Congress President Election: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯದ ತಲೆದೋರಿದ ಬಳಿಕ ಇದೀಗ ಸಿಎಂ ಅಶೋಕ್ ಗೆಹ್ಲೋಟ್ ಅವರ ಸಂಕಷ್ಟಗಳು ಹೆಚ್ಚಾಗುತ್ತಿವೆ. ಗೆಹ್ಲೋಟ್ ಪರ ಶಾಸಕರ ಬಂಡಾಯದ ನಂತರ, ಕಾಂಗ್ರೆಸ್ ಅಧ್ಯಕ್ಷರ ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಬಗ್ಗೆ ಯಾವುದೇ ಸಾಮಾನ್ಯ ಅಭಿಪ್ರಾಯವಿಲ್ಲ ಎಂದು ನಂಬಲಾಗಿದೆ. ಹೀಗಿರುವಾಗ ದಿಗ್ವಿಜಯ್ ಸಿಂಗ್, ಕಮಲ್ ನಾಥ್, ಮುಕುಲ್ ವಾಸ್ನಿಕ್, ಕೆಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಅವರಂತಹ ದೊಡ್ಡ ನಾಯಕರು ಕಾಂಗ್ರೆಸ್ ಅಧ್ಯಕ್ಷ ರೇಸ್‌ನಲ್ಲಿ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕೇಂದ್ರ ನಾಯಕತ್ವದ ಅಂತಿಮ ನಿರ್ಧಾರಕ್ಕಾಗಿ ಅಶೋಕ್ ಗೆಹ್ಲೋಟ್ ಇನ್ನೂ ಕಾಯಬೇಕಾಗಲಿದೆ.
ಅಶೋಕ್ ಗೆಹ್ಲೋಟ್ ಇದೀಗ ಕಾಂಗ್ರೆಸ್ ಅಧ್ಯಕ್ಷರ ರೇಸ್‌ನಿಂದ ಹೊರಗುಳಿದಿದ್ದಾರೆ. ದಿಗ್ವಿಜಯ್ ಸಿಂಗ್ ಕೂಡ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಮಲ್ ನಾಥ್ ಅವರನ್ನೂ ಕೂಡ ದೆಹಲಿಗೆ ಕರೆಸಿಕೊಳ್ಳಲಾಗಿದೆ. ಇವುಗಳಲ್ಲದೆ ಸಿಡಬ್ಲ್ಯುಸಿ ನಡೆಯುವ ಮುನ್ನ ಜಿ-23 ಪತ್ರದಲ್ಲಿ ಮುಕುಲ್ ವಾಸ್ನಿಕ್ ಅವರ ಹೆಸರನ್ನು ಕೂಡ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿತ್ತು.
ಇದೀಗ ಈ ನಾಯಕರು ಚರ್ಚೆಯಲ್ಲಿದ್ದಾರೆ
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಯ್ಕೆ ಸುಶೀಲ್ ಕುಮಾರ್ ಶಿಂಧೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಾದ ಕೆಲವು ನಾಯಕರು. ಅಶೋಕ್ ಗೆಹ್ಲೋಟ್ ಕೇಂದ್ರ ನಾಯಕತ್ವದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಪರಿಸ್ಥಿತಿ ಉದ್ಭವಿಸಿದ್ದೇಕೆ?
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ರಾಜಸ್ಥಾನದ ಗೆಹ್ಲೋಟ್ ಪಾಳೆಯದ ಶಾಸಕರ ಬಂಡಾಯದ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಹೆಸರು ಕೇಳಿಬಂದಿತ್ತು. ಕಾಂಗ್ರೆಸ್‌ನಲ್ಲಿ 'ಒಬ್ಬ ವ್ಯಕ್ತಿ-ಒಂದು ಹುದ್ದೆ' ಎಂಬ ನಿಯಮ ಬಂದಿರುವ ಹಿನ್ನೆಲೆ, ಸಿಎಂ ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷರಾದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಲಿದೆ.
ಶಾಸಕಾಂಗ ಪಕ್ಷದ ಸಭೆ ರದ್ದು
ಸಿಎಂ ಬದಲಾವಣೆಯ ಚರ್ಚೆಯ ಮಧ್ಯೆಯೇ ನಿನ್ನೆ ಜೈಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿತ್ತು. ಇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ಪರಿವೀಕ್ಷಕರು ಮತ್ತು ಉಸ್ತುವಾರಿಗಳನ್ನಾಗಿ ಕಾಂಗ್ರೆಸ್ ನೇಮಿಸಿತ್ತು. ಆದರೆ ಈ ಸಭೆ ನಡೆಯಲು ಸಾಧ್ಯವಾಗಲಿಲ್ಲ. ಅಶೋಕ್ ಗೆಹ್ಲೋಟ್ ಬದಲಿಗೆ ಸಚಿನ್ ಪೈಲಟ್ ಅವರನ್ನು ಸಿಎಂ ಮಾಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ-BJP ಯಲ್ಲಿ ಹೊಸ ಅಧ್ಯಕ್ಷರಿಗಾಗಿ ಚುನಾವಣೆ ಇಲ್ಲ, ಜೆ.ಪಿ ನಡ್ದಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಕೆ!
ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಪರಿವೀಕ್ಷಕರು
ಗೆಹ್ಲೋಟ್ ಶಿಬಿರದ ಶಾಸಕರು ಪೈಲಟ್ ಹೆಸರನ್ನು ಸಿಎಂ ಸ್ಥಾನಕ್ಕೆ ಒಪ್ಪುತ್ತಿಲ್ಲ. ಇದನ್ನು ವಿರೋಧಿಸಿ 80ಕ್ಕೂ ಹೆಚ್ಚು ಶಾಸಕರು ತಮ್ಮ ಸಾಮೂಹಿಕ ರಾಜೀನಾಮೆಯನ್ನು ಸ್ಪೀಕರ್‌ಗೆ ಸಲ್ಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಡುವೆ ಪರಿವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಇಬ್ಬರೂ ದೆಹಲಿಗೆ ವಾಪಸಾಗಿದ್ದರು. ಇಂದು ಇಬ್ಬರೂ ನಾಯಕರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪರಿವೀಕ್ಷಕರಿಗೆ ಲಿಖಿತ ವರದಿ ಸಲ್ಲಿಸುವಂತೆ ಸೂಚಿಸಿದ್ದು. ಪರಿವೀಕ್ಷಕರು ನಾಳೆಯವರೆಗೆ ಸಂಪೂರ್ಣ ವರದಿಯನ್ನು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ-ಸಚಿನ್ ಪೈಲೆಟ್ ಗೆ ರಾಜಸ್ತಾನದ ಸಿಎಂ ಪಟ್ಟ?
ಗೆಹಲೋಟ್ ಬಣದ ಎಲ್ಲಾ ಬೇಡಿಕೆಗಳು ತಿರಸ್ಕೃತ
ಇಂದು ಸಂಜೆ ನಡೆದ ಹಠಾತ್ ಬೆಳವಣಿಗೆಯಲ್ಲಿ ಅಶೋಕ್ ಗೆಹಲೋಟ್ ಬಣದ ಎಲ್ಲಾ ಬೇಡಿಕೆಗಳನ್ನು ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹಲೋಟ್ ಇಬ್ಬರಿಗೂ ಕೂಡ ದೆಹಲಿಗೆ ಬುಲಾವ್ ಕಳುಹಿಸಲಾಗಿದೆ ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.