ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ಘ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಈಗ ಚೀನಾ ಉತ್ಪನ್ನಗಳನ್ನು‌ ನಿಷೇಧಿಸಬೇಕೆಂಬ‌ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಚೀನಾ ಉತ್ಪನ್ನಗಳನ್ನು‌ ನಿಷೇಧಿಸಲು ತನ್ನದೇಯಾದ ರೀತಿಯಲ್ಲಿ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ. ಇದಲ್ಲದೆ ದೇಶದ ವ್ಯಾಪಾರಿಗಳ ಉನ್ನತ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಕೂಡ   ಚೀನಾದ ಸರಕುಗಳ ಬಹಿಷ್ಕಾರಿಸುವ (Boycott Chinese products)  ಅಭಿಯಾನಕ್ಕೆ ಕೈಜೋಡಿಸಿದೆ.


COMMERCIAL BREAK
SCROLL TO CONTINUE READING

ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ ಜೊತೆಗಿನ ಒಪ್ಪಂದಕ್ಕೆ ಭಾರತ ಸಹಿ‌‌ ಹಾಕಿರುವುದರಿಂದ ವಿನಾಕಾರಣ ಅಥವಾ ಬೆಲೆಗಳ ಕಾರಣ ಕೊಟ್ಟು ಯಾವುದೇ ದೇಶದ ಸರಕನ್ನು ನಿಷೇಧಿಸಲು ಸಾಧ್ಯವಿಲ್ಲ. ಇಂಥ ಒಡಂಬಡಿಕೆ ಇರುವ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಏನು ಮಾಡಬಹುದೆಂಬ‌‌ ಚರ್ಚೆ ಈಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ಶುರುವಾಗಿದೆ.


ಗಡಿಯಲ್ಲಿ ಇಂಡೋ-ಚೀನಾ ಉದ್ವಿಗ್ನತೆ ಮಧ್ಯೆ ಶೀಘ್ರವೇ ಮಿಲಿಟರಿ ಬಲ ಹೆಚ್ಚಿಸಲು ಮುಂದಾದ ಸರ್ಕಾರ


ಈಗಾಗಲೇ ಪ್ರಧಾನ ಮಂತ್ರಿಗಳ ಕಾರ್ಯಾಲಯ ಒಂದು‌ ಸುತ್ತು ಚರ್ಚೆ ನಡೆಸಿದೆ. ಸಭೆಯಲ್ಲಿ  ಚೀನಾ (China)ದಿಂದ ಆಮದು ಆಗುವ ವಸ್ತುಗಳನ್ನು ಕಡಿಮೆ ಮಾಡುವ ಬಗ್ಗೆ ಮತ್ತು ಆತ್ಮ ನಿರ್ಭರ ಭಾರತ್ ಯೋಜನೆಯನ್ನು ಪ್ರೋತ್ಸಾಹಿಸುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ತಿಳಿದುಬಂದಿದೆ.


ಚೀನಾದಿಂದ ಆಮದು ಕಡಿಮೆ ಮಾಡಿಕೊಳ್ಳಬೇಕಾದರೆ ಭಾರತದಲ್ಲಿ ಅಲ್ಲಿಗಿಂತ ಕಡಿಮೆ ಬೆಲೆಗೆ ಸಿಗುವಂತೆ ಉತ್ಪಾದನೆ ಮಾಡಬೇಕು. ಆದುದರಿಂದ ಸದ್ಯ ಚೀನಾದಿಂದ ಆಮದಾಗುತ್ತಿರುವ ಉತ್ಪನ್ನಗಳು ಯಾವ್ಯಾವು? ಅವುಗಳ ಪೈಕಿ ಯಾವ್ಯಾವ ಪದಾರ್ಥಕ್ಕೆ ಎಷ್ಟೆಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ? ತೆರಿಗೆ ಅನುಕೂಲ ಪಡೆದುಕೊಳ್ಳುತ್ತಿವ ಉತ್ಪನ್ನಗಳು ಯಾವ್ಯಾವು? ದೇಶಿಯ ಬೆಲೆಗಳಿಗಿಂತ ಕಡಿಮೆ ದರದಲ್ಲಿ ಸಿಗುತ್ತಿರುವ ಚೀನಾ ಉತ್ಪನ್ನಗಳು ಯಾವ್ಯಾವು? ಎಂಬ ಪಟ್ಟಿ ಸಿದ್ದಪಡಿಸಲು ಮುಂದಾಗಿದೆ. 


ಚೀನಾಕ್ಕೆ ಪಾಠ ಕಲಿಸಲು ವಿಚಕ್ಷಣ ವಿಮಾನಗಳ ನಿಯೋಜನೆ ಹೆಚ್ಚಿಸಿದ ಭಾರತ

ಭಾರತ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರಯವ ಪೈಕಿ ಶೇಕಡಾ 14ರಷ್ಟು ಚೀನಾದಿಂದಲೇ ಆಗಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಸಾಧನಗಳು, ಶೃಂಗಾರ ಸಾಧನಗಳು, ಗಾಜಿನ‌ ಸಾಮಾಗ್ರಿಗಳು, ಪ್ಲಾಸ್ಟಿಕ್ ಉತ್ಪನ್ನಗಳು, ಔಷಧೀಯ ಪದಾರ್ಥಗಳು ಪ್ರಮುಖವಾದವು. ಈ ಪೈಕಿ ಕೆಲವುಗಳ ಕಚ್ಚಾ ಪದಾರ್ಥಗಳ ಮೇಲೂ ಭಾರತ ಅವಲಂಭಿತವಾಗಿದೆ.


ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ‌ ಚೀನಾ ದೇಶದಿಂದ ಭಾರತ 62.4 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಚೀನಾಕ್ಕೆ ಭಾರತ ರಫ್ತು ಮಾಡಿರುವುದು 15.5 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸರಕುಗಳನ್ನು ಮಾತ್ರ. ಈ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ 'ಮೇಕ್ ಇನ್ ಇಂಡಿಯಾ' (Make in India) ಧ್ಯೇಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.