ಕೃಷಿ ಕಾನೂನಿನ ವಿರುದ್ಧ ಪಂಜಾಬ್‌ನಲ್ಲಿ ಇಂದು ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ
ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ರೈತರ ಪರವಾಗಿ ಹೋರಾಟ ನಡೆಸುತ್ತಿದೆ.
ಚಂಡೀಗಢ: ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನು (Agricultural Law)ಗಳ ವಿರುದ್ಧ ಕಾಂಗ್ರೆಸ್ ಕಹಳೆ ಊದಿದೆ. ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಇಂದು ಪಂಜಾಬ್‌ನಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ.
ಮೊಗಾದಿಂದ ಪ್ರಾರಂಭವಾಗಲಿರುವ ರ್ಯಾಲಿ :
ಇಂದು ನಡೆಯಲಿರುವ ಕಾಂಗ್ರೆಸ್ ಟ್ರ್ಯಾಕ್ಟರ್ ರ್ಯಾಲಿ ಪಂಜಾಬ್‌ನ ಮೊಗಾದಿಂದ ಪ್ರಾರಂಭವಾಗಲಿದೆ. ಈ ರ್ಯಾಲಿಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ (Congress) ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸಿದೆ. ಈ ರ್ಯಾಲಿಯಲ್ಲಿ ಸುಮಾರು ಐದು ಸಾವಿರ ಟ್ರಾಕ್ಟರುಗಳು ಭಾಗಿಯಾಗಲಿವೆ.
ಹಥ್ರಾಸ್ ಪ್ರತಿಭಟನೆ ವಿಚಾರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು
ಇದರೊಂದಿಗೆ ಕಾಂಗ್ರೆಸ್ ಸಚಿವರು, ಶಾಸಕರು ಮತ್ತು ಎಲ್ಲಾ ಪ್ರಮುಖ ರೈತ ನಾಯಕರು ರ್ಯಾಲಿಯಲ್ಲಿ ಹಾಜರಾಗುವಂತೆ ಕೋರಲಾಗಿದೆ. ಮೊಗಾದಿಂದ ಪ್ರಾರಂಭವಾಗುವ ಈ ರ್ಯಾಲಿ ಹರಿಯಾಣದ ಮೂಲಕ ಸಾಗಿ ದೆಹಲಿಯಲ್ಲಿ ಕೊನೆಗೊಳ್ಳಲಿದೆ.
ಅಕ್ಟೋಬರ್ 3 ರಿಂದ ಪ್ರಾರಂಭವಾಗಿರುವ ರ್ಯಾಲಿಗಳು :
ಅಕ್ಟೋಬರ್ 3 ರಿಂದ ರ್ಯಾಲಿಗಳು ಪ್ರಾರಂಭವಾಗಿವೆ ಎಂದು ಪಂಜಾಬ್ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಈ ರ್ಯಾಲಿಗಳು ಅಕ್ಟೋಬರ್ 5 ರವರೆಗೆ ನಡೆಯಲಿವೆ. ಇಂದು ನಡೆಯಲಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕ ಸಭೆಗಾಗಿ ರಾಹುಲ್ ಗಾಂಧಿ ಕಾರಿನಲ್ಲಿ ಭವಾನಿಗಢ ತಲುಪಲಿದ್ದಾರೆ. ನಂತರ ಅವರು ಪಟಿಯಾಲಾದ ಸಮನಾಗೆ ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹಥ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೆಲಕ್ಕೆ ತಳ್ಳಿದ ಪೊಲೀಸರು
ರ್ಯಾಲಿಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಮತ್ತು ಪಂಜಾಬ್‌ನ ಸಂಪೂರ್ಣ ಆಡಳಿತವು ಕಣಕ್ಕಿಳಿದಿದೆ. ಭದ್ರತೆಗಾಗಿ ರಾಜ್ಯಾದ್ಯಂತ 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟ್ರ್ಯಾಕ್ಟರ್ ರ್ಯಾಲಿಯ ಸ್ಟಾಕ್ ತೆಗೆದುಕೊಳ್ಳಲು ಡಿಜಿಪಿ ದಿನಕರ್ ಗುಪ್ತಾ ಸ್ವತಃ ಮೊಗಾದ ಬಾದಿಕಲನ್ ತಲುಪಿದರು. ಅವರೊಂದಿಗೆ ಸುಮಾರು 15 ಜಿಲ್ಲೆಗಳ ಎಸ್‌ಎಸ್‌ಪಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಇದ್ದರು.
ಇನ್ನು ಅಕ್ಟೋಬರ್ 5 ರಂದು ಅಂದರೆ ನಾಳೆ ಧುಡಾನ್ ಮೀನ್ಸ್ (ಪಟಿಯಾಲ) ದ ರ್ಯಾಲಿಯು ಸಾರ್ವಜನಿಕ ಸಭೆಯೊಂದಿಗೆ ಪ್ರಾರಂಭವಾಗಲಿದ್ದು ಟ್ರಾಕ್ಟರ್ ಮೂಲಕ ಪಿಹೋವಾ ಗಡಿಗೆ 10 ಕಿಲೋಮೀಟರ್ ದೂರದಲ್ಲಿ ರಾಹುಲ್ ಗಾಂಧಿ ಹರಿಯಾಣದಲ್ಲಿ ಈ ರ್ಯಾಲಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.