ಪಿಎಫ್‌ಐ ನೆಲೆಗಳ ಮೇಲೆ ದಾಳಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ಮತ್ತೊಮ್ಮೆ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ದೆಹಲಿ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಅಸ್ಸಾಂ ಸೇರಿದಂತೆ 8 ರಾಜ್ಯಗಳಲ್ಲಿ ಪಿಎಫ್‌ಐನ  ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು ರಾಜ್ಯ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಅನೇಕ ರಾಜ್ಯಗಳ ಪೊಲೀಸರು ಪಿಎಫ್‌ಐ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ದೇಶದ ಎಂಟು ರಾಜ್ಯಗಳಲ್ಲಿ ಪಿಎಫ್‌ಐನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಕರ್ನಾಟಕದ ಬಾಗಲಕೋಟೆ, ರಾಯಚೂರು, ಶಿವಮೊಗ್ಗ, ಬೆಳಗಾವಿಯಲ್ಲಿಯೂ ಬೆಳ್ಳಂಬೆಳಿಗ್ಗೆ ಪಿಎಫ್ಐ ಕಾರ್ಯಕರ್ತರ ಸ್ಥಳಗಳಲ್ಲಿ ದಾಳಿ ನಡೆಸಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 


ಇದಲ್ಲದೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಗ್ಗೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಎಟಿಎಸ್ ದಾಳಿಗಳು ನಡೆಯುತ್ತಿವೆ. ಮೀರತ್-ಬುಲಂದ್‌ಶಹರ್‌ನಲ್ಲಿ ಅನೇಕ ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. 


ಇದನ್ನೂ ಓದಿ- Pilot Vs Gehlot: 'ಬಂಡಾಯ'ದ ಕುರಿತು ವಿಷಾಧ ವ್ಯಕ್ತಪಡಿಸಿದ ಗೆಹಲೋಟ್, ಇದನ್ನು ನಿರೀಕ್ಷಿಸಿರಲಿಲ್ಲ ಎಂದ ಸೋನಿಯಾ


ಪಿಎಫ್‌ಐ ವಿರುದ್ಧ ಮಹತ್ವದ ಸಾಕ್ಷ್ಯ :
ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಪಿಎಫ್ಐ ಅನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ. ಎನ್‌ಐಎ ಮತ್ತು ಇಡಿ ದಾಳಿಯ ವೇಳೆ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ನಿಷೇಧದ ಆಲೋಚನೆಯನ್ನು ಪರಿಗಣಿಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳು ಪಿಎಫ್ಐನ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿವೆ. 15 ರಾಜ್ಯಗಳಲ್ಲಿ 106 ಸ್ಥಳಗಳಲ್ಲಿ ಏಜೆನ್ಸಿಗಳ ದಾಳಿಗಳು ಮತ್ತು ಸಾಕ್ಷ್ಯಗಳನ್ನು ಪಡೆದ ನಂತರ, ಅನೇಕ ರಾಜ್ಯ ಸರ್ಕಾರಗಳು ಪಿಎಫ್ಐ ಅನ್ನು ನಿಷೇಧಿಸುವಂತೆ ಒತ್ತಾಯಿಸಿವೆ.


ಯುಎಪಿಎ ಅಡಿಯಲ್ಲಿ 5 ಎಫ್‌ಐಆರ್‌ಗಳು ದಾಖಲಾಗಿವೆ:
ಸೆಪ್ಟೆಂಬರ್ 22 ರಂದು, ಎನ್ಐಎ, ಇಡಿ ಮತ್ತು ರಾಜ್ಯ ಪೊಲೀಸರು ಪಿಎಫ್‌ಐಗೆ ಸಂಬಂಧಿಸಿದ 106 ಜನರನ್ನು ಬಂಧಿಸಿದ್ದಾರೆ. ಈ ಹಿಂದೆ ಪಿಎಫ್‌ಐ ಮೇಲೆ ಎನ್‌ಐಎ ಹಲವು ಎಫ್‌ಐಆರ್‌ಗಳನ್ನು ದಾಖಲಿಸಿತ್ತು. ಸೆಪ್ಟೆಂಬರ್ 22 ರಂದು, ದೇಶಾದ್ಯಂತ ಪಿಎಫ್ಐ ವಿರುದ್ಧದ ಕ್ರಮದಲ್ಲಿ, ಎನ್ಐಎ ಯುಎಪಿಎ ಅಡಿಯಲ್ಲಿ 5 ಎಫ್‌ಐಆರ್‌ಗಳನ್ನು ದಾಖಲಿಸಿದೆ.


ಇದನ್ನೂ ಓದಿ- PM Modi Japan Visit: ಜಪಾನ್ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ


ಏನಿದು ಪಿತೂರಿ ಪಿತೂರಿ?
ಪಿಎಫ್‌ಐ ವಿರುದ್ಧ ಮಹಾರಾಷ್ಟ್ರ ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಹಿಂದೆ ದೊಡ್ಡ ಕ್ರಮ ಕೈಗೊಂಡಿದೆ. ದೇಶಾದ್ಯಂತ ವಿವಿಧ ರಾಜ್ಯಗಳ ಪೊಲೀಸರು ಮತ್ತು ಎಟಿಎಸ್ ಸಹಾಯದಿಂದ ಪಿಎಫ್‌ಐನ ಅನೇಕ ಕಾರ್ಯಕರ್ತರನ್ನು ಎನ್‌ಐಎ ಬಂಧಿಸಿದೆ. ಈ ಕ್ರಮದಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರನ್ನು ಬಂಧಿಸಲಾಗಿದೆ.  ಬಂಧಿತ ಪಿಎಫ್‌ಐ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಮುಖಂಡರ ಮಾಹಿತಿಯನ್ನು ಪಿಎಫ್‌ಐ ಹೇಗೆ ಸಂಗ್ರಹಿಸುತ್ತಿದೆ ಎಂಬ ಬಗ್ಗೆಯೂ ಹಲವು ಬೆಚ್ಚಿಬೀಳಿಸುವ ಮಾಹಿತಿಗಳು ಬಹಿರಂಗಗೊಂಡಿವೆ ಎಂದು ಮೂಲಗಳು ತಿಳಿಸಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.