Kashi Vishwanath Temple Guidelines: ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಇದನ್ನೊಮ್ಮೆ ಓದಿ

ಸದ್ಯಕ್ಕೆ ವಾರಣಾಸಿಗೆ ಬರದಂತೆ ವಾರಣಾಸಿ ಪೊಲೀಸ್ ಆಯುಕ್ತ ದೀಪಕ್ ಅಗರ್‌ವಾಲ್ ಜನರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಜನರು ಯಾವುದೇ ಅಗತ್ಯ ಕೆಲಸವಿಲ್ಲದೆ ವಾರಣಾಸಿಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಕ್ಷೇಮವಾಗಿರುವಂತೆ ಅವರು ಜನತೆಯನ್ನು ಕೋರಿದ್ದಾರೆ.

Written by - Yashaswini V | Last Updated : Apr 14, 2021, 01:55 PM IST
  • ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಹೊಸ ನಿಯಮ
  • ವಾರಣಾಸಿಯಲ್ಲಿ ಮಾಸ್ಕ್ ಇಲ್ಲದೆ ಜನರು ಮನೆಯಿಂದ ಹೊರಬರದಂತೆ ಮನವಿ
  • ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ
Kashi Vishwanath Temple Guidelines: ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಮುನ್ನ ಇದನ್ನೊಮ್ಮೆ ಓದಿ title=
Coronavirus in Varanasi

Coronavirus in Varanasi: ಕರೋನಾವೈರಸ್ ಮಹಾಮಾರಿ ಇಡೀ ಜಗತ್ತಿಗೆ ಕಂಟಕವಾಗಿ ಕಾಡುತ್ತಿದೆ. ಭಾರತದಲ್ಲೂ ಕರೋನಾ ಹಾವಳಿ ಹೆಚ್ಚಾಗುತ್ತಿದ್ದು ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನಲೆಯಲ್ಲಿ ಹಲವು ಭಾಗಗಳಲ್ಲಿ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ವಾರಣಾಸಿಯಲ್ಲೂ ಕರೋನಾ ವೇಗವಾಗಿ ಹರಡುತ್ತಿದ್ದು ಏತನ್ಮಧ್ಯೆ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ. ಈಗ ವಿಶ್ವನಾಥನ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಾರಣಾಸಿ ಪೊಲೀಸ್ ಆಯುಕ್ತ ದೀಪಕ್ ಅಗರ್‌ವಾಲ್, ದೇಶಾದ್ಯಂತ ಕರೋನಾವೈರಸ್ (Coronavirus) ವೇಗವಾಗಿ ಹರಡುತ್ತಿದ್ದು ಸದ್ಯಕ್ಕೆ ಇತರ ಪ್ರದೇಶಗಳಿಂದ ಜನರು ವಾರಣಾಸಿಗೆ ಬರದಂತೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ಸುತ್ತಮುತ್ತಲಿನ ಜಿಲ್ಲೆಗಳ ಜನರು ಯಾವುದೇ ಅಗತ್ಯ ಕೆಲಸವಿಲ್ಲದೆ ವಾರಣಾಸಿಗೆ ಬರದೆ ತಮ್ಮ ತಮ್ಮ ಮನೆಗಳಲ್ಲಿಯೇ ಕ್ಷೇಮವಾಗಿರುವಂತೆ ಅವರು ಜನತೆಯನ್ನು ಕೋರಿದ್ದಾರೆ.

ಇದನ್ನೂ ಓದಿ - UP CM Yogi Adityanath ಕೊರೊನಾ ವರದಿ ಸಕಾರಾತ್ಮಕ, ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಯೋಗಿ

ಅದಾಗ್ಯೂ, ಕಾಶಿ ವಿಶ್ವನಾಥ ಹಾಗೂ ಮಾತೆ ಅನ್ನಪೂರ್ಣೆಯ ದರ್ಶನ ಪಡೆಯಲು ವಾರಣಾಸಿಗೆ ಭೇಟಿ ನೀಡುವ ಭಕ್ತಾದಿಗಳಿಗೆ 72 ಗಂಟೆಗಳ ಒಳಗೆ ಪಡೆದ ಕೋವಿಡ್ ನೆಗೆಟಿವ್ ಆರ್‌ಟಿಪಿಸಿಆರ್ (RT-PCR) ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಯಾರ ಬಳಿ ಕೋವಿಡ್ ನೆಗೆಟಿವ್ ವರದಿ ಇರುವುದಿಲ್ಲವೋ ಅವರನ್ನು ದೇವಾಲಯದ ಒಳಗೆ ಅನುಮತಿಸಲಾಗುವುದಿಲ್ಲ ಎಂದು ದೀಪಕ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.

ವಾರಣಾಸಿಯಲ್ಲಿ ಮಾಸ್ಕ್ ಇಲ್ಲದೆ ಜನರು ಮನೆಯಿಂದ ಹೊರಬರದಂತೆ ಮನವಿ ಮಾಡಿರುವ 
 ದೀಪಕ್ ಅಗರ್‌ವಾಲ್ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ - Coronavirus in India: ಇದುವರೆಗಿನ ಅತಿ ದೊಡ್ಡ ಕೊರೊನಾ ಅಟ್ಯಾಕ್, ಒಂದೇ ದಿನದಲ್ಲಿ 1 ಲಕ್ಷ 85 ಸಾವಿರ ಪ್ರಕರಣಗಳು ಪತ್ತೆ, 1025 ಜನರ ಸಾವು

ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಕರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಶೀತ, ಜ್ವರ, ಗಂಟಲು ನೋವು, ಉಸಿರಾಟದ ತೊಂದರೆ ಮುಂತಾದ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಕರೋನಾ ಟೆಸ್ಟ್ ಮಾಡಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News