ಲಂಡನ್ : ಬ್ರಿಟನ್ ರಾಣಿ ಎಲಿಜಬೆತ್ II ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಬಕಿಂಗ್ ಹ್ಯಾಮ್ ಅರಮನೆ ಮಾಹಿತಿ ನೀಡಿದೆ.
ಸಧ್ಯ ರಾಣಿ ಎಲಿಜಬೆತ್ II ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ, ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಣಿ ತನ್ನ ಪ್ರಿವಿ ಕೌನ್ಸಿಲ್ ಸಭೆಯನ್ನು ರದ್ದುಗೊಳಿಸಿದ್ದಾರೆ ಮತ್ತು ವಿಶ್ರಾಂತಿ ಪಡೆಯಲು ಕೇಳಿಕೊಂಡಿದ್ದಾರೆ. ರಾಣಿ ಎಲಿಜಬೆತ್ II ಮಂಗಳವಾರ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಬ್ರಿಟನ್ನ ಹೊಸ ಪ್ರಧಾನಿಯಾಗಿ ಔಪಚಾರಿಕವಾಗಿ ನೇಮಕ ಮಾಡಿದ್ದಾರೆ.
United Kingdom | Following further evaluation this morning, Queen Elizabeth's doctors are concerned about her health & have recommended she remain under medical supervision. She remains comfortable at Balmoral: Buckingham Palace
(File Pic) pic.twitter.com/CiVnwhhDHb
— ANI (@ANI) September 8, 2022
ಇದನ್ನೂ ಓದಿ : ವಿನಾಶದ ಭವಿಷ್ಯ: ‘ವಿಶ್ವದಲ್ಲಿ ಹತ್ಯಾಕಾಂಡ ಸಂಭವಿಸುತ್ತದೆ; ಈ ಸ್ಥಳ ಮಾತ್ರ ಉಳಿಯುತ್ತದೆ’!
ಲಿಜ್ ಟ್ರಸ್ ಅವರು 96 ವರ್ಷದ ರಾಣಿಯನ್ನು ಭೇಟಿಯಾಗಲು ಸ್ಕಾಟ್ಲೆಂಡ್ನ ಅಬರ್ಡೀನ್ಶೈರ್ನಲ್ಲಿರುವ ಬಾಲ್ಮೋರಲ್ ಕ್ಯಾಸಲ್ ನಿವಾಸಕ್ಕೆ ಆಗಮಿಸಿದ್ದರು. ರಾಣಿ ಬಾಲ್ಮೋರಲ್ನಲ್ಲಿದ್ದು ಮತ್ತು ಅವರ ಮಗ ಪ್ರಿನ್ಸ್ ಚಾರ್ಲ್ಸ್ ಮತ್ತು ಮೊಮ್ಮಗ ಪ್ರಿನ್ಸ್ ವಿಲಿಯಂ ಅಲ್ಲಿಗೆ ತೆರಳಿದ್ದಾರೆ ಎಂದು ಅರಮನೆ ಮಾಹಿತಿ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.