ನವದೆಹಲಿ: ಹವಾಮಾನ ಬದಲಾವಣೆಯಿಂದ ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ವಿಪತ್ತುಗಳು ಕಂಡುಬರುತ್ತಿವೆ. ಬಿಸಿಲಿನ ತಾಪದಿಂದ ಕೆಲವೆಡೆ ಬರಗಾಲದ ವಾತಾವರಣವಿದ್ದು, ಕೆಲವೆಡೆ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಪಾರ ಪ್ರಮಾಣದ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟವಾಗಿದೆ. ವಿಪತ್ತುಗಳ ಹೊಡೆತದ ನಡುವೆ ನಾಯಕರೊಬ್ಬ 'ವಿನಾಶದ ಭವಿಷ್ಯ' ನುಡಿದಿದ್ದಾನೆ.
ಹೌದು, ಕಾಂಬೋಡಿಯಾದ ನಾಯಕನೊಬ್ಬನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವರದಿಯ ಪ್ರಕಾರ ಕಾಂಬೋಡಿಯಾದ ನಾಯಕ ಖೇಮ್ ವಿಸಾನಾ ಹಂಚಿಕೊಂಡಿರುವ ಪೋಸ್ಟ್ ಸಾಕಷ್ಟು ಸಂಚಲನ ಸೃ ಷ್ಟಿಸಿದೆ. ಇದರಲ್ಲಿ ಜಗತ್ತಿನಾದ್ಯಂತ ಭೀಕರ ಪ್ರವಾಹ ಉಂಟಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಬೆಟ್ಟ ಮತ್ತು ಎತ್ತರ ಪ್ರದೇಶಗಳಲ್ಲಿ ಆಶ್ರಯ ಪಡೆಯುವ ಜನರು ಮಾತ್ರ ಈ ಪ್ರವಾಹದಿಂದ ಪಾರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Earthquake : 6.8 ತೀವ್ರತೆಯ ಭೂಕಂಪ, 46 ಜನರ ದುರ್ಮರಣ
ಜನರಲ್ಲಿ ಗೊಂದಲ ಮೂಡಿಸಿದ ಪೋಸ್ಟ್
ಡೆಮಾಕ್ರಸಿ ಪಾರ್ಟಿ (ಎಲ್‌ಡಿಪಿ) ಅಧ್ಯಕ್ಷ ಖೇಮ್ ವಿಸಾನಾ ಮಾಡಿದ ಈ ಪೋಸ್ಟ್ ವೈರಲ್ ಆಗಿದೆ. ಇದರ ನಂತರ ಅವರ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಕುಲೆನ್ ಪರ್ವತದಲ್ಲಿರುವ ಅವರ ಫಾರ್ಮ್ ಹೌಸ್‌ನಲ್ಲಿ ಸೇರಲು ಪ್ರಾರಂಭಿಸಿದರು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಸೀಮ್ ರೀಪ್ ಪ್ರಾಂತ್ಯದಲ್ಲಿ ಸುಮಾರು 30 ಸಾವಿರ ಜನರು ಖೇಮ್ ಅವರು ಹೇಳಿದ ಸ್ಥಳಕ್ಕೆ ತಲುಪಿದರು. ಇದರಿಂದ ಇಡೀ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕ್ರಮೇಣ ಬೇರೆ ದೇಶಗಳ ಜನರೂ ಅಲ್ಲಿ ಸೇರತೊಡಗಿದರು. ಖೇಮ್ ವಿಸಾನಾ ತಮ್ಮ ಕ್ಷೇತ್ರಗಳಲ್ಲಿರುವ ಜನರ ಗುಂಪಿನ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಸ್ವತಃ ಬ್ರಹ್ಮ!
ಖೇಮ್ ವಿಸಾನಾ ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಚರ್ಚೆಗೆ ಕಾರಣರಾಗಿದ್ದರು. ಅವರು ನಿರಂತರವಾಗಿ ಹೀಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೇ ಆಗಸ್ಟ್ 26ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು ತಮ್ಮನ್ನು ಭಗವಂತ 'ಬ್ರಹ್ಮ' ಎಂದು ಬಣ್ಣಿಸಿಕೊಂಡಿದ್ದರು. ‘ಅತ್ಯಂತ ವಿನಾಶಕಾರಿ ಪ್ರವಾಹ'ಕ್ಕೆ ಇಡೀ ಜಗತ್ತು ಸಿದ್ಧವಾಗಬೇಕಾಗಿದೆ. ಈ ಪ್ರವಾಹಕ್ಕೆ ಇಡೀ ಜಗತ್ತೇ ವಿನಾಶಕ್ಕೆ ತುತ್ತಾಗುತ್ತದೆ. ಆದರೆ ನನ್ನ ಜಮೀನು ಮಾತ್ರ ಉಳಿಯುತ್ತದೆ. ಹೀಗಾಗಿ ಇದರಿಂದ ತಪ್ಪಿಸಿಕೊಳ್ಳಲು ಬಯಸುವವರು ಇಲ್ಲಿಗೆ ಬನ್ನಿ’ ಅಂತಾ ಹೇಳಿದ್ದ.
ಇದನ್ನೂ ಓದಿ: Viral Video: ಲೈವ್ ನ್ಯೂಸ್ ಓದುತ್ತಿರುವಾಗಲೇ ನೊಣ ನುಂಗಿದ ನಿರೂಪಕಿ: ಮುಂದೇನಾಯ್ತು?
ಪ್ರಧಾನಿ ಮಧ್ಯಸ್ಥಿಕೆ
ಈ ವದಂತಿಯ ನಂತರ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಮಧ್ಯಪ್ರವೇಶಿಸಿ ಜನರಿಗೆ ಧೈರ್ಯ ತುಂಬಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಪ್ರಧಾನಿ ಸೂಚನೆ ನೀಡಿದ್ದಾರೆ. ಇದು ಪ್ರತಿಪಕ್ಷಗಳ ರಾಜಕೀಯ ಸ್ಟಂಟ್ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಖೇಮ್ ವಿಸಾನಾ ಅವರು ಪ್ರವಾಹದ ಹಳೆಯ ವಿಡಿಯೋಗಳನ್ನು ವೈರಲ್ ಮಾಡುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಕ್ರಮದ ಎಚ್ಚರಿಕೆ ಸಹ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.