ ಮೇಲೆ 2,000 ರೂ ದಂಡ ವಿಧಿಸಲಾಗುವುದು. ಈ ನಿಯಮದಂತೆ, ಮಾಸ್ಕ್ (Mask) ಧರಿಸದ ಟ್ರಾಫಿಕ್ ಕಾನ್‌ಸ್ಟೆಬಲ್‌ ಗೂ 2000 ರೂ. ದಂಡ ವಿಧಿಸಲಾಗಿದೆ ಎಂದು ಒಡಿಶಾ ಪೊಲೀಸರು (Police) ತಿಳಿಸಿದ್ದಾರೆ. 


ಇದನ್ನೂ ಓದಿ : Ambedkar Jayanti 2021: ಸ್ಫೂರ್ತಿ ನೀಡುವ ಡಾ. ಬಿ ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು


ದಂಡ ವಿಧಿಸಿ ಕೂಡಲೇ ತಮ್ಮ ತಪ್ಪಿನ ಅರಿವಾದ ಕಾನ್ಸ್ ಸ್ಟೇಬಲ್ ಜವಾಬ್ದಾರಿಯುತ ಪ್ರಜೆಯಾಗಿ ದಂಡವನ್ನು ಪಾವತಿಸಿದ್ದಾರೆ ಎಂದು ಪೊಲೀಸರು ಟ್ವೀಟ್ (Tweet) ಮಾಡಿದ್ದಾರೆ. ”ವಿಶೇಷ ಕೋವಿಡ್ ನಿಯಮ ಅಭಿಯಾನದ ಆರನೇ ದಿನದಂದು ಮಾಸ್ಕ್ ಧರಿಸದ ಮತ್ತು ಸಾಮಾಜಿಕ ಅಂತರ (Social Distancing) ಕಾಯ್ದುಕೊಳ್ಳದ 9790 ಜನರಿಗೆ ದಂಡ ವಿಧಿಸಲಾಗಿದೆ.  ಅಲ್ಲದೆ ಇಲ್ಲಿವರೆಗೆ 29,71,950 ರೂ.ಗಳ ದಂಡ ಹಾಕಲಾಗಿದೆ. 


ಜನರು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಲಾಕ್ ಡೌನ್ (Lock down), ರಾತ್ರಿ ಕರ್ಫ್ಯೂಗಳನ್ನು ಹೇರುವ ಪ್ರಮೇಯ ಬರುವುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳುತ್ತಕಲೇ ಬಂದಿದೆ.


ಇದನ್ನೂ ಓದಿ : Kashi Vishwanath Temple Guidelines: ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಇದನ್ನೊಮ್ಮೆ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.