ನವದೆಹಲಿ: ಬ್ರಿಟನ್ ರಾಣಿ ಎಲಿಜಬೆತ್-2 ಅವರ ನಿಧನಕ್ಕೆ ಬ್ರಿಟನ್‌ನಲ್ಲಿ ಶೋಕದ ಅಲೆ ಇದೆ. ವಿಶ್ವದ ಹಲವು ರಾಷ್ಟ್ರಗಳ ನಾಯಕರು ಟ್ವೀಟ್ ಮಾಡುವ ಮೂಲಕ ರಾಣಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಸುಮಾರು 7 ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ 2ನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೆ ದೇಶವನ್ನು ಆಳಿದ ವಿಶ್ವ ದಾಖಲೆ ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ಸ್ಪೂರ್ತಿದಾಯಕ ನಾಯಕತ್ವ  


ಪ್ರಧಾನಿ ಮೋದಿ, ‘2015 ಮತ್ತು 2018ರಲ್ಲಿ ನಾನು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಣಿ ಎಲಿಜಬೆತ್ II ಅವರೊಂದಿಗೆ ಸ್ಮರಣೀಯ ಭೇಟಿಗಳನ್ನು ನಡೆಸಿದ್ದೆ. ಅವರ ನಡತೆ ಮತ್ತು ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಯಲ್ಲಿ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದರು. ಅವರ ಈ ರೀತಿಯ ಸರಳತೆಯನ್ನು ನಾನು ಎಂದಿಗೂ ಮರೆಯಲಾರೆ’ ಎಂದು ನೆನೆದಿದ್ದಾರೆ.  


ಇದನ್ನೂ ಓದಿ: Breaking News : ಬ್ರಿಟನ್ ರಾಣಿ ಎಲಿಜಬೆತ್ II ಇನ್ನಿಲ್ಲ


ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ


ಇಂಡಿಯಾ ಗೇಟ್‌ನಲ್ಲಿ ನೇತಾಜಿ ಪ್ರತಿಮೆ ಉದ್ಘಾಟಿಸಿದ ಪಿಎಂ ಮೋದಿ 


2018ರಲ್ಲಿ 2ನೇ ಬಾರಿ ಬ್ರಿಟನ್‍ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ


ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ 2ನೇ ಬಾರಿಗೆ ಬ್ರಿಟನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಅರಮನೆಯಲ್ಲಿ ಬ್ರಿಟಿಷ್ ರಾಣಿಯನ್ನು ಭೇಟಿಯಾಗಿದ್ದರು. ಈ ಸಭೆಯಲ್ಲಿ ರಾಣಿ II ಎಲಿಜಬೆತ್ ಪ್ರಧಾನಿ ಮೋದಿಯವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು. ಮಹಾತ್ಮ ಗಾಂಧಿಯವರು ತಮ್ಮ ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ಕಳುಹಿಸಿದ್ದ ಕರವಸ್ತ್ರವನ್ನು ಅವರಿಗೆ ತೋರಿಸಿದರು. ಬ್ರಿಟಿಷ್ ರಾಣಿ ಭಾರತದ ವೈವಿಧ್ಯತೆ ಮತ್ತು ಆತಿಥ್ಯದ ಅಭ್ಯಾಸದ ಬಗ್ಗೆ ವಿಸ್ಮಯಗೊಂಡರು. ಭಾರತೀಯ ಉದ್ಯಮಿಗಳೊಂದಿಗಿನ ಸಭೆಯಲ್ಲೂ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.