ಹಥ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೆಲಕ್ಕೆ ತಳ್ಳಿದ ಪೊಲೀಸರು

ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇಂದು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಹತ್ರಾಸ್‌ಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು.

Last Updated : Oct 1, 2020, 05:13 PM IST
ಹಥ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೆಲಕ್ಕೆ ತಳ್ಳಿದ ಪೊಲೀಸರು

ನವದೆಹಲಿ: ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇಂದು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಹತ್ರಾಸ್‌ಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಯಿತು.

ಉತ್ತರಪ್ರದೇಶದ ಪೊಲೀಸರ ರಾತ್ರಿಯ ಅಂತ್ಯಕ್ರಿಯೆ ರಾಷ್ಟ್ರವ್ಯಾಪಿ ಆಕ್ರೋಶವನ್ನು ಉಂಟುಮಾಡಿತ್ತು. ಈ ಹಿನ್ನಲೆಯಲ್ಲಿ ಹಥ್ರಾಸ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿಯನ್ನು ಬಂಧಿಸಿದ್ದಾರೆ.ಅಷ್ಟೇ ಅಲ್ಲದೇ ಅವರನ್ನು ನೆಲಕ್ಕೆ ತಳ್ಳಿ ಅಮಾನುಷವಾಗಿ ನಡೆಸಿಕೊಂಡಿದ್ದಾರೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್

'ನೀವು ನನ್ನನ್ನು ಏಕೆ ಬಂಧಿಸುತ್ತಿದ್ದೀರಿ? ಬಂಧನಕ್ಕೆ ಕಾರಣಗಳು ಯಾವುವು? ದಯವಿಟ್ಟು ಮಾಧ್ಯಮಗಳಿಗೆ ತಿಳಿಸಿ" ಎಂದು ರಾಹುಲ್ ಗಾಂಧಿ ಪೊಲೀಸರೊಂದಿಗೆ ಮಾತಿನ ಚಕಮಕಿಯಲ್ಲಿ ಕೇಳಿದರು, ಅವರು ಸೆಕ್ಷನ್ 188 ದೊಂದಿಗೆ ಆರೋಪ ಹೊರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.ದೃಶ್ಯಗಳಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನನ್ನು ತಡೆಯಲು ಪ್ರಯತ್ನಿಸುತ್ತಿದ್ದ ಪೊಲೀಸರನ್ನು ವಿರೋಧಿಸುತ್ತಿರುವುದು ಕಂಡುಬಂತು. ಪೊಲೀಸರು ನಂತರ ಅವರನ್ನು ಸ್ಥಳಾಂತರಿಸಿದರು.

'ಇದೀಗ ಪೊಲೀಸರು ನನ್ನನ್ನು ತಳ್ಳಿದರು, ಲಾಠಿ ಚಾರ್ಜ್ ಮಾಡಿ ನನ್ನನ್ನು ನೆಲಕ್ಕೆ ತಳ್ಳಿದರು. ನಾನು ಕೇಳಲು ಬಯಸುತ್ತೇನೆ, ಮೋದಿ ಜಿ ಮಾತ್ರ ಈ ದೇಶದಲ್ಲಿ ನಡೆಯಲು ಸಾಧ್ಯವೇ? ಸಾಮಾನ್ಯ ವ್ಯಕ್ತಿ ನಡೆಯಲು ಸಾಧ್ಯವಿಲ್ಲವೇ? ನಮ್ಮ ವಾಹನವನ್ನು ನಿಲ್ಲಿಸಲಾಯಿತು, ನಾವು ವಾಕಿಂಗ್ ಪ್ರಾರಂಭಿಸಿದ್ದೇವೆ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಹೇಳಿದರು.

More Stories

Trending News