Trending: ತಂದೆಯ ಐದನೇ ಮದುವೆ ನಿಲ್ಲಿಸಲು ಮದುವೆ ಮಂಟಪಕ್ಕೆ ನುಗ್ಗಿದ ಏಳು ಮಕ್ಕಳು: ಮುಂದೇನಾಯ್ತು…

ಈ ಮದುವೆಯಾಗಲು ಮುಂದಾಗಿರುವುದು 55 ವರ್ಷದ ಶಫಿ ಅಹ್ಮದ್ ಎಂಬಾತ. ಈತನ ಮದುವೆ ಘಟನೆಯಿಂದ ಕುಪಿತಗೊಂಡ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ. ವಾಸ್ತವವಾಗಿ ವಿಷಯವು ವ್ಯಕ್ತಿಯ ಐದನೇ ಮದುವೆಗೆ ಸಂಬಂಧಿಸಿದೆ.

Written by - Bhavishya Shetty | Last Updated : Sep 4, 2022, 11:04 AM IST
    • ಐದನೇ ಮದುವೆಯಾಗಲು ಮುಂದಾದ ವ್ಯಕ್ತಿಗೆ ಗೂಸಾ
    • ಮದುವೆ ಮಂಟಪಕ್ಕೆ ನುಗ್ಗಿದ ನಾಲ್ವರು ಪತ್ನಿಯರು ಮತ್ತು ಏಳು ಮಕ್ಕಳು
    • ಸತ್ಯಾಂಶ ತಿಳಿದ ಬಳಿಕ ವರನಿಗೆ ಥಳಿಸಿದ ಕುಟುಂಬಸ್ಥರು
Trending: ತಂದೆಯ ಐದನೇ ಮದುವೆ ನಿಲ್ಲಿಸಲು ಮದುವೆ ಮಂಟಪಕ್ಕೆ ನುಗ್ಗಿದ ಏಳು ಮಕ್ಕಳು: ಮುಂದೇನಾಯ್ತು… title=
Relationship

Cheating In Marriage: ಕೆಲವೊಂದು ವಿಚಿತ್ರವಾದ ಘಟನೆಗಳ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇದೇ ರೀತಿಯ ಸುದ್ದಿಯೊಂದು ಜನರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ ಒಬ್ಬ ವ್ಯಕ್ತಿ ಒಬ್ಬರಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಹೆಂಡತಿಯರನ್ನು ಹೊಂದಿದ್ದರೂ ಐದನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಈ ಮದುವೆ ನಡೆಯುವ ಸಂದರ್ಭದಲ್ಲಿ ನಡೆದಿದ್ದೇ ಬೇರೆ. ಈ ಬಗ್ಗೆ ಮುಂದೆ ತಿಳಿದುಕೊಳ್ಳೋಣ.

ಮದುವೆಯಾಗಲು ಮುಂದಾಗಿರುವುದು 55 ವರ್ಷದ ಶಫಿ ಅಹ್ಮದ್ ಎಂಬಾತ. ಈತನ ಮದುವೆ ಘಟನೆಯಿಂದ ಕುಪಿತಗೊಂಡ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ. ವಾಸ್ತವವಾಗಿ ವಿಷಯವು ವ್ಯಕ್ತಿಯ ಐದನೇ ಮದುವೆಗೆ ಸಂಬಂಧಿಸಿದೆ. 

ಇದನ್ನೂ ಓದಿ: Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!

ಏನಿದು ಘಟನೆ:

ಇಂತಹ ಕೃತ್ಯ ಕಂಡ ಯಾರಿಗಾದರೂ ಸಿಟ್ಟು ಬರುವುದು ಖಂಡಿತ. ಶಫಿ ಅಹಮದ್ ನ ಮದುವೆ ನಿಲ್ಲಿಸಲು ಆತನ ನಾಲ್ವರು ಪತ್ನಿಯರು ತಮ್ಮ 7 ಮಕ್ಕಳೊಂದಿಗೆ ಮದುವೆ ನಡೆಯಲಿರುವ ಸ್ಥಳಕ್ಕೆ ತೆರಳಿದ್ದಾರೆ. ಇವರೆಲ್ಲ ವಧುವಿಗೆ ಸತ್ಯ ಹೇಳಿದ ತಕ್ಷಣ ಎರಡು ಕುಟುಂಬಗಳ ನಡುವೆ ಕದನ ಜಗಳ ನಡೆದಿದೆ. ಈ ವಾದ ವಿವಾದ ವಿಕೋಪಕ್ಕೆ ತಿರುಗಿದ್ದು, ಮಾತಿನ ಚಕಮಕಿ ನಡೆದಿದ್ದು ಮಾತ್ರವಲ್ಲ ವರನಿಗೆ ತೀವ್ರವಾಗಿ ಥಳಿಸಿದ್ದಾರೆ. 

ಇದನ್ನೂ ಓದಿ:KGF ಸಿನಿಮಾದಿಂದ ಪ್ರೇರಣೆ: ನಾಲ್ವರು ಸೆಕ್ಯುರಿಟಿ ಸಿಬ್ಬಂದಿಯನ್ನು ಹತ್ಯೆಗೈದ ಹದಿಹರೆಯದ ಯುವಕ!

ಗಲಾಟೆ ನಡೆದ ಬಳಿಕ ಶಫಿ ಸ್ಥಳದಿಂದ ಓಡಿಹೋಗಿದ್ದಾನೆ. ಈ ಇಡೀ ಘಟನೆಯ ಬಗ್ಗೆ ವರನ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, ತಂದೆ ಮಕ್ಕಳಿಗೆ ತಿಂಗಳ ಖರ್ಚನ್ನೂ ನೀಡುವುದನ್ನು ನಿಲ್ಲಿಸಿದ್ದನಂತೆ. ಆದ್ದರಿಂದ, ಐದನೇ ಮದುವೆಯ ವಿಷಯ ತಿಳಿದ ತಕ್ಷಣ, ಎಲ್ಲರೂ ಕೋಪಗೊಂಡು ವಿವಾಹ ತಡೆಯಲು ಮುಂದಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News