Rahul Gandhi Slip Of Tongue:  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್‌ನ ಹಲ್ಲಾಬೋಲ್ ರ‍್ಯಾಲಿ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಲು, ಮೈದಾ, ಗ್ಯಾಸ್ ಸಿಲಿಂಡರ್, ಸಾಸಿವೆ ಎಣ್ಣೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಲವು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ನಾಲಿಗೆ ಜಾರಿದ್ದು, ರಾಹುಲ್ ತೀವ್ರವಾದ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ವಾಸ್ತವದಲ್ಲಿ ರಾಹುಲ್ ಗಾಂಧಿ ಕೆಲವು ವರ್ಷಗಳ ಹಿಂದಿನ ಹಿಟ್ಟಿನ ಬೆಲೆ ಮತ್ತು ಇಂದಿನ ಬೆಲೆಯ ಹೋಲಿಕೆಯನ್ನು ಮಾಡುತ್ತಿದ್ದರು. ಈ ಹೋಲಿಕೆ ಮಾಡುವಾಗ ಅವರು ಕಿಲೋಗಳ ಬದಲಿಗೆ ಲೀಟರ್ಗಳನ್ನು ಬಳಸಿದ್ದಾರೆ. ಈ ಹಿಂದೆ 22 ರೂ.ಗೆ ದೊರೆಯುತ್ತಿದ್ದ ಲೀಟರ್ ಹಿಟ್ಟು ಇಂದು ಲೀಟರ್ ಗೆ 40 ರೂ.ರಂತೆ ಮಾರಾಟವಾಗುತ್ತಿದೆ ಎಂದರು. ಅಷ್ಟರಲ್ಲೇ ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಆಗಿದ್ದಾರೆ.


ಇದನ್ನೂ ಓದಿ-Trending: ತಂದೆಯ ಐದನೇ ಮದುವೆ ನಿಲ್ಲಿಸಲು ಮದುವೆ ಮಂಟಪಕ್ಕೆ ನುಗ್ಗಿದ ಏಳು ಮಕ್ಕಳು: ಮುಂದೇನಾಯ್ತು…


ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ಬಿಜೆಪಿ ನಾಯಕರು ಕೂಡ ಈ ಪೋಸ್ಟ್ ಮೂಲಕ ರಾಹುಲ್ ಗಾಂಧಿಯನ್ನು ಸುತ್ತುವರಿಯಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಭಾಷಣದ ವೇಳೆ ರಾಹುಲ್ ಗಾಂಧಿ ನಾಲಿಗೆ ಜಾರಿದ್ದು, ಅವರು ಬೈ ಮಿಸ್ಟೇಕ್ ಕಿಲೋಗಳ ಬದಲಿಗೆ ಲೀಟರ್ ಗಳು ಎಂಬ ಪದಗಳನ್ನು ಬಳಸಿದ್ದಾರೆ. ಬಳಿಕ ಅದರ ಸಂಪೂರ್ಣ ವಿಡಿಯೋ ಕೂಡ ಹೊರಬಿದ್ದಿದ್ದು, ಅದರಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. ಆದರೆ, ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ರಾಹುಲ್ ಗಾಂಧಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.


ಇದನ್ನೂ ಓದಿ-Indian Railways: ರೈಲು ತಡವಾದ್ರೆ IRCTCಯಿಂದ ನಿಮಗೆ ಸಿಗುತ್ತೆ ಈ ಉಚಿತ ಸೌಲಭ್ಯ


ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಣದುಬ್ಬರದ ವಿರುದ್ಧ ಕಾಂಗ್ರೆಸ್ 'ಹಲ್ಲಾಬೋಲ್ ರ‍್ಯಾಲಿ' ನಡೆಸಿದೆ.ಈ ಸಂದರ್ಭದಲ್ಲಿ ಬಹುತೇಕ ಎಲ್ಲ ಹಿರಿಯ ಕಾಂಗ್ರೆಸ್ ಮುಖಂಡರು ರಾಮಲೀಲಾ ಮೈದಾನಕ್ಕೆ ಆಗಮಿಸಿದ್ದರು. ಈ ರ‍್ಯಾಲಿಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಪಕ್ಷದ ಪ್ರಮುಖ ಮುಖವನ್ನಾಗಿ ಬಿಂಬಿಸಲಾಗಿದೆ. ಈ ವೇಳೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.