Indian Railways: ರೈಲು ತಡವಾದ್ರೆ IRCTCಯಿಂದ ನಿಮಗೆ ಸಿಗುತ್ತೆ ಈ ಉಚಿತ ಸೌಲಭ್ಯ

ರೈಲು ತಡವಾದರೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕೆಲವು ಸೇವೆಗಳನ್ನು ಉಚಿತವಾಗಿ ನೀಡುತ್ತದೆ.

Written by - Puttaraj K Alur | Last Updated : Sep 4, 2022, 08:30 AM IST
  • ರೈಲು ತಡವಾದರೆ ಪ್ರಯಾಣಿಕರಿಗೆ IRCTCಯಿಂದ ಸಿಗುತ್ತೆ ಈ ಉಚಿತ ಸೌಲಭ್ಯ
  • ರೈಲು 2 ಗಂಟೆ ತಡವಾದರೆ ನಿಮಗೆ ಸಿಗುತ್ತೆ ಉಚಿತ ಆಹಾರ ಮತ್ತು ಪಾನೀಯ
  • ಶತಾಬ್ದಿ, ರಾಜಧಾನಿ & ತುರಂತೋ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಸೌಲಭ್ಯ
Indian Railways: ರೈಲು ತಡವಾದ್ರೆ IRCTCಯಿಂದ ನಿಮಗೆ ಸಿಗುತ್ತೆ ಈ ಉಚಿತ ಸೌಲಭ್ಯ   title=
IRCTCಯಿಂದ ಸಿಗುತ್ತೆ ಈ ಉಚಿತ ಸೌಲಭ್ಯ

ನವದೆಹಲಿ: ಅನೇಕ ಬಾರಿ ಪ್ರಯಾಣದ ವೇಳೆ ರೈಲು ವಿಳಂಬದಿಂದ ನಿಮಗೆ ತೊಂದರೆಯಾಗಿರುತ್ತದೆ. ಭವಿಷ್ಯದಲ್ಲಿಯೂ ಇದೇ ರೀತಿ ರೈಲು ತಡವಾದರೆ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಪ್ರಯಾಣದ ವೇಳೆ ರೈಲು ತಡವಾದರೆ ನೀವು IRCTCಯಿಂದ ಕೆಲವು ಸೌಲಭ್ಯ ಪಡೆದುಕೊಳ್ಳಲು ಹಕ್ಕಿದೆ. ಇದರ ಬಗ್ಗೆ ಇಂದು ನಾವು ನಿಮಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದೇವೆ.

ರೈಲು ತಡವಾದ್ರೆ IRCTC ಉಚಿತ ಆಹಾರ ನೀಡುತ್ತದೆ

ಹೌದು, ರೈಲು ತಡವಾದರೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕೆಲವು ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ನಿಮ್ಮ ರೈಲು ನಿಗದಿತ ಸಮಯಕ್ಕಿಂತ ತಡವಾದರೆ IRCTC ನಿಮಗೆ ಆಹಾರ ಮತ್ತು ತಂಪು ಪಾನೀಯವನ್ನು ನೀಡುತ್ತದೆ . IRCTCಯಿಂದ ಈ ಆಹಾರವನ್ನು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಆಹಾರ ಮತ್ತು ತಂಪು ಪಾನೀಯ ಪಡೆಯಲು ನೀವು ಯಾವುದೇ ರೀತಿ ಹಿಂಜರಿಯುವ ಅಗತ್ಯವಿಲ್ಲ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ 63,200 ವರೆಗೆ ವೇತನ

IRCTCಯೇ ನೀಡುವ ಈ ಸೌಲಭ್ಯವನ್ನು ಪಡೆದುಕೊಳ್ಳುವುದು ನಿಮ್ಮ ಹಕ್ಕಾಗಿರುತ್ತದೆ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ರೈಲು ತಡವಾಗಿ ಬಂದಾಗ ಪ್ರಯಾಣಿಕರಿಗೆ IRCTCಯ ಅಡುಗೆ ನೀತಿಯಡಿ ಉಪಹಾರ ಮತ್ತು ಲಘು ಊಟವನ್ನು ನೀಡಲಾಗುತ್ತದೆ.  

ಈ ಸೌಲಭ್ಯ ಯಾವಾಗ ದೊರೆಯುತ್ತದೆ?

IRCTC ನಿಯಮಗಳ ಪ್ರಕಾರ, ರೈಲು ತಡವಾದರೆ ಪ್ರಯಾಣಿಕರಿಗೆ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ರೈಲು 30 ನಿಮಿಷ ತಡವಾದರೆ ನಿಮಗೆ ಊಟದ ಸೌಲಭ್ಯ ಸಿಗುವುದಿಲ್ಲ. ಅಡುಗೆ ನೀತಿಯಡಿ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾಗಿದ್ದರೆ ಶತಾಬ್ದಿ, ರಾಜಧಾನಿ ಮತ್ತು ತುರಂತೋ ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!

ಈ ಸೌಲಭ್ಯಗಳನ್ನು IRCTC ಒದಗಿಸುತ್ತದೆ

IRCTC ನೀತಿಯ ಪ್ರಕಾರ, ಉಪಾಹಾರದಲ್ಲಿ ಚಹಾ ಅಥವಾ ಕಾಫಿ ಮತ್ತು 2 ಬಿಸ್ಕತ್ತುಗಳನ್ನು ನೀಡಲಾಗುತ್ತದೆ. ಸಂಜೆಯ ತಿಂಡಿಯಲ್ಲಿ ಚಹಾ ಅಥವಾ ಕಾಫಿ ಮತ್ತು 4 ಬ್ರೆಡ್ ಸ್ಲೈಸ್‌ಗಳು ಮತ್ತು ಬಟರ್ ನೀಡಲಾಗುತ್ತದೆ. IRCTC ಯಿಂದ ಪ್ರಯಾಣಿಕರಿಗೆ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ಅನ್ನ, ಉದ್ದಿನಬೇಳೆ ಸಾರು ಮತ್ತು ಉಪ್ಪಿನಕಾಯಿ ಪ್ಯಾಕೆಟ್‌ಗಳನ್ನು ನೀಡಲಾಗುತ್ತದೆ. ಅಥವಾ 7 ಪೂರಿಗಳು, ಮಿಕ್ಸ್ ವೆಜ್/ಆಲೂ ಭಜಿ, ಉಪ್ಪಿನಕಾಯಿ ಪ್ಯಾಕೆಟ್ ಮತ್ತು ತಲಾ 1 ಪ್ಯಾಕೆಟ್ ಉಪ್ಪು ಮತ್ತು Pepper ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News